
ಮೈಸೂರು (ಮಾ.9): ಮುಡಾ ನಿವೇಶನ ಪ್ರಕರಣದ ತನಿಖಾ ಪ್ರಕ್ರಿಯೆ ಮುಗಿದ ಮೇಲೆ ಕೋರ್ಟ್ ಮೂಲಕವೇ 14 ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ನಮ್ಮ ತಾಯಿ ನಿರ್ಧರಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ. ನೋಟಿಸ್‌ನಿಂದ ನಮ್ಮ ತಾಯಿ ಮನಸಿಕವಾಗಿ ನೊಂದಿದ್ದರು. ಈಗ ಹೈ ಕೋರ್ಟ್ ಇಸಿಆರ್ ರದ್ದು, ವಿಚಾರಣೆಗೆ ಹಾಜರಾಗಲು ನೀಡಿದ್ದ ಸಮನ್ಸ್ ವಜಾ ಮಾಡಿ ತೀರ್ಪು ನೀಡಿದ್ದರಿಂದ ಸಮಾಧಾನವಾಗಿದೆ. ನಮ್ಮ ತಂದೆಯನ್ನು ಈ ಪ್ರಕರಣದಲ್ಲಿ ವಿನಾ ಕಾರಣ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಈ ಕಾರಣಕ್ಕಾಗಿ ನಾವು 14 ಸೈಟ್ ಗಳನ್ನು ವಾಪಸ್ಸು ಕೊಟ್ಟಿದ್ದೆವು. ನ್ಯಾಯ ಪ್ರಕಾರವಾಗಿ ನಮಗೆ ಆ ಸೈಟ್ ಗಳು ಬರಬೇಕಿದೆ ಎಂದು ಯತೀಂದ್ರ ವಾದಿಸಿದರು.
ಇದನ್ನೂ ಓದಿ: ಕಾಂಗ್ರೆಸ್‌ನ ನಟ್ಟು, ಬೋಲ್ಟು ಟೈಟ್ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯತ್ನ!
ಅವತ್ತಿನ ಸಂದರ್ಭದಲ್ಲಿ ನಮಗೆ ಸೈಟ್ ವಾಪಸ್ಸು ಕೊಡಬೇಕಾದ ವಾತಾವರಣ ನಿರ್ಮಾಣ ಮಾಡಿದ್ದರು. ವಿನಾಕಾರಣ ಟೀಕೆ ನಾವು ನಿಲ್ಲಿಸಬೇಕಾಗಿತ್ತು. ಹೀಗಾಗಿ ನಾವು ಸೈಟ್ ವಾಪಸ್ಸು ಕೊಟ್ಟಿದ್ದೆವು. ನಮ್ಮದು ತಪ್ಪಿಲ್ಲ ಎಂದು ತನಿಖಾ ವರದಿ ಬಂದಿದೆ. ಅದ್ದರಿಂದ ಸೈಟ್ ಹಿಂದಕ್ಕೆ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ