ಇದು ಕಾಂತರಾಜು ವರದಿಯಾ? ಹೆಗ್ಡೆ ವರದಿಯಾ?: ಬೊಮ್ಮಾಯಿ

By Kannadaprabha NewsFirst Published Mar 1, 2024, 9:06 AM IST
Highlights

ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಲಿಲ್ಲ. ಈಗ ಸಲ್ಲಿಕೆಯಾಗಿರುವ ವರದಿಯಲ್ಲಿ ಕೆಲವು ಜಾತಿಗಳ ಉಪಜಾತಿಗಳನ್ನು ಬೇರ್ಪಡಿಸಿದ್ದು, ಕೆಲವು ಜಾತಿಗಳ ಉಪ ಜಾತಿಗಳನ್ನು ಬೇರ್ಪಡಿಸಿಲ್ಲ ಎಂಬ ಮಾಹಿತಿ ಇದೆ. ಈ ವರದಿ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದಿ ಅವರು ಹೇಳಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ 

ಬೆಂಗಳೂರು(ಮಾ.01):  ರಾಜ್ಯ ಸರ್ಕಾರ ಸ್ವೀಕರಿಸಿರುವುದು ಕಾಂತರಾಜು ವರದಿನಾ ಅಥವಾ ಜಯ ಪ್ರಕಾಶ ಹೆಗ್ಡೆ ವರದಿನಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. 

ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ನೀಡಿದ ಆದೇಶ ದಲ್ಲಿ ಜಾತಿ ಗಣತಿ ಮಾಡಲು ಆದೇಶ ಇರಲಿಲ್ಲ ಎಂದು ತಿಳಿಸಿದ್ದಾರೆ. 

ಜಾತಿಗಣತಿ ವರದಿ ಓದದೇ ಅವೈಜ್ಞಾನಿಕ ಎನ್ನದಿರಿ: ಜಯಪ್ರಕಾಶ ಹೆಗ್ಡೆ

ಆಗ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ವರದಿ ಸ್ವೀಕಾರ ಮಾಡಲಿಲ್ಲ. ಈಗ ಸಲ್ಲಿಕೆಯಾಗಿರುವ ವರದಿಯಲ್ಲಿ ಕೆಲವು ಜಾತಿಗಳ ಉಪಜಾತಿಗಳನ್ನು ಬೇರ್ಪಡಿಸಿದ್ದು, ಕೆಲವು ಜಾತಿಗಳ ಉಪ ಜಾತಿಗಳನ್ನು ಬೇರ್ಪಡಿಸಿಲ್ಲ ಎಂಬ ಮಾಹಿತಿ ಇದೆ. ಈ ವರದಿ ಬಗ್ಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದಿ ಅವರು ಹೇಳಿದರು.

click me!