ನಾಳೆ ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್; ಅಪರೇಷನ್ ಅಭ್ಯಾಸ್ ವೀಕ್ಷಿಸಲು ಜಿಲ್ಲಾಧಿಕಾರಿ ಮನವಿ

Published : May 08, 2025, 08:46 PM IST
ನಾಳೆ ರಾಯಚೂರಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್; ಅಪರೇಷನ್ ಅಭ್ಯಾಸ್ ವೀಕ್ಷಿಸಲು ಜಿಲ್ಲಾಧಿಕಾರಿ ಮನವಿ

ಸಾರಾಂಶ

ಕೇಂದ್ರ ಗೃಹಸಚಿವಾಲಯವು ರಾಯಚೂರು ಸೇರಿದಂತೆ 244 ಜಿಲ್ಲೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಿದೆ. ಮೇ 9 ರಂದು ಆರ್‌ಟಿಪಿಎಸ್ ಹೆಲಿಪ್ಯಾಡ್‌ನಲ್ಲಿ ನಾಗರಿಕ ರಕ್ಷಣಾ ಅಣಕು ಪ್ರದರ್ಶನ 'ಆಪರೇಷನ್ ಅಭ್ಯಾಸ್' ನಡೆಯಲಿದೆ. ಯುದ್ಧದಂತಹ ಸನ್ನಿವೇಶಗಳನ್ನು ಎದುರಿಸಲು ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶ.

ರಾಯಚೂರು (ಮೇ.8): ದೇಶದಲ್ಲಿ ಯುದ್ಧ ಸಂಭವಿಸುವ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹಸಚಿವಾಲಯ ದೇಶದ 244 ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಲಾಗಿದ್ದು,  ಈ ಪೈಕಿ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು, ಮಲ್ಲೇಶ್ವರಂ ಹಾಗೂ ಕಾರವಾರ ಮತ್ತು ರಾಯಚೂರು ಮೂರು ಜಿಲ್ಲೆಗಳನ್ನು ಅತಿ ಸೂಕ್ಷ್ಮ ಜಿಲ್ಲೆಗಳೆಂದು ಗುರುತಿಸಿರುತ್ತಾರೆ. ಕೇಂದ್ರ ಗೃಹಸಚಿವಾಲಯದ ನಿರ್ದೇಶನದಂತೆ ಈ ಜಿಲ್ಲೆಗಳು ಮುಂದೆ ಆಗಬಹುದಾದ 
ಎಲ್ಲಾ ರೀತಿಯ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸನ್ನದ್ದರಾಗಿರಲು 
ನಾಗರಿಕ ರಕ್ಷಣಾ ಅಣುಕು ಪ್ರದರ್ಶನ(Civil Defence Excersise/Mock Drill) ಕಾರ್ಯಕ್ರಮವನ್ನು 'ಅಪರೇಷನ್ ಅಭ್ಯಾಸ್" (Operation Abhyas) ಆಯೋಜಿಸಲು ನಿರ್ದೇಶಿಸಿರುತ್ತಾರೆ.

ಇದನ್ನೂ ಓದಿ: Operation Abhyas: ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆ ಮಾಕ್‌ ಡ್ರಿಲ್‌, MHA ನೋಟಿಸ್‌

ಮುಂದುವರೆದು ರಾಯಚೂರ ಜಿಲ್ಲೆಯ ಶಕ್ತಿನಗರದ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರದ (RTPS) ಹೆಲಿಪ್ಯಾಡ್ ಆವರಣದಲ್ಲಿ 'ಆಪರೇಷನ್ ಅಭ್ಯಾಸ್' (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise/Mock Drill) ನ್ನು ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಮೇ.9ರಂದು ಸಂಜೆ 
4 ಗಂಟೆಗೆ ಆಯೋಜಿಸಲಾಗಿದೆ. 

ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶವು ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ, ಒಂದು ವೇಳೆ ಯುದ್ಧ ಸಂಭವಿಸಿದಲ್ಲಿ ಅಥವಾ ಇಂತಹ ಯಾವುದೇ ಘಟನೆ ಜರುಗಿದ್ದಲ್ಲಿ ಭಯಭಿತರಾಗದೇ, ಯುದ್ಧದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸಲು ತೆಗೆದುಕೊಳ್ಳಬೇಕಾದ ಮುಂಜಾಗೃತಾ ಕ್ರಮಗಳನ್ನು ಅಣಕು ಪ್ರದರ್ಶನದ ಮೂಲಕ ವಿವರಿಸಿ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಸ್ಥರಲ್ಲಿ ಆತ್ಮಸ್ಥೆರ್ಯ ತುಂಬುವಂತಹ ಕಾರ್ಯಕ್ರಮವಾಗಿರುತ್ತದೆ.

ಇದನ್ನೂ ಓದಿ: ಭಾರತ ಪಾಕಿಸ್ತಾನದ ಮಧ್ಯೆ ಪರಮಾಣು ಯುದ್ಧ ಶುರುವಾದ್ರೆ ಸಾಮಾನ್ಯ ಜನರು ಬಚಾವ್‌ ಆಗಲು ಏನೇನು ಮಾಡಬೇಕು? Tips

ಈ ಒಂದು 'ಆಪರೇಷನ್ ಅಭ್ಯಾಸ್" (Operation Abhyas) ನಾಗರಿಕ ರಕ್ಷಣಾ ಅಣಕು ಪ್ರದರ್ಶನ (Civil Defence Excercise Mock Drill) ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಅಗ್ನಿಶಾಮಕ ದಳ, ಜಿಲ್ಲಾ ಆರೋಗ್ಯ ಇಲಾಖೆ. ಎಸ್.ಡಿ.ಆರ್.ಎಫ್. ಸಿ.ಐ.ಎಸ್.ಎಫ್. ಎನ್.ಸಿ.ಸಿ ಮತ್ತು ಎನ್.ಎಸ್.ಎನ್ ಸ್ವಯಂ ಸೇವಕರು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರಣ ಶಕ್ತಿನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವಾಸಿಸುವ ಎಲ್ಲಾ ನಾಗರಿಕರು ಈ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೀಶ್. ಕೆ. ಮಾನವಿ ಮಾಡಿದ್ದಾರೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌