ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ. ರೂಪಾ ಕಿಡಿ ಕಾರಿದ್ದಾರೆ. ರೋಹಿಣಿ ವಿರುದ್ದ ಹತ್ತೊಂಬತ್ತು ಆರೋಪಗಳ ಪಟ್ಟಿ ಮಾಡಿರೋ ರೂಪಾ, ತನ್ನ ಬಳಿ ರೋಹಿಣಿ ಮಾಡಿರೊ ಅಕ್ರಮ ಕಾರ್ಯಕ್ಕೆ ಸಾಕ್ಷಿಗಳು ಇವೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರು (ಫೆಬ್ರವರಿ 19, 2023): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಶಾಸಕ ಸಾ.ರಾ. ಮಹೇಶ್ ಜತೆ ರಾಜಿ ಸಂಧಾಣ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕುರಿತು ಐಪಿಎಸ್ ಅಧಿಕಾರಿ ಹಾಗೂ ಐಜಿಪಿಯಾಗಿರುವ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ. ಬರೀ ಪ್ರಶ್ನೆ ಮಾತ್ರವಲ್ಲ, ರೋಹಿಣಿ ಸಿಂಧೂರಿ ವಿರುದ್ಧ 19 ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ತನ್ನ ಬಳಿ ರೋಹಿಣಿ ಮಾಡಿದ್ದ ಕಾರ್ಯಕ್ಕೆ ಸಾಕ್ಷಿಗಳು ಇವೆ. ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ - ಹೀಗೆ ಮುಂತಾದ ಅನೇಕ ಆರೋಪಗಳನ್ನು ಡಿ. ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಡಿದ್ದಾರೆ.
ಈ ಮೂಲಕ ಐಎಎಸ್ - ಐಪಿಎಸ್ ನಡುವಿನ ಜಗಳ ತಾರಕಕ್ಕೆ ಏರಿದಂತಾಗಿದೆ. ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ. ರೂಪಾ ಕಿಡಿ ಕಾರಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ದ 19 ಆರೋಪಗಳ ಪಟ್ಟಿ ಮಾಡಿರೋ ಡಿ. ರೂಪಾ, ತನ್ನ ಬಳಿ ರೋಹಿಣಿ ಮಾಡಿರುವ ಅಕ್ರಮ ಕಾರ್ಯಕ್ಕೆ ಸಾಕ್ಷಿಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ..? ಎಂದೂ ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಸಾ.ರಾ. ಮಹೇಶ್ ಜೊತೆ ರಾಜಿಗೆ ರೋಹಿಣಿ ಸಿಂಧೂರಿ ಯತ್ನ
ಅಲ್ಲದೆ, ಅನೇಕ ಹಿರಿಯ ಐಎಎಸ್ ಅಧಿಕಾರಿಗಳಿಗೆ ಈಕೆ ಆಕ್ಷೇಪಾರ್ಹ ಚಿತ್ರ ( not so decent ) ಕಳಿಸಿದ್ದಾರೆ. ಈಗಲೂ ನನ್ನ ಬಳಿ ಆ ಫೋಟೋಗಳಿವೆ ಎಂದು ಡಿ. ರೂಪಾ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ ಸಿಇಒ ಆದಾಗ ಟಾಯ್ಲೆಟ್ ಕಟ್ಟಿಸಿದ್ದಕ್ಕಿಂತ ಫಿಗರ್ ಫ್ಲಡ್ಜ್ ಮಾಡಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದಿದ್ದಾರೆ. ಚಾಮರಾಜನಗರದಲ್ಲಿ 24 ಜನ ಆಕ್ಸಿಜನ್‌ನಿಂದ ಸತ್ತಾಗ ಈಕೆಯ ಮೇಲೆ ತನಿಖೆ ನಡೆಸದೆ ಪಾರಾದ್ರು. ಕನ್ನಡದ ಹುಡುಗಿ ಐಎಎಸ್ ಶಿಲ್ಪ ನಾಗ್ ವಿರುದ್ಧ ಜಗಳ, ರಂಪ ಏತಕ್ಕೆ ಎಂದೂ ಐಜಿಪಿ ಡಿ. ರೂಪಾ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಸಾರಾ ಮಹೇಶ್ ಮೇಲೆ ಅನೇಕ ಆರೋಪ ಮಾಡಿದ್ರೂ ರೋಹಿಣಿ ಸಿಂಧೂರಿ ಒಂದನ್ನೂ ಪ್ರೂವ್ ಮಾಡಲಿಲ್ಲ. ಅದಕ್ಕೆ ಸಂಧಾನಕ್ಕೆ ಹೋದ್ರಾ..? ಪ್ರತಾಪ್ ಸಿಂಹ ಮೇಲೆ ಪ್ರೈವೆಟ್ ಕ್ಲಿನಿಕ್ ಆಕ್ಸಿಜನ್ ಕೇಳಿದ್ರು ಅಂತ ಆರೋಪ ಮಾಡಿದ್ರೂ ಯಾಕೆ ಪ್ರೂವ್ ಮಾಡಲಿಲ್ಲ. ಹಾಸನ ಡಿಸಿಯಿಂದ ಎತ್ತಂಗಡಿ ಮಾಡಿದಾಗ ಸರ್ಕಾರದ ವಿರುದ್ಧ ಸಿಎಟಿಗೆ ಅರ್ಜಿ ಹಾಕಿದ್ರು. ಸಿಎಟಿಗೆ ಅರ್ಜಿ ಹಾಕಲು ನನ್ನ ಗಂಡ ಮೌನಿಶ್ ಮೌದ್ಗಿಲ್ ನನ್ನ ಕಣ್ಣೆದುರೇ ಅರ್ಜಿ ಬರೆದು ಆಕೆಗೆ, ಆಕೆಯ ಗಂಡನಿಗೆ ಕಳಿಸಿದ್ರು ಎಂದು ಸಹ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: IAS ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ
ಹಾಗೆ, ಮೈಸೂರು ಡಿಸಿಯಾಗಿ ಹೋಗಿದ್ದ ಕನ್ನಡದ ಹುಡುಗ ಶರತ್ ಅವರನ್ನು 29 ದಿನದಲ್ಲಿ ಎತ್ತಂಗಡಿ ಮಾಡಿಸಿದ್ದು ಯಾವ ಹೈ ಲೆವೆಲ್ ಇನ್‌ಫ್ಲುಯೆನ್ಸ್‌ನಿಂದ ಎಂದೂ ಡಿ. ರೂಪಾ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕೊರೊನಾ ಸಮಯದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಂಡಿದ್ದಕ್ಕೆ ಡಿ. ರೂಪಾ ಕಿಡಿ ಕಾರಿದ್ದಾರೆ. ಕೋವಿಡ್‌ನಿಂದ ಜನ ಸಾಯ್ತಿದ್ರೆ ಮಾನವೀಯತೆ ಇಲ್ಲದೆ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ಸಾಬೀತಾಗಿದೆ. ಮನುಷ್ಯತ್ವ ಇರೋರು ಕೋವಿಡ್ ಸಮಯದಲ್ಲಿ ಜನ ಸಾಯುತ್ತಿರುವಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಹೀಗೆ ಅನೇಕ ಆರೋಪಗಳನ್ನ ಫೇಸ್‌ಬುಕ್ ಪೋಸ್ಟ್ ಮೂಲಕ ಡಿ. ರೂಪಾ ಮಾಡಿದ್ದಾರೆ. ಡಿಕೆ ರವಿ ಕೇಸ್ , ಐಪಿಎಸ್ ಹರೀಶ್ ಸಾವು, ಸಾರಾ ಮಹೇಶ್ ಜೊತೆಗಿನ ಗುದ್ದಾಟ, ಹರ್ಷ ಗುಪ್ತ ಜೊತೆ ಜಗಳ , ಮಣಿವಣ್ಣನ್ ಜೊತೆ ಜಗಳ - ಅನೇಕ ವಿಚಾರಗಳ ಕುರಿತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರು ಸ್ಮರಿಸಿಕೊಂಡಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: IPS VS IAS, ರೋಹಿಣಿ 'ಸ್ವಿಮಿಂಗ್ ಪೂಲ್'ಗೆ ಕಲ್ಲೆಸೆದ ಡಿ ರೂಪಾ!