
ನವದೆಹಲಿ(ಡಿ.03): ಭೂಕುಸಿದ ಕುರಿತು ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯೊಂದು ಮುಂದಿನ ವರ್ಷ ಕರ್ನಾಟಕದಲ್ಲಿ ಪ್ರಾಯೋಜಿಕವಾಗಿ ಜಾರಿಯಾಗಲಿದೆ. ಭಾರತೀಯ ಭೌಗೋಳಿಕ ಸಮೀಕ್ಷೆ(ಜಿಎಸ್‌ಐ), ಗಣಿ ಸಚಿವಾಲಯವು ಬ್ರಿಟನ್ ಭೌಗೋಳಿಕ ಸಮೀಕ್ಷೆಯ ಸಹಭಾಗಿತ್ವದಲ್ಲಿ ಭಾರತಕ್ಕೆ ಸರಿಹೊಂದುವ ಮತ್ತು ಮುಂಚಿತವಾಗಿಯೇ ಪ್ರಾದೇಶಿಕ ಭೂಕುಸಿತ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯನ್ನು 2020ರಿಂದಲೇ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮತ್ತು ತಮಿಳುನಾಡಿನ ನೀಲಗಿರೀಸ್‌ನಲ್ಲಿ ಪರೀಕ್ಷೆಗೊಳಪಡಿಸಲಾಗುತ್ತಿದೆ.
2021ರಲ್ಲಿ ಉತ್ತರಾಖಂಡ್, ಕೇರಳ, ಸಿಕ್ಕಿಂಗಳಿಗಾಗಿ ಇಂಥ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬಳಿಕ 2022ರಲ್ಲಿ ಕರ್ನಾಟಕ, ಹಿಮಾಚಲ ಪ್ರದೇಶ, ಅಸ್ಸಾಂ, ಮೇಘಾಲಯ ಮತ್ತು ಮಿಜೋರಂಗಳಿಗಾಗಿ ಇಂಥ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತದೆ ಎಂದು ಜಿಎಸ್‌ಐ ಹೇಳಿದೆ. ಈ ವ್ಯವಸ್ಥೆ ಆಧರಿಸಿ 2020ರಿಂದಲೇ ಜಿಎಸ್‌ಐ ಡಾರ್ಜಿಲಿಂಗ್ ಮತ್ತು ನೀಲ್‌ಗಿರೀಸ್‌ನಲ್ಲಿ ಭೂಕುಸಿತದ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಾ ಇದೆ.
Landslides on Tirumala ghat: ಜಸ್ಟ್ ಮಿಸ್, 20 ಮಂದಿ ಪ್ರಣಾಪಾಯದಿಂದ ಬಚಾವ್
LANDSLIP ಪ್ರಸ್ತುತ ಭಾರತದ ಅನೇಕ ಭೂಕುಸಿತ-ಪೀಡಿತ ರಾಜ್ಯಗಳಲ್ಲಿ ಇದೇ ರೀತಿಯ ಪ್ರಯತ್ನವನ್ನು ಕೈಗೊಳ್ಳಲು ಪ್ರಾದೇಶಿಕ LEWS ನ ಮೇಲಿನ ಸಾಧನಗಳನ್ನು ರಾಷ್ಟ್ರೀಯ ನೋಡಲ್ ಏಜೆನ್ಸಿಗೆ (GSI) ವರ್ಗಾಯಿಸುವ ಪ್ರಕ್ರಿಯೆಯಲ್ಲಿದೆ. 2020 ಮಾನ್ಸೂನ್‌ನಿಂದ, GSI ಪರೀಕ್ಷೆ ಮತ್ತು ಮೌಲ್ಯಮಾಪನಕ್ಕಾಗಿ ಎರಡು ಪ್ರಾಯೋಗಿಕ ಪ್ರದೇಶಗಳಲ್ಲಿ ಜಿಲ್ಲಾಡಳಿತಗಳಿಗೆ ಮಾನ್ಸೂನ್ ಸಮಯದಲ್ಲಿ ದೈನಂದಿನ ಭೂಕುಸಿತ ಮುನ್ಸೂಚನೆ ಬುಲೆಟಿನ್‌ಗಳನ್ನು ನೀಡಲು ಪ್ರಾರಂಭಿಸಿದೆ.
GSI 2021 ರಿಂದ ಉತ್ತರಾಖಂಡ, ಕೇರಳ, ಸಿಕ್ಕಿಂನಂತಹ ಇತರ ಪರೀಕ್ಷಾ ಪ್ರದೇಶಗಳಲ್ಲಿ R&D ಚಟುವಟಿಕೆಗಳನ್ನು ಮತ್ತು ಪ್ರಾದೇಶಿಕ LEWS ಅನ್ನು ಅಭಿವೃದ್ಧಿಪಡಿಸಲು ನೆಲದ ಕೆಲಸವನ್ನು ಪ್ರಾರಂಭಿಸಲಾಗಿದೆ. 2022 ರ ವೇಳೆಗೆ ಐದು ಹೆಚ್ಚುವರಿ ರಾಜ್ಯಗಳನ್ನು ಸೇರಿಸುವ ಯೋಜನೆಯನ್ನು ಹೊಂದಿದೆ - ಹಿಮಾಚಲ ಪ್ರದೇಶ, ಕರ್ನಾಟಕ, ಅಸ್ಸಾಂ, ಮೇಘಾಲಯ ಮತ್ತು ಮಿಜೋರಾಂ.
ತಿರುಮಲ ಘಾಟ್ ಕುಸಿತ:
ಭಾರಿ ಮಳೆಯಿಂದಾಗಿ ತಿರುಪತಿ ಬೆಟ್ಟದಲ್ಲಿ ಮತ್ತೊಮ್ಮೆ ಭೂಕುಸಿತ ಸಂಭವಿಸಿದ್ದು, ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಬುಧವಾರ ನಡೆದಿದೆ. ಬುಧವಾರ ಬೆಳಗ್ಗೆ ಬಸ್ಸೊಂದು ಬೆಟ್ಟಏರುತ್ತಿದ್ದ ವೇಳೆ, ಏಕಾಏಕಿ ಬಂಡೆಯೊಂದು ಬೆಟ್ಟದಿಂದ ಕೆಳಗೆ ಉರುಳಿದೆ. ಇದನ್ನು ಚಾಲಕ ತಕ್ಷಣವೇ ಗಮನಿಸಿ ಬಸ್ಸನ್ನು ನಿಲ್ಲಿಸಿದ ಕಾರಣ, ಬಸ್ಸಿನಲ್ಲಿದ್ದ 20 ಜನರು ಪ್ರಾಣಾಪಾಯದಿಂದ ಪಾರಾಗಿದ್ದರೆ. ತಿರುಪತಿ ಬೆಟ್ಟದ 2ನೇ ಘಾಟ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದ್ದು, ಸಂಚಾರವನ್ನು ಬಂದ್ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ.
ಸುಮಾರು ಅಡಿ ಎತ್ತರದಿಂದ ಬಂಡೆಗಳು ಉರುಳಿ ಬಿದ್ದ ಪರಿಣಾಮ ಹಲವು ಕಾರುಗಳು ಸೇರಿ ರಸ್ತೆಗಳು ಹಾನಿಗೊಳಗಾಗಿವೆ. ಐಐಟಿ ದೆಹಲಿಯ ತಜ್ಞರು ಅವಗಢ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಕೂಡಾ ಭಾರೀ ಮಳೆ ಸುರಿದ ಪರಿಣಾಮ ತಿರುಪತಿಯಲ್ಲಿ ಭಾರೀ ಅನಾಹುತ ಸಂಭವಿಸಿತ್ತು. ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ವಿಜಿಲೆನ್ಸ್, ಎಂಜಿನಿಯರಿಂಗ್ ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತೆಯಿಂದ ಬಂಡೆಗಳನ್ನು ತೆಗೆಯುವ ಮೇಲ್ವಿಚಾರಣೆ ನಡೆಸಿದರು.
ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಡೆಯೂ ಭೂಕುಸಿತ ಅತ್ಯಂತ ಸಾಮಾನ್ಯವಾಗಿಬಿಟ್ಟಿದೆ. ಕೆಲವು ದಿನ ಮಳೆ ಬಂದರೂ ಮನೆಗಳೂ, ರಸ್ತೆಗಳೂ ಕುಸಿಯುವು ಭಯನಾಕತೆಯನ್ನು ನೋಡಬೇಕಾಗುತ್ತದೆ. ಇದು ಮತ್ತಷ್ಟು ಅಪಾಯಕ್ಕೆ ಕಾರಣವಾಗಿದೆ. ತಿರುಪತಿಯಲ್ಲಿ ಸುರಿದ ಧಾರಕಾರ ಮಳೆಯಿಂದಾಗಿ ಸಾಕಷ್ಟು ನಾಶ ನಷ್ಟ ಸಂಭವಿಸಿದೆ. ಈ ನಿಟ್ಟಿನಲ್ಲಿ ಈ ಹೊಸ ತಂತ್ರಜ್ಞಾನ ಬಹಳಷ್ಟು ರಾಜ್ದಗಳಿಗೆ ನೆರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ