ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡರಿಗೆ ಐಟಿ ನೋಟೀಸ್ ನೀಡಿದ್ದು, ಪುತ್ರ ಹೆಚ್ ಡಿ ರೇವಣ್ಣ ಕಿಡಿಕಾರಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್ ಡಿ ರೇವಣ್ಣ, ಉದ್ದೇಶಪೂರ್ವಕವಾಗಿ ನಮ್ಮ ತಾಯಿಗೆ ನೋಟೀಸ್ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಕೆ.ಎಂ ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್
ಹಾಸನ (ಮಾ.28): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ (HD Deve Gowda) ಪತ್ನಿ ಚನ್ನಮ್ಮ ದೇವೇಗೌಡರಿಗೆ (Channamma) ಐಟಿ ನೋಟೀಸ್ (IT Notice) ನೀಡಿದ್ದು, ಪುತ್ರ ಹೆಚ್ ಡಿ ರೇವಣ್ಣ (HD Revanna) ಕಿಡಿಕಾರಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೆಚ್ ಡಿ ರೇವಣ್ಣ, ಉದ್ದೇಶಪೂರ್ವಕವಾಗಿ ನಮ್ಮ ತಾಯಿಗೆ ನೋಟೀಸ್ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಜಮೀನನಲ್ಲಿ ಕಬ್ಬು ಬೆಳೆಯುತ್ತಿದ್ದೇವೆ, ಅದನ್ನು ನೋಡಬೇಕು. ಅದನ್ನು ನೋಡದೆ ನಮ್ಮ ತಾಯಿಗೆ ನೋಟೀಸ್ ಕೊಟ್ಟಿದ್ದಾರೆ. ಆರ್.ಟಿ.ಓ.ದಲ್ಲಿ ನೂರು ಕೋಟಿ ಇನ್ನೂರು ಕೋಟಿ ಲೂಟಿ ಹೊಡೀತಿದ್ದಾರೆ, ಅವರಿಗೇಕೆ ನೋಟೀಸ್ ನೀಡಲ್ಲ ಎಂದು ಪ್ರಶ್ನಿಸಿದ್ದಾರೆ.
undefined
ಒಂದು ಎಕರೆ ಏನು, ಎಷ್ಟು ಬೆಳೆ ಬೆಳೆಯುತ್ತೇವೆ ಬಂದು ನೋಡಲಿ.ನಾನು ಸರ್ವೆ ಮಾಡಿ ಬಿಲ್ ಕೊಟ್ಟರೆ ಸರಿಯಾಗಲ್ಲ, ಡಿಸಿಯರೇ ಆ್ಯಪ್‌ನಲ್ಲಿ ಸರ್ವೆ ಮಾಡಿಸಲಿ. ನಮ್ಮ ಅಪ್ಪ, ಅಮ್ಮ ಏನಾದ್ರು ಕೋಟ್ಯಾಂತರು ರೂ ಆಸ್ತಿ ಮಾಡಿದ್ದಾರಾ. ನೋಟಿಸ್ ಕೊಟ್ಟಿದ್ದಾರೆ ಉತ್ತರ ಕೊಡ್ತೀವಿ. ನಮಗೂ ಕಾಲ ಬರುತ್ತೆ, ಇದೇ ಏನು ಶಾಶ್ವತವಾಗಿ ಇರಲ್ಲ. ಏನಾದ್ರು ಕದ್ದು ವ್ಯವಸಾಯ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದ್ದಾರೆ. ಬೇಕಾದ್ರೆ ಡ್ರೋಣ್ ಸರ್ವೆ ಮಾಡಲಿ, ದೊಡ್ಡಪುರ, ಪಡುವಲಹಿಪ್ಪೆ ಹತ್ತಿರ ಇದೆ, ನಾನೇನು ಹೊಸದಾಗಿ ಆಸ್ತಿ ಮಾಡಲು ಹಾಗೂ ಸೈಟ್ ಬ್ಯುಸಿನೆಸ್ ಮಾಡಲು ಹೋಗಿದ್ದೇನಾ?
HD Devegowda: ನನ್ನನ್ನು ಪ್ರಧಾನಿಯಾಗಿಸಿದ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ
ಹಾಸನ ನಗರದಲ್ಲಿ ನಗರಸಭೆಯಿಂದ ಸೈಟ್ ಮಾಡಲು ಹೋಗಿದ್ದೇನಾ ಎಂದು ಪ್ರಶ್ನಿಸಿದ್ದಾರೆ. ಒಂದು ಪಕ್ಷವನ್ನು ಗುರಿ ಇಟ್ಟುಕೊಂಡು ಮಾಡಲು ಹೋಗಬೇಡಿ. ಕಾನೂನು ರೀತಿ ಏನಿದೆ ನೋಟೀಸ್ ಕೊಡಿ, ನನಗೂ ಕೊಡಿ ಎಂದು ಸವಾಲೆಸಿದಿದ್ದಾರೆ. ಕೆಲವರು ಆರ್.ಟಿ.ಓ.ನಲ್ಲಿ ಲೂಟಿ ಮಾಡಿ ಕೆಲಸಕ್ಕೆ ರಾಜೀನಾಮೆ ನೀಡಿ ಬಂದು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಎಲೆಕ್ಷನ್‌ಗೆ ನಿಲ್ಲುತ್ತಿದ್ದಾರೆ. ಅಂತಹವರಿಗೆ ನೋಟೀಸ್ ಕೊಡುತ್ತಿಲ್ಲ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿದ್ದಾರೆ.
IT ನೋಟಿಸ್‌ಗೆ ಹೆಚ್‌ಡಿಕೆ ತಿರುಗೇಟು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮಾಗೆ ಐಟಿ ಇಲಾಖೆ ನೋಟಿಸ್ ನೀಡಿದೆ. ಆಕ್ರಮ ಆಸ್ತಿ ಗಳಿಕೆ ಆರೋಪಡಿ ನೋಟಿಸ್ ನೀಡಿದೆ. ಇತ್ತ ಪುತ್ರ ರೇವಣ್ಣ ಕೆಂಡಾಮಂಡಲರಾಗಿದ್ದರೆ, ಹೆಚ್ ಡಿ ಕುಮಾರಸ್ವಾಮಿ (HD Kumaraswamy) ತಕ್ಕ ತಿರುಗೇಟು ನೀಡಿದ್ದಾರೆ. ದೇವೇಗೌಡರ ರಾಜಕೀಯ ಜೀವನದಲ್ಲಿ ಹಣಕ್ಕೆ ಹೆಚ್ಚಿನ ಬೆಲೆ ನೀಡಿದವರಲ್ಲ. ಗೌಡರ ಕುಟುಂಬ ತೆರೆದ ಪುಸ್ತಕ. ನೋಟಿಸ್‌ನಿಂದ ತಲೆಕೆಡಿಸಿಕೊಳ್ಳಬೇಕಿಲ್ಲ. ಇದನ್ನು ರಾಜಕೀಯಕ್ಕೆ ಬಳಕೆ ಮಾಡುವ ಅವಶ್ಯಕತೆಯೂ ಇಲ್ಲ. ನೋಟಿಸ್‌ಗೆ ಉತ್ತರ ನೀಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ದೇವೇಗೌಡರ ಪುತ್ರಿ ಒಡೆತನದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ನಾನೇನು ಮತ್ತೆ ಪ್ರಧಾನಿ ಆಗಬೇಕಿಲ್ಲ: ಬೆಂಗಳೂರಿನಲ್ಲಿರುವ ಜೆಡಿಎಸ್ (JDS) ಮುಖ್ಯ ಕಚೇರಿಯಲ್ಲಿ ಶನಿವಾರ ಮಾಜಿ ಪ್ರಧಾನಿ ದೇವೇಗೌಡ (HD devegowda) ಸುದ್ದಿಗೋಷ್ಠಿ ನಡೆಸಿದ್ದು, ನಾನೇನು ಮತ್ತೆ ಪ್ರಧಾನಿ ಆಗಬೇಕಿಲ್ಲ. ಈ ಪಕ್ಷ ಉಳಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯದ ರಾಜಕೀಯ (Politics) ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಹೆಚ್‌ಡಿಡಿ, ಐದು ರಾಜ್ಯಗಳ ಚುನಾವಣಾ ಫಲಿತಾಂಶ ಎಲ್ಲರಿಗೂ ಗೊತ್ತಿದೆ. ನಮ್ಮದು ಪ್ರಾದೇಶಿಕ ಪಕ್ಷ , ಉಳಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದೆ. ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್ (Congress), ಅದನ್ನು ಹೀಯಾಳಿಸಲು ಈ ಸುದ್ದಿಗೋಷ್ಟಿ ಕರೆದಿಲ್ಲ. ಬಿಜೆಪಿ (BJP) ಮೊದಲ ಬಾರಿಗೆ ಮೋದಿ ನೇತೃತ್ವದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇಲ್ಲಿವರೆಗೂ ಆ ಸರ್ಕಾರವನ್ನು ಏನೂ ಮಾಡಲು ಆಗಲಿಲ್ಲ ಎಂಬುವುದು ವಾಸ್ತವ ಎಂದಿದ್ದಾರೆ.