ಬೆಕ್ಕಿಗೆ ಗಂಟೆ ಕಟ್ಟೋಕೆ ಒಬ್ಬ ಮುಠ್ಠಾಳ ಬೇಕಿತ್ತು, ಅದಕ್ಕಾಗಿ ನಾನೇ ಬಂದಿದ್ದೇನೆ: ಸದ್ಗುರು

By Govindaraj S  |  First Published Jun 19, 2022, 11:59 AM IST

ಮಣ್ಣು ಸಂರಕ್ಷಿಸಿ ಅಭಿಯಾನ ಶತದಿನಗಳನ್ನು ಪೂರೈಸ್ತಿದೆ. ಈಶಾ ಫೌಂಡೇಶನ್‌ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಕಳೆದ ಮಾರ್ಚ್ ತಿಂಗಳಲ್ಲಿ ಲಂಡನಲ್ಲಿ ಆರಂಭಿಸಿದ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. 


ವರದಿ: ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜೂ.19): ಮಣ್ಣು ಸಂರಕ್ಷಿಸಿ ಅಭಿಯಾನ ಶತದಿನಗಳನ್ನು ಪೂರೈಸ್ತಿದೆ. ಈಶಾ ಫೌಂಡೇಶನ್‌ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಕಳೆದ ಮಾರ್ಚ್ ತಿಂಗಳಲ್ಲಿ ಲಂಡನಲ್ಲಿ ಆರಂಭಿಸಿದ ಮಣ್ಣು ರಕ್ಷಿಸಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಭಾರತ ಸೇರಿದಂತೆ ಯೂರೋಪ್‌, ಮಧ್ಯ ಏಷ್ಯಾದ ರಾಷ್ಟ್ರಗಳಲ್ಲಿ  30 ಸಾವಿರ ಕಿ.ಮೀ ಬೈಕ್‌ ಯಾತ್ರೆ ಪೂರ್ಣಗೊಳಿಸಿ ಇಂದು ರಾಜ್ಯ ಪ್ರವೇಶಿಸಿದ್ದಾರೆ.  94 ದಿನಗಳಲ್ಲಿ ವಿಶ್ವದ 27 ದೇಶಗಳಲ್ಲಿ 30 ಸಾವಿರ ಕಿಲೋಮೀಟರ್ ಕ್ರಮಿಸಿದ್ದು, ಅಷ್ಟೂ ದೇಶಗಳಲ್ಲಿ ಹಾಗು ಭಾರತದ 9 ರಾಜ್ಯಗಳಲ್ಲಿ ಕ್ರಮಿಸಿ ಬರೊಬ್ಬರಿ 594 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯ್ತು. 

Tap to resize

Latest Videos

ಸೇವ್ ಸಾಯಿಲ್ ಅಭಿಯಾನದ ಬಗ್ಗೆ ಅರಿವು ಪ್ರಪಂಚಾದ್ಯಂತ ಮೂಡಿ ಬರೊಬ್ಬರಿ 74 ದೇಶಗಳು ಈಗಾಗಲೆ‌ ಕೈಜೋಡಿಸಿವೆ. ಮಣ್ಣಿನ ಫಲವತ್ತತೆ ಹೆಚ್ಚಿಸುವುದಕ್ಕೆ ದೇಶವಿದೇಶಗಳ ಹವಾಮಾನಕ್ಕೆ ಅನುಗುಣವಾಗಿ ಅವರು ಮಾಡಬೇಕಿರೋ ಬದಲಾವಣೆಗಳ ಕುರಿತು 193 ದಾಖಲೆಗಳನ್ನು ಆಯಾ ದೇಶಗಳಿಗೆ ಅನುವಾಗುವಂತೆ ಸಿದ್ದಪಡಿಸಲಾಗಿದೆ. ವಿಶೇಷ ಅಂದ್ರೆ, ಎಲ್ಲ ದೇಶಗಳು ಇದನ್ನು ಕಡ್ಡಾಯವಾಗಿ ಚಾಲ್ತಿಗೆ ತರಲಾಗುತ್ತೆ ಅಂತ ಪತ್ರಮುಖೇನ ತಿಳಿಸಿರೋದು ಮಾತ್ರವಲ್ಲದೇ MOU ಕೂಡ ಸಹಿ ಮಾಡಿದೆ. ಅಲ್ಲದೆ ನಮ್ಮ ದೇಶದ 7ರಿಂದ 8 ರಾಜ್ಯಕೂಡ MOUಗೆ ಸಹಿ ಮಾಡಲಿದೆ. ಈಗಾಗಲೆ ಎಲ್ಲಾ ದೇಶಗಳಲ್ಲು ಉತ್ತಮ ಸ್ಪಂದನೆ ಸಿಕ್ಕಿದ್ದು ನಮ್ಮ ರಾಜ್ಯದ ಸಿಎಂ ಕೂಡ ಸಹಿ ಮಾಡಲಿದ್ದಾರೆ.

Save Soil Movement: ಬೆಂಗಳೂರಿಗೆ ಬಂತು ಸದ್ಗುರು ರ್ಯಾಲಿ: ಇಂದು ಬೃಹತ್‌ ಸಮಾವೇಶ

ಅಭಿಯಾನದ ಬಗ್ಗೆ ಸದ್ಗುರು ಅಭಿಪ್ರಾಯ?: ದೇಶದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದೆ. ಈ ಸತ್ಯ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಿಗೂ ತುಂಬಾ ಚೆನ್ನಾಗಿಯೇ ಗೊತ್ತಿದೆ. ಅಷ್ಟು ಮಾತ್ರವಲ್ಲದೇ ಎಲ್ಲ ರಾಜಕೀಯ ಮುಖಂಡರಿಗೂ ಇದರ ತೀವ್ರತೆ ಹಾಗು ಆಳದ ಅರಿವಿದೆ.  ಅವರ ಬಳಿಯೇ ಇದಕ್ಕೆ ಸೂಕ್ತ ಪರಿಹಾರವೂ ಕೂಡ ಇದೆ. ಆದ್ರೆ, ಅವರೆಲ್ಲರ ಅಪೇಕ್ಷೆಯಂತೆ ಬೆಕ್ಕಿಗೆ ಗಂಟೆ ಕಟ್ಟಲು ಒಬ್ಬ ಮುಟ್ಟಾಳ ಬರಬೇಕಿತ್ತು. ಆ ಸ್ಥಾನವನ್ನು ನಾನು ತುಂಬಿದ್ದೇನೆ. ನಾವು ಯಾವುದೇ ಕಾರಣಕ್ಕೂ ಮಣ್ಣನ್ನು ಪದಾರ್ಥದಂತೆ ನೋಡಬಾರದು. ಮಣ್ಣು ಹಾಗು ಮನುಷ್ಯನ ದೇಹ ಎರಡೂ ಒಂದೇ ಅನ್ನೋದನ್ನು ಮರೆಯಬಾರದು. 

ಯಾವ ಮನುಷ್ಯನೂ ಮಣ್ಣನ್ನು ತನ್ನ ಸ್ವತ್ತು ಅಂತ ತಿಳಿಯಬಾರದು. ಯಾಕಂದ್ರೆ, ಮಣ್ಣು ಖಂಡಿತವಾಗಿಯೂ ನಮ್ಮ ಸ್ವತ್ತಲ್ಲ. ಹಿಂದಿನ ತಲೆಮಾರಿನಿಂದ ಜೀವಂತವಾಗಿ ಬಂದಿರೋ ಮಣ್ಣನ್ನು ನಾವೂ ಕೂಡ ಜೀವಂತವಾಗಿಯೇ ಮುಂದಿನ ತಲೆಮಾರುಗಳಿಗೆ ನೀಡಬೇಕಿದೆ. ಅದು ನಮ್ಮ ಕರ್ತವ್ಯ ಹಾಗು ಗುರಿಯಾಗಬೇಕು. ಪ್ರಪಂಚದಲ್ಲಿ ಎಲ್ಲಿಯೇ ವ್ಯವಸಾಯ ಮಾಡಬೇಕಂದ್ರೂ ಮಣ್ಣಿನ ಕನಿಷ್ಠ ಸಾವಯವ ಪ್ರಮಾಣ ಶೇ. 3ರಷ್ಟು ಇರಬೇಕು ಅಂತ ಯುಎನ್ ಏಜೆನ್ಸೀಸ್ ಹೇಳುತ್ತೆ. ವ್ಯವಸಾಯ ಮಾಡೋ ಮಣ್ಣಿನ ಫಲವತ್ತತೆ ಯಾವುದೇ ಕಾರಣಕ್ಕೂ ಶೇ.3ಕ್ಕಿಂತ ಕೆಳಗೆ ಇಳಿಯಬಾರದು. 

ಮಣ್ಣಿನ ಫಲವತ್ತತೆ ಶೇ. 1ಕ್ಕಿಂತ ಕಡಿಮೆಯಾದ್ರೆ ಅದು ಮರುಭೂಮಿ ಆಗೋದ್ರ ಮುನ್ಸೂಚನೆ ಅನ್ನೋದನ್ನ ಯಾರೂ ಮರೆಯಬಾರದು. ಮಣ್ಣಲ್ಲಿ ಜೀವವೇ ಇಲ್ಲದಂತಾಗೋ ದಿನಗಳು ತುಂಬಾ ಹತ್ತಿರದಲ್ಲಿದೆ. ನಾವು ಎಚ್ಚೆತ್ತುಕೊಳ್ಳದಿದ್ರೆ, 20ರಿಂದ 30 ವರ್ಷದೊಳಗೆ ಮಣ್ಣಿನಲ್ಲಿ ಜೀವವೇ ಇರೋದಿಲ್ಲ. 2040ರಿಂದ 2050ರೊಳಗೆ ವ್ಯವಸಾಯ ಮಾಡಲು ಯೋಗ್ಯವಾದ ಮಣ್ಣು ವಿಶ್ವಾದ್ಯಂತ ಎಲ್ಲಿಯೂ ಲಭಿಸೋದಿಲ್ಲ. ಮಣ್ಣಿಲ್ಲ ಅಂದ್ರೆ ನಾವಿಲ್ಲ. ನಾವು ಜೀವಂತ ಇರಬೇಕು ಅಂದ್ರೆ ವ್ಯವಸಾಯ ಮಾಡೋ ಮಣ್ಣಿನ ಫಲವತ್ತತೆ ಕನಿಷ್ಟ ಶೇ.3ಕ್ಕೆ ತರಬೇಕು. ಅದು ನಮ್ಮನಿಮ್ಮೆಲ್ಲರ ಕರ್ತವ್ಯವಾಗಿದೆ.

Save Soil Movement: ಸದ್ಗುರು ಬೈಕ್‌ ಯಾತ್ರೆ ಇಂದು ಕರುನಾಡು ಪ್ರವೇಶ

ಮೋಟಾರ್ ಬೈಕ್ ಪ್ರಯಾಣ ಹೇಗಿತ್ತು?: ಬೈಕ್ ಪ್ರಯಾಣ ಸುಲಭದ ಮಾತಲ್ಲ. ಕೊಂಚ ಕಷ್ಟ ಅನ್ಸಿದ್ರು ಹೋಗಲೇಬೇಕಾಯ್ತು. ನಮ್ಮ ರಸ್ತೆಗಳಿಗೆ ಹೋಲಿಸಿದ್ರೆ ಹೊರದೇಶದ ರಸ್ತೆಗಳು ಅಷ್ಟೆನು ಕೆಟ್ಟೋಗಿಲ್ಲ. ಆದ್ರೆ ಮಳೆ, ಹಿಮದ ಮಧ್ಯೆ ಸಾವಿರಾರು ಕಿ.ಮೀ ಕ್ರಮಿಸೋದು ಸುಲಭವಲ್ಲ. ಆದ್ರೆ ಇಷ್ಟು ದೂರ ಕ್ರಮಿಸಲು ಸಹಾಯವಾಗಿದ್ದೇ ಯೋಗ. ಯೋಗ ಮಾಡಿದ್ದರಿಂದಲೆ ನಾನು ತುಂಬಾ ಆರೋಗ್ಯವಾಗಿದ್ದೇನೆ. ಜೊತೆಗೆ ಎನರ್ಜಿ ಕೂಡ ಯೋಗ.

click me!