ಮಂಗಳೂರು ಬಾಂಬ್‌ ಸ್ಫೋಟ: ಗುಪ್ತಚರ, ಗೃಹ ಇಲಾಖೆ ವೈಫಲ್ಯ ಸಾಬೀತು, ಸಿದ್ದು

By Kannadaprabha NewsFirst Published Nov 21, 2022, 2:30 AM IST
Highlights

ರಾಜ್ಯ ಪೊಲೀಸ್‌ ಮಹಾನಿರ್ದೇಶಕರೇ ಇದೊಂದು ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿದ್ದಾರೆ. ಬಾಂಬ್‌ ಸ್ಫೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ: ಸಿದ್ದರಾಮಯ್ಯ 

ಬೆಂಗಳೂರು(ನ.21): ಮಂಗಳೂರು ಬಾಂಬ್‌ ಸ್ಫೋಟ ರಾಜ್ಯದ ಗುಪ್ತಚರ ವಿಭಾಗ ಹಾಗೂ ಗೃಹ ಇಲಾಖೆ ವೈಫಲ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಕಳವಳಕಾರಿ ಘಟನೆ ಕುರಿತು ಪೊಲೀಸರು ತ್ವರಿತಗತಿ ತನಿಖೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ರಾಜ್ಯ ಪೊಲೀಸ್‌ ಮಹಾನಿರ್ದೇಶಕರೇ ಇದೊಂದು ಭಯೋತ್ಪಾದಕ ಕೃತ್ಯ ಎಂದು ದೃಢೀಕರಿಸಿದ್ದಾರೆ. ಬಾಂಬ್‌ ಸ್ಫೋಟದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರದ ಬೇಜವಾಬ್ದಾರಿತನ, ಗುಪ್ತಚರ ವಿಭಾಗ, ಗೃಹ ಇಲಾಖೆಯ ವೈಫಲ್ಯವು ಘಟನೆಯಿಂದ ಸಾಬೀತಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಕಿಡಿಕಾರಿದ್ದಾರೆ.

ಮಂಗಳೂರು ಸ್ಫೋಟ ಭಯೋತ್ಪಾದನಾ ಕೃತ್ಯ: ಡಿಜಿಪಿ ಪ್ರವೀಣ್‌ ಸೂದ್‌ ಸ್ಪಷ್ಟನೆ

ಬಾಂಬ್‌ ಸ್ಫೋಟದ ಬಗ್ಗೆ ಸಾರ್ವಜನಿಕರು ಊಹಾಪೋಹದ ಸುದ್ದಿಗಳನ್ನು ನಂಬಬಾರದು. ಪ್ರಕರಣದಲ್ಲಿ ಉದ್ರಿಕ್ತರಾಗದೆ, ಸಂಯಮ ಮತ್ತು ಎಚ್ಚರದಿಂದ ಇರಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
 

click me!