* ಖಾಕಿ ಪಡೆಗೆ ಚಾಟಿ ಬೀಸಿದ ಡಿ. ರೂಪಾ
* ಪಿಎಸೈ ಅಕ್ರಮ ಎಲ್ಲರ ತಲೆತಗ್ಗಿಸುವಂತೆ ಮಾಡಿದೆ: ಡಿ.ರೂಪಾ ಮೌದ್ಗಿಲ್
* ಐಪಿಎಸ್ ಅಧಿಕಾರಿಗಳ ವಾಟ್ಸಾಪ್ ಗ್ರೂಪಿನಲ್ಲಿ ‘ಸಿಂಘಂ’ಗಳಿಗೆ ರೂಪಾ ಮಾತಿನೇಟು
ಆನಂದ್ ಎಂ. ಸೌದಿ
ಯಾದಗಿರಿ(ಏ.28): ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ಪರಪ್ಪನ ಅಗ್ರಹಾರದಲ್ಲಿದ್ದಾಗ ‘ರಾಜಾತಿಥ್ಯ’ದ ಅಕ್ರಮ ಬಹಿರಂಗಗೊಳಿಸಿದ್ದ ಖಡಕ್ ಐಪಿಎಸ್ ಹಿರಿಯ ಅಧಿಕಾರಿ ಡಿ.ರೂಪಾ(D Roopa) ಮೌದ್ಗಿಲ್, ಇದೀಗ ಪಿಎಸೈ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮದೇ ಖಾಕಿಪಡೆಯ ವಿರುದ್ಧ ಚಾಟಿ ಬೀಸಿದ್ದಾರೆ.
undefined
ಕರ್ನಾಟಕ(Karnataka) ರಾಜ್ಯದ ಐಪಿಎಸ್ ಅಧಿಕಾರಿಗಳ ವಲಯದ ವಾಟ್ಸಾಪ್ ಗ್ರೂಪಿನಲ್ಲಿ ಹಿರಿಯ ಅಧಿಕಾರಿ ಡಿ.ರೂಪಾ ಅವರ ಇಂತಹುದ್ದೊಂದು ಸಂದೇಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸಂಚಲನ ಮೂಡಿಸಿದೆ. ‘ಸಿಂಘಂ’ನಂತಹ ಹಿರಿಯ ಅಧಿಕಾರಿಗಳಿದ್ದಾರಲ್ಲ, ಈಗ ಇದೆಲ್ಲಾ ಹೇಗೆ ನಡೆಯಿತು ಎಂಬ ಅವರ ಟಾಂಗ್ ಐಪಿಎಸ್(IPS) ವಲಯವನ್ನು ಮೌನಕ್ಕೆ ಶರಣಾಗಿಸಿದಂತಿದೆ.
ಪಿಎಸ್‌ಐ ನೇಮಕಾತಿ ಅಕ್ರಮ: ಜ್ಯೋತಿ ಪಾಟೀಲ್ ಬಂಧನ
ಈ ಕುರಿತು, ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭ(Kannada Prabha) ಜೊತೆ ಮಾತನಾಡಿದ ಡಿ.ರೂಪಾ ಮೌದ್ಗಿಲ್(D Roopa Moudgil), ಈ ಪ್ರಕರಣ ನೋವಾಗಿಸಿದೆ. ನಮ್ಮವರೇ ತಡೆಗಟ್ಟಲು ಸಾಧ್ಯವಾಗಲಿಲ್ಲವೇ ಅನ್ನೋ ಕೊರಗಿದೆ. ಹೀಗಾಗಿ, ನನಗನ್ನಿಸಿದ್ದನ್ನ ನೇರವಾಗಿಯೇ ಹೇಳಿದ್ದೇನೆ ಎಂದರು.
ಏನಿದು?:
ಪಿಎಸೈ ನೇಮಕಾತಿ ಅಕ್ರಮ(PSI Recruitment Scam) ವಿಚಾರ ರಾಜ್ಯ ಸರ್ಕಾರದ ತೀವ್ರ ಮಜುಗರಕ್ಕೀಡಾಗಿಸಿದೆ. ಬರೀ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳಷ್ಟೇ ಅಲ್ಲ, ನೇಮಕಾತಿ ವಿಭಾಗದಲ್ಲೂ ಭ್ರಷ್ಟಾಚಾರದ(Corruption) ವಾಸನೆ ಬಡಿಯುತ್ತಿದೆ ಎಂಬ ಆರೋಪಗಳು ಮೂಡಿಬಂದಿದ್ದವು.
ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದಂತಿದ್ದ ರಾಜ್ಯ ಸರ್ಕಾರ(Government of Karnataka) ಬುಧವಾರ ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪೌಲ್ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ, ಅಲ್ಲಿಗೆ ಐಪಿಎಸ್ ಅಧಿಕಾರಿ ಆರ್.ಹಿತೇಂದ್ರ ಅವರನ್ನು ನೇಮಿಸಿದೆ. ಅಮ್ರಿತ ಪೌಲ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಬುಧವಾರದ ಈ ಬೆಳವಣಿಗೆಗಳ ನಂತರ ಅಮ್ರಿತ ಪೌಲ್, ಐಪಿಎಸ್ ಅಧಿಕಾರಿಗಳ ಗುಂಪಿನ ವಾಟ್ಸಾಪ್ ಗುಂಪಿನಲ್ಲಿ ತಮ್ಮ ವರ್ಗಾವಣೆ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಗೆ ಈವರೆಗೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳ ಸಂದೇಶ ಕಳುಹಿಸಿದ್ದು, ಇದಕ್ಕೆ ಬಹುತೇಕ ಅಧಿಕಾರಿಗಳು ಪ್ರತಿಕ್ರಿಯಿಸಿ ಶುಭ ಹಾರೈಸಿದ್ದಾರೆನ್ನಲಾಗಿದೆ. ಆದರೆ, ಈ ಸಂದೇಶಕ್ಕೆ ಅದೇ ವಾಟ್ಸಾಪ್‌ನಲ್ಲಿ ಪ್ರತಿಕ್ರಿಯಿಸಿರುವ ಡಿ.ರೂಪಾ ಮೌದ್ಗಿಲ್, ‘ಪಿಎಸೈ ನೇಮಕಾತಿ ಅಕ್ರಮ ವಿಚಾರ ಎಲ್ಲರ ತಲೆತಗ್ಗಿಸುವಂತೆ ಮಾಡಿದೆ, ಜನಸಾಮಾನ್ಯರಿಗೆ ಆಘಾತ ಮೂಡಿಸಿದ್ದು, ವೈಯುಕ್ತಿಕವಾಗಿ ಪೊಲೀಸ್ ಇಲಾಖೆಗೆ ಕೆಟ್ಟಹೆಸರು ಹಾಗೂ ಸರ್ಕಾರದ ಗೌರವಕ್ಕೆ ಚ್ಯುತಿ ಬಂದಿದೆ ಎಂದಿದ್ದಾರೆ.
ಡಿ. ರೂಪಾ ಮೌದ್ಗಿಲ್ ಪ್ರತಿಕ್ರಿಯಲ್ಲೇನಿದೆ?
‘ಈ ಅಕ್ರಮ ಜನಸಾಮಾನ್ಯರ ಬೆಚ್ಚಿ ಬೀಳಿಸಿದೆಯೆಲ್ಲದೆ, ಮುಖ್ಯವಾಗಿ ಪೊಲೀಸ್ ಇಲಾಖೆಗೆ ಕೆಟ್ಟಹೆಸರು ಮೂಡಿಸಿದೆ ಜೊತೆಗೆ ಸರ್ಕಾರಕ್ಕೂ ಕೂಡ ದೊಡ್ಡಮಟ್ಟದಲ್ಲಿ. ಹೆಸರು ಗಳಿಸಿದ್ದ ನೇಮಕಾತಿ ವಿಭಾಗಕ್ಕೆ ಇಂದಿನ ದಿನಮಾನದ ಬೆಳವಣಿಗೆಗಳಿಂದಾಗಿ ನಾನೂ ಸೇರಿದಂತೆ ನನ್ನಂತಹ ಅನೇಕರಿಗೆ ನೋವು ಮೂಡಿಸಿದೆ.
PSI Recruitment Scam: ಕಲಬುರಗಿ ಆಯ್ತು, ಯಾದಗಿರಿಯಲ್ಲೂ ಅಕ್ರಮ ನೇಮಕ..?
ಸಾಮಾನ್ಯ ಆಕಾಂಕ್ಷಿಗಳು ಹಾಗೂ ಮಾಧ್ಯಮಗಳು ಈ ವಿಷಯ ಪ್ರಸ್ತಾಪಿಸಿದಾಗ, ವೈಯುಕ್ತಿಕವಾಗಿ ನನಗೆ ಭಾರಿ ಮುಜುಗರ ಮೂಡಿಸಿದೆ, ತಲೆ ಕೆಳಗಾಗಿಸುವಂತೆ ಮಾಡಿದೆ. ಪಿಎಸೈ ಆಗುವುದು ಪ್ರತಿಯೊಬ್ಬ ಯುವಕ/ಯುವತಿಯ ಕನಸು, ಹೀಗಾಗಬಾರದಿತ್ತು. ರಾಜ್ಯದಲ್ಲಿ ‘ಸಿಂಘಂ’ನಂತಹ ಹಿರಿಯ ಅಧಿಕಾರಿಗಳು ಇದ್ದಾಗಲೂ ಕೂಡ ಅದ್ಹೇಗೆ ಹೀಗಾಯ್ತು?
ಈ ವಿಚಾರ, ಎಲ್ಲರಿಗೂ ಅನ್ವಯವಾಗುವಂತೆ ಮಾಡಿದಂತಾಗಿದೆ. ಎಲ್ಲರನ್ನೂ ಅನುಮಾನಿಸುವಂತಿದೆ. ಹೀಗಾಗಬಾರದಿತ್ತು ಎಂದು ಹಿರಿಯ ಅಧಿಕಾರಿಗಳು ಹೇಳಬಹುದು. ಕ್ಷಮಿಸಿ, ನಾನು ಇನ್ನುಳಿದ ಕಿರಿಯರಂತೆ ಎಲ್ಲದಕ್ಕೂ ತಲೆಯಾಡಿಸಿ ಸೈ ಅನ್ನುವವಳಲ್ಲ, ಎರಡೆರಡು ಕಡೆಗಳಲ್ಲಿ ಮಾತನಾಡುವವಳೂ ಅಲ್ಲ.. ಆಯ್ತು ಸರ್, ಒಳ್ಳೆಯ ದಿನಗಳು ಬರಲಿ. ನಿಮ್ಮ ಅವಧಿಯಲ್ಲಿ ಹೀಗಾಗಿದ್ದಕ್ಕೆ ನನಗೆ ಖೇದವಿದೆ.