ಚಂದ್ರಯಾನ 3 ಯಶಸ್ವಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಗುರುವಾರ ತಿರುಪತಿಯ ವೆಂಕಟಾಚಲಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಜು.14) : ಚಂದ್ರಯಾನ 3 ಯಶಸ್ವಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಗುರುವಾರ ತಿರುಪತಿಯ ವೆಂಕಟಾಚಲಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ವಿಜ್ಞಾನಿಗಳ ನಡೆಗೆ ಪ್ರಗತಿಪರ ಚಿಂತಕರು ಖಂಡನೆ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ 3 ಮಾದರಿ ಜೊತೆ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದ ಇಸ್ರೋ ವಿಜ್ಞಾನಿಗಳು ತಂಡ. ಇದಕ್ಕೆ ಡಾ. ಮೂಡ್ನಾಕಡು ಚಿನ್ನಸ್ವಾಮಿ, ಪ್ರೊ ಅಲ್ಲಮಪ್ರಭು ಬೆಟ್ಟದೂರು, ಡಾ. ವೆಂಕಟಯ್ಯ ಅಪ್ಪಗೆರೆ, ಕೆ.ಬಿ ಮಹದೇವಪ್ಪ ಸೇರಿದಂತೆ ಹಲವು ಸಾಹಿತಿಗಳ ವಿರೋಧ ವ್ಯಕ್ತಪಡಿಸಿದರು.
ಚಂದ್ರಯಾನ 3 ಉಡಾವಣೆಗೆ ಸಕಲ ಸಿದ್ದತೆ: ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾದ ವಿಜ್ಞಾನಿಗಳು
ಆತ್ಮ ಸ್ಥೈರ್ಯ ಮತ್ತು ಸಂಶೋದನೆ ಬಗ್ಗೆ ಅನುಮಾನ ಮೂಡುತ್ತದೆ ಎಂದ ಸಾಹಿತಿಗಳು ತಂತ್ರಜ್ಞಾನ ಇಷ್ಟು ಮುಂದುವರೆದಿದ್ದರೂ ಧಾರ್ಮಿಕ ನಂಬಿಕೆ ಮೊರೆ ಹೋಗಿರುವುದಕ್ಕೆ ಆಕ್ರೋಶ ಹೊರಹಾಕಿದ್ದರಲ್ಲದೇ ವಿಜ್ಞಾನಿಗಳೆನಿಸಿಕೊಂಡವರ ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕು ತಪ್ಪಿಸುತ್ತದೆ ಎಂದಿದ್ದಾರೆ..
ಇಂದು ಮಧ್ಯಾಹ್ನ 2ಗಂಟೆ 35 ನಿಮಿಷ 17ಸೆಕೆಂಡಿಗೆ ಶ್ರೀಹರಿಕೋಟಾ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿರುವ ಚಂದ್ರಯಾನ -3. ಆಗಸ್ಟ್ ನಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ಲ್ಯಾಂಡರ್ ಮಿಷನ್.
ಇಸ್ರೋ ವಿಜ್ಞಾನಿಗಳು ಪ್ರಮುಖ ಕಾರ್ಯಾಚರಣೆಗೆ ಸಿದ್ಧಗೊಳ್ಳಲು ತಿರುಪತಿ ತಿಪ್ಪಪ್ಪನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಿಂದೆ ಪೂಜೆ ಸಲ್ಲಿಸಿ ಉಡಾವಣೆ ಮಾಡಿರುವ ವಿಜ್ಞಾನಿಗಳು.
Chayan Dutta: ಅಸ್ಸಾಂ ವಿಜ್ಞಾನಿ ಹೆಗಲಿಗೆ ಚಂದ್ರಯಾನ-3 ಲಾಂಚ್‌ನ ನೇತೃತ್ವ