* ಆರೋಪಿಗಳು ಹಾಗೂ ಆಕಾಂಕ್ಷಿಗಳ ಮಧ್ಯವರ್ತಿಯಾಗಿದ್ದ ಜ್ಯೋತಿ
* ಶಹಬಾದ್ ನಗರಸಭೆ ಉದ್ಯೋಗಿ
* ಕಿಂಗ್‌ಪಿನ್ ರುದ್ರಗೌಡ ಆಸ್ಪತ್ರೆಗೆ ದಾಖಲು
ಕಲಬುರಗಿ(ಏ.28): ಪಿಎಸ್‌ಐ ಪರೀಕ್ಷೆ ಅಕ್ರಮದ(PSI Recruitment Scam) ತನಿಖೆ ತೀವ್ರಗೊಳಿಸಿರುವ ಸಿಐಡಿ(CID) ಗುರುವಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಹಾಗೂ ಪಿಎಸ್‌ಐ ಅಭ್ಯರ್ಥಿಗಳ ನಡುವಿನ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಆರೋಪದ ಮೇಲೆ ಶಹಾಬಾದ್ ನಗರಸಭೆಯಲ್ಲಿ ಉದ್ಯೋಗಿ ಜ್ಯೋತಿ ಪಾಟೀಲ್‌ರನ್ನು(Jyoti Patil) ಬಂಧಿಸಿದೆ. ಇದರೊಂದಿಗೆ ಹಗರಣದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿದೆ. ಹಗರಣದ ಕಿಂಗ್‌ಪಿನ್, ತಲೆ ಮರೆಸಿಕೊಂಡಿರುವ ನೀರಾವರಿ ಎಂಜಿನಿಯರ್ ಮಂಜುನಾಥ್ ಜೊತೆ ಜ್ಯೋತಿ ಪಾಟೀಲ್ ನಿಕಟ ಸಂಪರ್ಕ ಹೊಂದಿದ್ದಳು, ಜೊತೆಗೆ ಈಗಾಗಲೇ ಸಿಐಡಿ ವಶದಲ್ಲಿರುವ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಜೊತೆಗೂ ನಂಟಿತ್ತು ಎಂದು ಸಿಐಡಿ ಮೂಲಗಳು ತಿಳಿಸಿವೆ.
ಈ ಮೊದಲು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ(RDPR) ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಎರಡು ತಿಂಗಳ ಹಿಂದೆಯಷ್ಟೇ ಶಹಾಬಾದ್ ನಗರಸಭೆಗೆ ವರ್ಗಾವಣೆಯಾಗಿ ಬಂದಿದ್ದಳು. ಪಿಎಸ್‌ಐ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಶಾಂತಿಬಾಯಿ ಎಂಬುವವರು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಜ್ಯೋತಿ ನೆರವಾಗಿದ್ದಳು ಎಂಬ ಆರೋಪವಿದೆ. ಅಕ್ರಮ ಪ್ರಕರಣದಲ್ಲಿ ಬ್ಲೂಟೂತ್ ಡಿವೈಸ್ ಬಳಸುವಲ್ಲಿ ನಿಸ್ಸೀಮನಾಗಿರುವ ನೀರಾವರಿ ಎಂಜಿನಿಯರ್ ಮಂಜುನಾಥ್ ಪಾಟೀಲ್‌ಗೆ ಶಾಂತಿಬಾಯಿಯನ್ನು ಭೇಟಿ ಮಾಡಿಸಿರುವುದು ಕೂಡ ಆರೋಪಿ ಜ್ಯೋತಿ ಪಾಟೀಲ್ ಎಂದು ತಿಳಿದು ಬಂದಿದೆ. ಸದ್ಯ ಶಾಂತಿಬಾಯಿ, ಮಂಜುನಾಥ್ ಇಬ್ಬರೂ ನಾಪತ್ತೆಯಾಗಿದ್ದು, ಇಬ್ಬರ ನಡುವಿನ ಮಧ್ಯವರ್ತಿ ಜ್ಯೋತಿ ಪಾಟೀಲ್ ಸಿಐಡಿ ಬಲೆಗೆ ಬಿದ್ದಿದ್ದಾಳೆ.
PSI Recruitment Scam: ನಾಪತ್ತೆಯಾಗಿರುವ ದಿವ್ಯಾ ಶ್ರೀ ಕಾಶ್ಮೀರದಲ್ಲಿ?
ಕಿಂಗ್‌ಪಿನ್ ರುದ್ರಗೌಡ ಆಸ್ಪತ್ರೆಗೆ ದಾಖಲು
ಕಲಬುರಗಿ: ಪಿಎಸ್‌ಐ ಪರೀಕ್ಷೆ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್(Rudragouda Patil) ಆರೋಗ್ಯದಲ್ಲಿ ಗುರುವಾರ ಕೊಂಚ ಏರುಪೇರಾಗಿದ್ದರಿಂದ ಗುಲ್ಬರ್ಗ ಆರೋಗ್ಯ ವಿಜ್ಞಾನಗಳ ವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಐದು ದಿನಗಳ ಹಿಂದೆಯೇ ರುದ್ರಗೌಡನನ್ನು ಬಂಧಿಸಿದ್ದ ಸಿಐಡಿ ಪೊಲೀಸರು(CID Police) 13 ದಿನ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ನಕಲು ಮಾಡಲು ರುದ್ರಗೌಡ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಕೆಲ ದಿನಗಳಿಂದ ಲವಲವಿಕೆಯಿಂದಲೇ ಇದ್ದ ರುದ್ರಗೌಡ ಇದೀಗ ಏಕಾಏಕಿ ಆರೋಗ್ಯ(Health) ತೊಂದರೆ ಎಂದು ದೂರಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ.
ಕಿಂಗ್‌ಪಿನ್ ರುದ್ರಗೌಡ ಆಸ್ಪತ್ರೆಗೆ ದಾಖಲು
ಪಿಎಸ್‌ಐ ಪರೀಕ್ಷೆ ಹಗರಣದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಆರೋಗ್ಯದಲ್ಲಿ ಗುರುವಾರ ಕೊಂಚ ಏರುಪೇರಾಗಿದ್ದರಿಂದ ಗುಲ್ಬರ್ಗ ಆರೋಗ್ಯ ವಿಜ್ಞಾನಗಳ ವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ದಿನಗಳ ಹಿಂದೆಯೇ ರುದ್ರಗೌಡನನ್ನು ಬಂಧಿಸಿದ್ದ ಸಿಐಡಿ ಪೊಲೀಸರು 13 ದಿನ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಪಿಎಸ್‌ಐ ಪರೀಕ್ಷೆ ಅಕ್ರಮದಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್ ಮೂಲಕ ನಕಲು ಮಾಡಲು ರುದ್ರಗೌಡ ನೆರವು ನೀಡುತ್ತಿದ್ದ ಆರೋಪದ ಮೇರೆಗೆ ಬಂಧಿಸಲಾಗಿತ್ತು. ಕೆಲ ದಿನಗಳಿಂದ ಲವಲವಿಕೆಯಿಂದಲೇ ಇದ್ದ ರುದ್ರಗೌಡ ಇದೀಗ ಏಕಾಏಕಿ ಆರೋಗ್ಯ ತೊಂದರೆ ಎಂದು ದೂರಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಐಡಿ ಮೂಲಗಳು ಖಚಿತಪಡಿಸಿವೆ.