ಜೈಲಲ್ಲಿದ್ದ ಶಂಕಿತ ಉಗ್ರ ಸಾದಿಕ್‌ ಬಾಷಾ ಸಾವು; ಭಾರತದ ಮೇಲೆ ಇವನು ನಡೆಸಿದ್ದ ಸ್ಕೆಚ್ ಎಂತಹದ್ದು ಗೊತ್ತಾ?

Kannadaprabha News, Ravi Janekal |   | Kannada Prabha
Published : Feb 08, 2026, 08:09 AM IST
ISIS Suspect Sadiq Basha Dies in Jail What Was His Dangerous Plot Against India

ಸಾರಾಂಶ

ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸುತ್ತಿದ್ದ ಆರೋಪದ ಮೇಲೆ ಎನ್‌ಐಎಯಿಂದ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಸಾದಿಕ್ ಬಾಷಾ, ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಉಗ್ರ ಯಾರು ಗೊತ್ತಾ?

ಬೆಂಗಳೂರು (ಫೆ.8): ಐಸಿಸ್ ಚಟುವಟಿಕೆಗಳನ್ನು ವಿಸ್ತರಿಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಕೋಲಾರದ ಸೊನ್ನೇನಹಳ್ಳಿ ನಿವಾಸಿ ಸಾದಿಕ್ ಬಾಷಾ (47) ಮೃತ ಕೈದಿ. ಸದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ ಆರೋಪದ ಮೇಲೆ ಸಾಧಿಕ್‌ ಬಾಷಾ ಸೇರಿ ಇತರರನ್ನು ಬಂಧಿಸಲಾಗಿತ್ತು.

ದೇಶದ ವಿವಿಧೆಡೆ ದಾಳಿಗೆ ಸಂಚು ಮಾಡಿದ್ದ ಉಗ್ರ!

ದೇಶದ ವಿವಿಧೆಡೆ ದಾಳಿ ನಡೆಸಲು ಭಯೋತ್ಪಾದಕ ಗುಂಪುಗಳನ್ನು ರಚಿಸಿದ ಮತ್ತು ಕರ್ನಾಟಕ ಮತ್ತು ತಮಿಳುನಾಡು ಸೇರಿ ದಕ್ಷಿಣ ರಾಜ್ಯಗಳಲ್ಲಿ ಐಸಿಸ್ ಚಟುವಟಿಕೆಗಳನ್ನು ಹರಡುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2020 ರಲ್ಲಿ ಸಾದಿಕ್‌ ಬಾಷಾ ಸೇರಿ 16 ಮಂದಿಯನ್ನು ಬಂಧಿಸಿತ್ತು.

ಐಸಿಸ್ ಸಿದ್ಧಾಂತ ಹರಡಲು ಸ್ಕೆಚ್

ಆರೋಪಿಗಳು ಬೆಂಗಳೂರಿನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್‌ನ ಸಿದ್ಧಾಂತ ಮತ್ತು ಚಟುವಟಿಕೆಗಳನ್ನು ಹರಡಲು ಭಯೋತ್ಪಾದಕ ಗುಂಪು ರಚಿಸಿದ್ದರು ಎನ್ನಲಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಫೋಟ ನಡೆಸಲೂ ಸಂಚು ರೂಪಿಸಿದ್ದರು. ದೇಶದಲ್ಲಿ ಇಸ್ಲಾಮಿಕ್ ಖಿಲಾಫತ್ ಸ್ಥಾಪಿಸುವುದು ಶಂಕಿತರ ಉದ್ದೇಶವಾಗಿತ್ತು ಎಂದು ಎನ್‌ಐಎ 2020 ರ ಜುಲೈನಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ವಿವರಿಸಿತ್ತು.

ಸತ್ತಿದ್ದು ಹೇಗೆ ಉಗ್ರ?

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಷಾನನ್ನು ಜ.28 ರಂದು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯ ಆಸ್ಪತ್ರೆ ಒಳರೋಗಿ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಭಾಷಾ ಮೃತಪಟ್ಟಿದ್ದಾನೆ. ಬಾಷಾ ಟೈಪ್ 2 ಮಧುಮೇಹ, ಹೈಪೋಥೈರಾಯ್ಡಿಸಮ್, ಹೃದಯ ವೈಫಲ್ಯ ಸೇರಿ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕಿಡಿ
ಕನ್ನಡದಲ್ಲಿ ಪರೀಕ್ಷೆ ಇಲ್ಲದಿದ್ದರೆ ರೈಲ್ವೆಗೆ ಬಹಿಷ್ಕಾರ: ಹೊರಟ್ಟಿ ಎಚ್ಚರಿಕೆ