'ಶ್ರೀರಾಮ ಒಂದು ಕಲ್ಲು' ಎಂದ ಮಂಗಳೂರಿನ ಜೆರೋಸಾ ಶಾಲಾ ಶಿಕ್ಷಕಿ ವಿರುದ್ಧ ಪೋಷಕರು ಆಕ್ರೋಶ

By Ravi JanekalFirst Published Feb 10, 2024, 3:33 PM IST
Highlights

ಮಂಗಳೂರಿನ ಜೆರೋಸಾ ಖಾಸಗಿ ಶಾಲಾ ಶಿಕ್ಷಕಿಯೋರ್ವಳು ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆಂದು ಮಕ್ಕಳು ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. 

ಮಂಗಳೂರು (ಫೆ.10): ಮಂಗಳೂರಿನ ಜೆರೋಸಾ ಖಾಸಗಿ ಶಾಲಾ ಶಿಕ್ಷಕಿಯೋರ್ವಳು ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆಂದು ಮಕ್ಕಳು ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. 

ಘಟನೆ ಸಂಬಂಧ ಪೋಷಕರೊಬ್ಬರು ಮಾಡಿರುವ ಆಡಿಯೋ ವೈರಲ್ ಆಗಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬಗ್ಗೆ ಏಷಿಯಾನೆಟ್ ಸುವರ್ಣನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಮಕ್ಕಳು ಪೋಷಕರು, ಶ್ರೀರಾಮ ಹಾಗೂ ಅಯೋಧ್ಯೆ ಮಂದಿರ ಅವಹೇಳನ ಮಾಡಿರುವ ಶಿಕ್ಷಕಿ ಪ್ರಭಾ ಎಂಬಾಕೆ ಶ್ರೀರಾಮ ಕಲ್ಲು ಅಂದ್ರಂತೆ, ಅಯೋಧ್ಯೆಯಲ್ಲಿ ಡೆಕೋರೇಷನ್ ಮಾಡಿರೋದಂತೆ' ಹಿಂಗೆಲ್ಲ ಮಕ್ಕಳ ಮುಂದೆ ಹೇಳಿ ಧರ್ಮಗಳ ಬಗ್ಗೆ ವಿಷಬೀಜ ಬಿತ್ತುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರು ಶಾಲಾ ಶಿಕ್ಷಿಕಿಯಿಂದ ಅಯೋಧ್ಯಾ, ಪ್ರಭು ಶ್ರೀರಾಮನ ಅವಹೇಳನ: ಪೋಷಕರು ಹಿಂದೂ ಕಾರ್ಯಕರ್ತರು ಆಕ್ರೋಶ

ತರಗತಿಯಲ್ಲಿ ಪಠ್ಯಕ್ಕೆ ಸಂಬಂಧ ಪಡದ ಹಿಂದೂ ಧರ್ಮ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಮಸೀದಿ ಕೆಡವಿ ರಾಮಮಂದಿರ ಕಟ್ಟುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರಂತೆ ಶಿಕ್ಷಕಿ. ಅಷ್ಟೇ ಅಲ್ಲದೆ ಮೋದಿ ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ರೈಲಿನಲ್ಲಿ ಜನರನ್ನು ಕೊಂದಿದ್ದಾರೆ ಅಂತೆಲ್ಲ ಮುಗ್ಧ ಮಕ್ಕಳಮುಂದೆ ಹೇಳಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ. ಪಾಠದ ಮಧ್ಯೆ ಇದೆಲ್ಲ ಹೇಳುವ ಅವಶ್ಯಕತೆ ಸಿಸ್ಟರ್ ಪ್ರಭಾಗೆ ಇತ್ತಾಕ? ನಾವು ಹೆಡ್‌ಮಾಸ್ಟರ್‌ ಭೇಟಿಯಾಗಿ ತರಾಟೆಗೆ ತೆಗೆದುಕೊಂಡಿದ್ದೇವೆ ಸಿಸ್ಟರ್ ಫ್ರಭಾ ಅಮಾನತ್ತು ಮಾಡುವಂತೆ ಆಗ್ರಹಿಸಿದ್ದೇವೆ. ಒಂದು ವೇಳೆ ಅಮಾನತ್ತು ಮಾಡದಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಅಂತಾ ಎಚ್ಚರಿಕೆ ನೀಡಿದ್ದೇವೆ. ಸದ್ಯ ಮೂರು ದಿನಗಳ ಕಾಲಾವಕಾಶ ನೀಡಿದ್ದೇವೆ ಅಷ್ಟರೊಳಗೆ ಅಮಾನತ್ತು ಮಾಡಡಿದ್ದಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ಪೋಷಕರು ತಿಲಿಸಿದ್ದಾರೆ. 

ಸಂಸದ ಅನಂತಕುಮಾರ್ ಹೆಗಡೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿ ಸೈಲೆಂಟ್ ಆದ NSUI!

click me!