2047ರ ವೇಳೆಗೆ ಭಾರತ ಸೂಪರ್‌ ಪವರ್‌: ಶೋಭಾ ಕರಂದ್ಲಾಜೆ

By Kannadaprabha NewsFirst Published Aug 24, 2023, 10:58 AM IST
Highlights

2047ರ ವೇಳೆಗೆ ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಉಡುಪಿ (ಆ.24): 2047ರ ವೇಳೆಗೆ ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಅವರು ಬುಧವಾರ, ಮಂಗಳೂರಿನ ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯಗಳ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ, ಬಡವರ ಕಲ್ಯಾಣ, ಪ್ರಧಾನ ಮಂತ್ರಿ ಮಿಷನ್‌ ಫಾರ್‌ ಇಂಡಿಯಾ - 2047, ಕೇಂದ್ರ ಸರ್ಕಾರದ ಯೋಜನೆಗಳು, ಪಿಎಂ ಪ್ರಣಾಮ್‌ ಹಾಗೂ ಏಕ್‌ ಭಾರತ್‌ ಶ್ರೇಷ್‌್ಠ ಭಾರತ್‌ ಕುರಿತು ನಗರದ ಪೂರ್ಣಪ್ರಜ್ಞ ಕಾಲೇಜಿನ ಅಡಿಟೋರಿಂನಲ್ಲಿ ನಡೆದ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. 

ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

ಶಾಸಕ ಯಶಪಾಲ್‌ ಸುವರ್ಣ, ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ, ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಜಿ.ತುಕಾರಾಮ ಗೌಡ ಉಪಸ್ಥಿತರಿದ್ದರು. ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಛಾಯಾ ಚಿತ್ರ ಪ್ರದರ್ಶನ ಹಾಗೂ ಉಡುಪಿ ಕೈಮಗ್ಗ ಸೀರೆ, ಸಾಂಪದಾಯಿಕ ಶೈಲಿಯ ಬುಟ್ಟಿಗಳ ಪ್ರದರ್ಶನ ಜರುಗಿತು.

ಪ್ರಕಾಶ್‌ ರೈ ದೇಶ ಬಿಟ್ಟು ಹೋಗಲಿ: ಇಡಿ ವಿಶ್ವವೇ ಭಾರತದ ಇಸ್ರೊವನ್ನು ಕೊಂಡಾಡುತ್ತಿದೆ, ಆದರೆ ನಟ ಪ್ರಕಾಶ್‌ ರೈ ಇಸ್ರೋವನ್ನು ಗೇಲಿ ಮಾಡುತ್ತಿದ್ದಾರೆ. ಅಂತವರು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ, ಅವರು ಭಾರತ ಬಿಟ್ಟು ಹೋಗಲಿ ಎಂದು ಕೇಂದ್ರ ರೈತ - ಕೃಷಿ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್‌ ರೈ ಅವರು ಚಂದ್ರಯಾನದಂತಹ ವಿಷಯವನ್ನು ಗೇಲಿ, ತಮಾಷೆ ಮಾಡಿರುವುದು, ನಮ್ಮ ವಿಜ್ಞಾನಿಗಳಿಗೆ ಮಾಡುತ್ತಿರುವ ಅಪಮಾನ, ಭಾರತಕ್ಕೆ ಮಾಡುತ್ತಿರುವ ಅಪಮಾನ ಎಂದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಕಾಶ್‌ ರೈ ಭಾರತವನ್ನು ಪ್ರೀತಿಸುವುದಿಲ್ಲ, 

ತಕರಾರು ಅರ್ಜಿ ಸಲ್ಲಿಸದೆ ತಮಿಳುನಾಡಿಗೆ ನೀರು ಬಿಡುಗಡೆ: ಸರ್ಕಾರಕ್ಕೆ ವಿಪಕ್ಷ ಚಾಟಿ

ಆದರೆ ಅವರಿಗೆ ಭಾರತದ ಗಾಳಿ ನೀರು ಅನ್ನ ಬೇಕು, ಅವರ ದೇಹ ಮಾತ್ರ ಇಲ್ಲಿದೆ, ಮನಸ್ಸು ಬೇರೆಲ್ಲೋ ಇದೆ. ಆದ್ದರಿಂದ ಭಾರತದ ಬಗ್ಗೆ ಇಷ್ಟುದುಃಖಪಟ್ಟು ಇಲ್ಲಿರಬೇಕಾದ ಅವಶ್ಯಕತೆ ಇಲ್ಲ, ಅವರ ಮನಸ್ಸು ಎಲ್ಲಿದೆಯೋ ಅಲ್ಲಿಗೆ ಹೋಗಲಿ, ಅಲ್ಲಿ ಅವರು ಹೆಚ್ಚು ಖುಷಿಯಾಗಿ, ಆನಂದವಾಗಿರಬಹುದು ಎಂದು ಶೋಭಾ ಕರಂದ್ಲಾಜೆ ಹೇಳಿದರು.

click me!