ಹಿಂದೂಗಳು ಕೇವಲ ಒಂದು ಅಥವಾ ಎರಡು ಮಕ್ಕಳಿಗೆ ಜನ್ಮ ನೀಡಿದರೆ ಸಾಕಾಗುವುದಿಲ್ಲ ಮತ್ತು ಮುಸ್ಲಿಂ ಜನಸಂಖ್ಯೆಯು ಭಾರತದಲ್ಲಿ ಹಿಂದೂಗಳನ್ನು ಮೀರಿಸುತ್ತದೆ ಎಂದು ಹೇಳುವ ಮೂಲಕ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೊಸ ವಿವಾದಕ್ಕೆ ನಾಂದಿಯಾಡಿದ್ದಾರೆ.
ದಕ್ಷಿಣ ಕನ್ನಡ (ಜ.9): ಹಿಂದೂಗಳು ಕೇವಲ ಒಂದು ಅಥವಾ ಎರಡು ಮಕ್ಕಳಿಗೆ ಜನ್ಮ ನೀಡಿದರೆ ಸಾಕಾಗುವುದಿಲ್ಲ ಮತ್ತು ಮುಸ್ಲಿಂ ಜನಸಂಖ್ಯೆಯು ಭಾರತದಲ್ಲಿ ಹಿಂದೂಗಳನ್ನು ಮೀರಿಸುತ್ತದೆ ಎಂದು ಹೇಳುವ ಮೂಲಕ ಉಡುಪಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಹೊಸ ವಿವಾದಕ್ಕೆ ನಾಂದಿಯಾಡಿದ್ದಾರೆ.
ಜನವರಿ 7ರಂದು ಬೆಳ್ತಂಗಡಿ ತಾಲೂಕಿನ ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ಸಿಗರೇ ನಿಜವಾದ ಹಿಂದುಗಳು: ಸಚಿವ ರಾಮಲಿಂಗಾರೆಡ್ಡಿ
'ಭಾರತದಲ್ಲಿ ಹಿಂದೂಗಳ ಜನಸಂಖ್ಯೆ 80 ಕೋಟಿ ಮತ್ತು ಮುಸ್ಲಿಮರು ಕೇವಲ 20 ಕೋಟಿ ಇದ್ದಾರೆ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನೀವು ಇನ್ನೊಂದು ದಿಕ್ಕಿನಲ್ಲಿ ಯೋಚಿಸಬೇಕಿದೆ. ಮುಸ್ಲಿಮರು ಸಂಖ್ಯೆಯಲ್ಲಿ ಕಡಿಮೆಯಿದ್ದಾರೆ ಮತ್ತು ಅವರು ಯಾವುದೇ ಹಾನಿ ಮಾಡುವುದಿಲ್ಲ ಎಂಬುದು ನಮ್ಮ ನಂಬಿಕೆ. ಆದರೆ, ಮುಸ್ಲಿಮರು ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಮತ್ತು ಹಿಂದೂಗಳು ಹೆಚ್ಚಾಗಿ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿದ್ದಾರೆ. 20 ಕೋಟಿ ಇರುವ ಮುಸ್ಲಿಮರು ತಲಾ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ ಅವರ ಜನಸಂಖ್ಯೆ 80 ಕೋಟಿಯಾಗುತ್ತದೆ. ನಮ್ಮ ಜನಸಂಖ್ಯೆ 20 ಕೋಟಿಗೆ ಇಳಿಯಲಿದೆ' ಎಂದು ಹೇಳಿದ್ದಾರೆ.
ನಿಖಿಲ್ ಬೈಕ್ ಡಿಕ್ಕಿ ಹೊಡೆದಿದ್ದು ನಟ ಯಶ್ ಬೆಂಗಾವಲು ವಾಹನಕ್ಕಲ್ಲ, ಬೇರೆ ಕರ್ತವ್ಯದಲ್ಲಿದ್ದ ಪೊಲೀಸ್ ಜೀಪಿಗೆ!
ಹೀಗೆ ಮುಂದುವರಿದರೆ, ಮುಸ್ಲಿಂ ಜನಸಂಖ್ಯೆಯು 80 ಕೋಟಿಯನ್ನು ಮುಟ್ಟುತ್ತದೆ ಮತ್ತು ಹಿಂದೂಗಳ ಸಂಖ್ಯೆ ಕ್ಷೀಣಿಸುತ್ತದೆ. ಆಗ ದೇಶದಲ್ಲಿ ಹಿಂದೂಗಳ ದುಸ್ಥಿತಿಯನ್ನು ನೀವು ಊಹಿಸಬಹುದೇ? ಈ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ, ಹಿಂದೂಗಳ ಸಂಕಷ್ಟ ಹೇಗಿರುತ್ತದೆ ಎಂಬ ಬಗ್ಗೆ ನೀವು ಮನೆಯಲ್ಲಿ ಕುಳಿತು ಯೋಚಿಸಬೇಕು' ಎಂದು ಪೂಂಜಾ ಮನವಿ ಮಾಡಿದ್ದಾರೆ.