ಅಂಬೇಡ್ಕರ್‌ಗೆ ಅವಮಾನ: ಕ್ಷಮೆ ಕೋರಿದ ಜೈನ್‌ ವಿಶ್ವವಿದ್ಯಾಲಯ

By Kannadaprabha NewsFirst Published Feb 14, 2023, 6:00 AM IST
Highlights

ತಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರು ನಾಟಕದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಅಪಮಾನಿಸುವ ಶಬ್ದ ಬಳಕೆ ಪ್ರಕರಣ ಸಂಬಂಧ ಸಾರ್ವಜನಿಕ ಆಕ್ರೋಶ ತೀವ್ರಗೊಂಡ ಬೆನ್ನಲ್ಲೇ ಜೈನ್‌ ವಿಶ್ವವಿದ್ಯಾಲಯವು ಘಟನೆ ಸಂಬಂಧ ಬೇಷರತ್ತಾಗಿ ಕ್ಷಮೆ ಯಾಚಿಸಿದೆ. 

ಬೆಂಗಳೂರು (ಫೆ.14): ತಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರು ನಾಟಕದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಅಪಮಾನಿಸುವ ಶಬ್ದ ಬಳಕೆ ಪ್ರಕರಣ ಸಂಬಂಧ ಸಾರ್ವಜನಿಕ ಆಕ್ರೋಶ ತೀವ್ರಗೊಂಡ ಬೆನ್ನಲ್ಲೇ ಜೈನ್‌ ವಿಶ್ವವಿದ್ಯಾಲಯವು ಘಟನೆ ಸಂಬಂಧ ಬೇಷರತ್ತಾಗಿ ಕ್ಷಮೆ ಯಾಚಿಸಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕಾಲೇಜಿನ ಯುವಜನೋತ್ಸವದಲ್ಲಿ ವಿದ್ಯಾರ್ಥಿಗಳು ಕಿರುನಾಟಕವೊಂದನ್ನು ಪ್ರದರ್ಶಿಸಿದ್ದರು. ಸಮಾಜದಲ್ಲಿನ ತಾರತಮ್ಯವನ್ನು ಕೊನೆಗೊಳಿಸುವುದು, ಜಾತಿ, ಧರ್ಮ, ಲಿಂಗ ಭೇದಗಳನ್ನು ಅಳಿಸಿ ಸಮಾನತೆಯನ್ನು ತರುವ ಸಂದೇಶ ಸಾರುವ ನಿಟ್ಟಿನಲ್ಲಿ ಕಿರು ನಾಟಕ ಹೆಣೆಯಲಾಗಿತ್ತು. 

ಆದರೆ ನಾಟಕದ ಕೆಲ ಸಂಭಾಷಣೆಯಲ್ಲಿ ಬಳಸಲಾದ ಕೆಲವು ನಿರ್ದಿಷ್ಟಶಬ್ದಗಳು ಆಕ್ಷೇಪಾರ್ಹವಾಗಿದ್ದವು. ಇದು ಗಮನಕ್ಕೆ ಬಂದ ಕೂಡಲೇ ವಿಶ್ವವಿದ್ಯಾಲಯವು ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ. ಈ ಘಟನೆಯ ಬಗ್ಗೆ ವಿಚಾರಣೆ ನಡೆಸಿದ ಸಂಸ್ಥೆಯು ಅಗತ್ಯ ಶಿಸ್ತು ಕ್ರಮಗಳನ್ನು ಕೈಗೊಂಡಿದೆ. ಈ ಕಿರುನಾಟಕದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ವಿರುದ್ಧ ಬಳಸಲಾದ ಪದಗಳನ್ನು ಸ್ವತಃ ಖಂಡಿಸಿರುವ ವಿಶ್ವವಿದ್ಯಾಲಯವು ಎಲ್ಲರಲ್ಲೂ ಕ್ಷಮೆ ಯಾಚಿಸುತ್ತದೆ ಎಂದು ಜೈನ್‌ ವಿವಿಯ ಕುಲಸಚಿವರು ತಿಳಿಸಿದ್ದಾರೆ.

Latest Videos

ಕರ್ನಾಟಕದಲ್ಲಿ ಸಿನಿಮಾ ಸ್ಕೂಲ್‌ ಸ್ಥಾಪನೆ ಆಗಲಿ: ನಿರ್ದೇಶಕ ಸತ್ಯಪ್ರಕಾಶ್‌

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಬಗ್ಗೆ ತಮಗೆ ಹಾಗೂ ವಿಶ್ವವಿದ್ಯಾಲಯಕ್ಕೆ ಅಪಾರವಾದ ಗೌರವವಿದೆ. ಜೈನ್‌ ವಿಶ್ವವಿದ್ಯಾಲಯ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೇಂದ್ರಗಳು ಯಾವಾಗಲೂ ಜಾತ್ಯತೀತ ನೀತಿ ಹಾಗೂ ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತಗಳು, ಸಂವಿಧಾನ ಬದ್ಧವಾಗಿ ನಡೆಯುತ್ತಾ ಬಂದಿದೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ಇದರಲ್ಲಿ ಇರಲಿಲ್ಲ. ಆದರೆ, ಗಮನಕ್ಕೆ ಬರದೆ ಕೆಲ ತಪ್ಪುಗಳಾಗಿರುವುದನ್ನು ಒಪ್ಪಿಕೊಂಡಿದೆ. ಪ್ರದರ್ಶಿಸಿದ ಕಿರು ನಾಟಕದಲ್ಲಿ ಬಳಸಲಾದ ಕೆಲವು ಆಕ್ಷೇಪಾರ್ಯ ಪದ ಬಳಿಕೆಯಿಂದ ನೋವು ಅನುಭವಿಸಿದ ಎಲ್ಲರಲ್ಲಿ ಜೈನ್‌ ವಿಶ್ವವಿದ್ಯಾಲಯ ಬೇಷರತ್‌ ಕ್ಷಮೆ ಯಾಚಿಸುತ್ತದೆ ಎಂದು ಕುಲಸಚಿವರು ಹೇಳಿದ್ದಾರೆ.

ಗೋಡ್ಸೆ ಪೂಜಿಸುವವರು ನಮಗೇನು ಪಾಠ ಮಾಡ್ತಾರೆ?: ಸಿದ್ದರಾಮಯ್ಯ

ಏನಾಗಿತ್ತು: ಫೆಬ್ರವರಿ 5ರಂದು ಜೈನ್‌ ವಿವಿಯಲ್ಲಿ ನಡೆದ ಯುವ ಜನೋತ್ಸವದಲ್ಲಿ ವಿವಿಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿರು ನಾಟಕದಲ್ಲಿ ಅಂಬೇಡ್ಕರ್‌ ಅವರ ಬಗ್ಗೆ, ಅಸ್ಪೃಶ್ಯತೆ ಕುರಿತು ಅವಹೇಳನ ಸಂಭಾಷಣೆಯೊಂದಿಗೆ ಪ್ರದರ್ಶಿಸಿದ ಆರೋಪ ಕೇಳಿಬಂದಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ವಿಚಾರ ಗಮನಕ್ಕೆ ಬಂದ ಕೂಡಲೇ ಜೈನ್‌ ವಿಶ್ವವಿದ್ಯಾಲಯವು ಸ್ಕಿಟ್‌ ರೂಪಿಸಿದ್ದ ಆರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತ್ತು. ಅಲ್ಲದೆ, ಘಟನೆ ಬಗ್ಗೆ ವರದಿ ನೀಡಲು ಶಿಸ್ತು ಸಮಿತಿಯನ್ನು ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!