ಸ್ವಾತಂತ್ರ್ಯ ದಿ‌ನಾಚರಣೆಯಂದು ಅಂಗಾಂಗ ದಾನಿಗಳ ಕುಟುಂಬಗಳನ್ನ ಗೌರವಿಸುವುದು ಕಡ್ಡಾಯ: ಸಚಿವ ದಿ‌ನೇಶ್ ಗುಂಡೂರಾವ್

By Govindaraj SFirst Published Aug 3, 2024, 10:28 PM IST
Highlights

ಅಂಗಾಂಗ ದಾನಿಗಳ ಸಂಖ್ಯೆಯನ್ನ ಹೆಚ್ವಿಸುವತ್ತ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುವ ಆರೋಗ್ಯ ಇಲಾಖೆ ಬೆಳಗಾವಿಯಲ್ಲಿ ಇಂದು ಭಾರತೀಯ ಅಂಗಾಂಗ ದಾನ ದಿನಾಚಾರಣೆಯನ್ನ ಆಚರಿಸಿತು.

ಬೆಂಗಳೂರು (ಆ.03): ಅಂಗಾಂಗ ದಾನಿಗಳ ಸಂಖ್ಯೆಯನ್ನ ಹೆಚ್ವಿಸುವತ್ತ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿರುವ ಆರೋಗ್ಯ ಇಲಾಖೆ ಬೆಳಗಾವಿಯಲ್ಲಿ ಇಂದು ಭಾರತೀಯ ಅಂಗಾಂಗ ದಾನ ದಿನಾಚಾರಣೆಯನ್ನ ಆಚರಿಸಿತು. ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಂಗಾಂಗ ದಾನಿಗಳ ಕುಟುಂಬಗಳನ್ನ ಸನ್ಮಾನಿಸಿ ಗೌರವಿಸುವುದರ ಜೊತೆಗೆ ರಾಜ್ಯ ಸರ್ಕಾರದ ಪ್ರಶಂಸಾ ಪತ್ರ ವಿತರಿಸಿದರು.‌ ಬಳಿಕ ಮಾತನಾಡಿದ ಆರೋಗ್ಯ ಸಚಿವರು, ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೂ, ದಾನಿಗಳ ಸಂಖ್ಯೆ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದರು. 

ಸಾವಿನ ಅಂಚಿನಲ್ಲಿರುವಾಗ ಇನ್ನೊಬ್ಬರ ಜೀವ ಉಳಿಸಲು ಅಂಗಾಂಗ ದಾನ ಮಾಡುವ ನಿರ್ಣಯ ಕೈಗೊಳ್ಳುವುದು ನಿಜಕ್ಕೂ ಪುಣ್ಯದ ಕೆಲಸ. ಅಂಗಾಂಗಗಳಿಗೆ ಇಂದು ಹೆಚ್ಚು ಬೇಡಿಕೆಯಿದೆ.‌ ಆದರೆ ಬೇಡಿಕೆಗೆ ತಕ್ಕಂತೆ ಅಂಗಾಂಗಗಳ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸುಮಾರು 8500 ರೋಗಿಗಳು ಇಂದು ಅಂಗಾಂಗಗಳಿಗೆ ಕಾಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ನಾವೆಲ್ಲರು ಇಂದು ಪ್ರತಿಜ್ಞೆ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. 

Latest Videos

ಯಾದಗಿರಿ ಪಿಎಸ್ಐ ಸಾವು ಪ್ರಕರಣ: ತನಿಖೆ ನಂತರ ಸತ್ಯಾಂಶ ಬಯಲು: ಸಚಿವ ಪರಮೇಶ್ವರ್

ಅಂಗಾಂಗ ದಾನವನ್ನ ಪ್ರೇರಿಪಸಲು ಆರೋಗ್ಯ ಇಲಾಖೆ ವಿಭಿನ್ನ ಪ್ರಯತ್ನಗಳನ್ನ ಮಾಡುತ್ತಿದೆ.‌ ಅಂಗಾಂಗ ದಾನಿಗಳ ಕುಟುಂಬಗಳನ್ನ ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಂಡಿದ್ದು, ಇನ್ಮುಂದೆ ದಾನಿಗಳ ಮನೆಗಳಿಗೇ ಆರೋಗ್ಯ ಇಲಾಖೆ ಅಧಿಕಾರಿಗಳು ತೆರಳಿ ಸನ್ಮಾನಿಸಲಿದ್ದಾರೆ. ಅಲ್ಲದೇ ವಿಶೇಷವಾಗಿ ಸ್ವಾತಂತ್ರ್ಯ ದಿನಾಚಾರಣೆಯ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂಗಾಂಗ ದಾನಿಗಳನ್ನ ಸನ್ಮಾನಿಸಿ ಗೌರವಿಸುವಂತೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.  ಅಂಗಾಂಗ ದಾನಕ್ಕೆ ಯಾವುದೇ ಧರ್ಮದಲ್ಲಿ ಅಡ್ಡಿ ಇಲ್ಲ. ಅಂಗಾಂಗ ದಾನ ಮಾಡಿದರೆ ಪುನರ್ಜನ್ಮಕ್ಕೆ ತೊಂದರೆಯಾಗುತ್ತೆ ಎಂಬ ಕೆಲ ಮೂಢನಂಬಿಕೆಗಳು ಜನರಲ್ಲಿವೆ. 

ಪುನರ್ಜನ್ಮ ಗ್ಯಾರಂಟಿ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಆದ್ರೆ ನೀವು ಮಾಡುವ ಅಂಗಾಂಗ ದಾನದಿಂದ ಇನ್ನೊಬ್ಬರ ಜೀವ ಉಳಿಯುವುದು ಗ್ಯಾರಂಟಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.  2023 ನೇ ಸಾಲಿನಲ್ಲಿ 178 ಅಂಗಾಂಗ ದಾನ ನಡೆದಿದ್ದು ಕರ್ನಾಟಕ ರಾಜವು ದೇಶದಲ್ಲಿ 2 ನೇ ಸ್ಥಾನದಲ್ಲಿದೆ.‌ ಆದರೆ ಅಂಗಾಂಗ ಕಸಿಗಾಗಿ ಕಾಯುತಿರುವವರ ಸಂಖ್ಯೆಗೂ ಅಂಗಾಂಗಗಳ ಪೂರೈಕೆಗು ಅಜ ಗಜಾಂತರ ಅಂತರವಿದೆ. ಅತ್ಯಂತ ಬೇಡಿಕೆಯುಳ್ಳ, ಅಂಗ ಎಂದರೆ ಮೂತ್ರಪಿಂಡ, ಒಟ್ಟಾರೆಯಾಗಿ 8,500 ಕ್ಕೂ ಹೆಚ್ಚು ಜನರು ಅಂಗಾಂಗಳಿಗಾಗಿ ಜೀವಸಾರ್ಥಕತೆಯಲ್ಲಿ ನೋಂದಾಯಿಸಿಕೊಂಡಿರುತ್ತಾರೆ.

ಮೆದುಳು ನಿಷ್ಕ್ರಿಯವಾದ ಒಬ್ಬ ಮಾನವನ ಅಂಗಾಂಗ ದಾನ ಮಾಡುವುದರ ಮೂಲಕ 8 ಜನರ ಜೀವ ಉಳಿಸಬಹುದಾಗಿದೆ. ಚರ್ಮ, ಮೂಳೆ, ಅಸ್ಥಿಮಜ್ಜೆ ಹೃದಯದ ಕವಾಟಗಳು ಇತ್ಯಾದಿ ಅಂಗಾಂಶಗಳನ್ನ ದಾನ ಮಾಡುವುದರ ಮೂಲಕ 50ಕ್ಕೂ ಹೆಚ್ಚು ರೋಗಿಗಳಿಗೆ ಗುಣಮಟ್ಟದ ಜೀವನ ನೀಡಬಹುದು. ಅಂಗಾಂಗ ದಾನ ಪ್ರತಿಜ್ಞೆಯಲ್ಲಿ ದೇಶದಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ 63 ಸಾವಿರಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿರುತ್ತಾರೆ. ಪ್ರತಿಜ್ಞೆ ಮಾಡುವುದರಲ್ಲಿ ಮಹಿಳೆಯರೇ ಮುಂಚೂಣಿಯಲಿರುತ್ತಾರೆ. QR code scan ಮಾಡುವ ಮೂಲಕ ಎಲ್ಲಿಂದಲಾದರೂ ನೀವು ಬಯಸಿದ ಅಂಗಾಂಗಗಳು ಮತ್ತು ಅಂಗಾಂಶಗಳ ದಾನಕ್ಕೆ ಪ್ರತಿಜ್ಞೆ ಮಾಡಬಹುದಾಗಿದೆ.

ರಾಜ್ಯದಲ್ಲಿ ಸುಮಾರು 78 ಕ್ಕೂ ಹೆಚ್ಚು ಅಂಗಾಂಗ ಕಸಿ ಕೇಂದ್ರ ಜೀವಸಾರ್ಥಕತೆ ಅಡಿಯಲ್ಲಿ ನೋಂದಾಯಿಸಿಕೊಂಡಿರುತ್ತವೆ. ಇದರಲ್ಲಿ ಬೆಳಗಾವಿ ವಿಭಾಗದಲ್ಲಿ ಏಳು ಆಸತ್ರೆಗಳಲ್ಲಿ ಅಂಗಾಂಗ ಕಸಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿನ ಕೆ.ಎಲ್.ಇ ಆಸತ್ರೆ,  ಕಿಡ್ನಿ, ಲಿವರ್, ಹೃದಯ ಅಂಗಾಂಗ ಕಸಿ ಸೌಲಭ್ಯ ಲಭ್ಯವಿದೆ. ಹುಬ್ಬಳ್ಳಿ ಕೀಮ್ಸ್ ನಲ್ಲಿ ಇದುವರೆಗೂ 27 Kidney ಅಂಗಾಂಗ ಕಸಿ ಮಾಡಲಾಗಿದೆ. ಎಲ್ಲಾ ವೈದ್ಯಕೀಯ ಕಾಲೇಜಿನ ಆಸತ್ರೆಗಳನ್ನು ಜಿಲ್ಲಾ ಆಸತ್ರೆಗಳನ್ನು NTHORC-Non Transplant Human Organ Retrieval Centers ಆಗಿ ಸ್ಥಾಪಿಸಲು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ 26 NTHORC ಗಳನ್ನು ನೋಂದಾಯಿಸಲಾಗಿದೆ. ಅವುಗಳಲ್ಲಿ ನಿಮಾನ್ಸ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಟ್ರಾಮಾ ಕೇರ್ ಕೂಡ ಸೇರಿದೆ. 

ಕೆಆರ್‌ಎಸ್‌ ಜಲಾಶಯದಲ್ಲಿ ಹೆಚ್ಚಾದ ನೀರು: ಪಕ್ಕದಲ್ಲೇ ಮಳೆ ಕೊರತೆಯಿಂದ ಕೆರೆಗಳು ಖಾಲಿ ಖಾಲಿ!

Institute Of Nephro Urology (NU) ಮತ್ತು Institute of Gastroenterology Sciences & Organ Transplant (IGOT) ನಡೆಯುತ್ತಿವೆ.  ಇಲ್ಲಿಯವರೆಗೆ 281 ಬಿಪಿಎಲ್ ರೋಗಿಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿಂದ ಅಂಗಾಂಗ ಕಸಿ  ವೆಚ್ಚ ಭರಿಸಲಾಗಿದೆ. ಯಾವ ಧರ್ಮದಲ್ಲೂ ಅಂಗಾಂಗ ದಾನ ನಿಷಿದ್ಧವಿಲ್ಲ, ಕರ್ನಾಟಕ ರಾಜ್ಯದಲ್ಲೇ ಎಲ್ಲಾ ಧರ್ಮದವರು ಅಂಗಾಂಗ ದಾನ ಮಾಡಿರುವ ನಿದರ್ಶನಗಳಿವೆ. ಕೆ.ಎಲ್.ಇ ಆಸ್ಪತ್ರೆಯ ವೈದ್ಯರುಗಳು ನಡೆಸಿರುವ ವಿಶೇಷ ಅಂಗಾಂಗ ಕಸಿಯಲ್ಲಿ ಯಾವುದೇ ಧರ್ಮದ ತಾರತಮ್ಯವಿಲ್ಲದೆ ಹಿಂದೂ ಹೃದಯ ದಾನಿಯಿಂದ ಪಡೆದ ಅಂಗವನ್ನು ಕ್ರಿಶ್ಚಿಯನ್ ವೈದ್ಯರು ಮುಸ್ಲಿಂ ರೋಗಿಯ ದೇಹಕ್ಕೆ ಕಸಿ ಮಾಡಿ ಭಾವೈಕತೆ ಸಾರಿದ್ದಾರೆ.

click me!