ಭಾರತ ಜಾತ್ಯಾತೀತ ರಾಷ್ಟ್ರ, ಇಲ್ಲಿ ನೂರು ಕೋಟಿ ಮಸ್ಲಿಂ ಜನಸಂಖ್ಯೆ ಆದರೂ ತೊಂದರೆ ಇಲ್ಲ: ಶಫಿ ಸಾಧಿ

Published : Jun 12, 2025, 12:33 PM ISTUpdated : Jun 12, 2025, 12:35 PM IST
Shafi Saadi

ಸಾರಾಂಶ

2050ರ ವೇಳೆಗೆ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಪ್ಯೂ ಸಂಶೋಧನಾ ಕೇಂದ್ರ ವರದಿ ಮಾಡಿದೆ. ಮುಸ್ಲಿಮರ ಸರಾಸರಿ ವಯಸ್ಸು ಕಡಿಮೆ ಇರುವುದರಿಂದ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ವರದಿ ಹೇಳಿದೆ. ಈ ಬಗ್ಗೆ ಮುಸ್ಲಿಂ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಜೂ.12): 2050ರ ವೇಳೆಗೆ ವಿಶ್ವದಲ್ಲಿಯೇ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಅಮೇರಿಕನ್ ಚಿಂತಕರ ಚಾವಡಿ ಪ್ಯೂ ಸಂಶೋಧನಾ ಕೇಂದ್ರ ವರದಿ ನೀಡಿದ ಬೆನ್ನಲ್ಲಿಯೇ ಭಾರತದಲ್ಲಿ ಇದರ ಚರ್ಚೆ ಜೋರಾಗಿದೆ. ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ಇದೇ ವರದಿ ತಿಳಿಸಿದೆ.

ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಮರು ಅತ್ಯಂತ ಕಿರಿಯ ಸರಾಸರಿ ವಯಸ್ಸು (30) ಹೊಂದಿರುವುದರಿಂದ, ಅದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಗುಂಪು ಎಂದು ವರದಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡ ಮೌಲಾನಾ ಶಫಿ ಸಾಧಿ, 'ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ನೂರು ಕೋಟಿ ಮುಸ್ಲಿಂ ಜನಸಂಖ್ಯೆ ಆದರೂ ತೊಂದರೆ ಇಲ್ಲ' ಎಂದು ಹೇಳಿದ್ದಾರೆ.

'ಜಗತ್ತಿನಲ್ಲಿ ಇಸ್ಲಾಂ ಜನಸಂಖ್ಯೆ ಏರಿಕೆಯಾಗಿರುವುದು ಆತಂಕದ ವಿಚಾರವಲ್ಲ. ಜಗತ್ತಿನಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆಯಾಗಿದೆ. ವಿಶ್ವಸಂಸ್ಥೆಗೆ ಆ ಆತಂಕ ಇಲ್ಲ. ಜನಸಂಖ್ಯೆ ಏರಿಕೆ ಅಭಿವೃದ್ಧಿಗೆ ಅತ್ಯಗತ್ಯ. ಚೀನಾದಲ್ಲಿ ಮೊದಲು ಒಂದು ಮಗು ಸಾಕು ಅಂತ ಕಾನೂನು ಮಾಡಿದ್ದರು. ಈಗ ಅಲ್ಲಿ ಮಕ್ಕಳನ್ನು ಹೆರುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಯಾವುದೇ ಸ್ತ್ರೀ ಆದರೂ ಹೆರಲು ಒಂಭತ್ತು ತಿಂಗಳು ಆಗಲೇ ಬೇಕು. ಮುಸ್ಲಿಮರಲ್ಲೂ ಫರ್ಟಿಲಿಟಿ ರೇಟ್ ಕಡಿಮೆ ಆಗಿದೆ' ಎಂದು ಹೇಳಿದ್ದಾರೆ.

'ಟಿಪ್ಪು ಸುಲ್ತಾನ್, ಔರಂಗಜೇಬ್ ಇವರೆಲ್ಲಾ ಆಡಳಿತ ಮಾಡಿದ್ದಾಗಲೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಮತಾಂತರ ಆಗಿಲ್ಲ ಅಂತ ಹೇಳಲ್ಲ, ಎಲ್ಲಾ ಸಂದರ್ಭದಲ್ಲಿ ಆಗಿದೆ. ಟಿಪ್ಪು ಸುಲ್ತಾನ್ ಅಭಿವೃದ್ಧಿ ಮಾಡಿದ್ದನ್ನು ಮತಾಂತರ ಅಂತ‌ ಹೇಳಿ ಮುಚ್ಚಿ ಹಾಕುತ್ತಿದ್ದಾರೆ. ಭಾರತ ಜಾತ್ಯಾತೀತ ರಾಷ್ಟ್ರ,ಮುಸ್ಲಿಂ ಜನಸಂಖ್ಯೆ ನೂರು ಕೋಟಿ ಆದರೂ ಸಮಸ್ಯೆ ಆಗೋದಿಲ್ಲ. ಸಾಮರಸ್ಯದ ಭೂಮಿ ಇದು. ಇತರ ಧರ್ಮಗಳ ಜನಸಂಖ್ಯೆ ಕಡಿಮೆ ಆಗಿರುವುದಕ್ಕೆ ಸಾಕಷ್ಟು ಕಾರಣ ಇದೆ. ಧರ್ಮದ ಸಿದ್ದಾಂತದ ಮೇಲೆ ಡಿಸೈಡ್ ಆಗುತ್ತೆ. ಬೌದ್ಧ ಧರ್ಮ ಅಹಿಂಸೆಯನ್ನು ಸಾರುವುದರಲ್ಲಿ ಮುಂಚೂಣಿಯಲ್ಲಿದೆ. ಆದರೆ ಧರ್ಮ ಪ್ರಚಾರಕರು ಎಡವಿದ್ದಾರೆ. ಅದನ್ನು ಸರಿ ಮಾಡಿಕೊಂಡು ಹೋದರೆ ಸಂಖ್ಯೆ ಕಡಿಮೆ ಆಗುವುದಿಲ್ಲ. ಜಗತ್ತಿನಲ್ಲಿ ನಾಸ್ತಿಕರ ಸಂಖ್ಯೆ ಏರುತ್ತಿರುವುದು ಆತಂಕ .ನಾಸ್ತಿಕವಾದ ಹೆಚ್ಚಾಗುತ್ತಿರುವ ಬಗ್ಗೆ ಎಲ್ಲಾ ಧಾರ್ಮಿಕ ಮುಖಂಡರು ಗಮನ ಹರಿಸಬೇಕು. ಏಕೆಂದರೆ, ದೇವರ ಬಗ್ಗೆ ನಂಬಿಕೆ ಹೊರಟು ಹೋದಾಗ ಜನ ನ್ಯಾಯಯುತ ಹಾದಿಯಲ್ಲಿ ಹೋಗುವುದಿಲ್ಲ. ಹಾಗಾಗಿ ನಾಸ್ತಿಕವಾದ ಜಗತ್ತಿನ ಅಭಿವೃದ್ದಿಗೆ ಮಾರಕ' ಎಂದು ಹೇಳಿದ್ದಾರೆ.

ವರದಿಯ ಇತರ ಅಂಶಗಳಲ್ಲಿ, ಮುಂಬರುವ ದಶಕಗಳಲ್ಲಿ ವಿಶ್ವದ ಜನಸಂಖ್ಯೆಯು ಶೇಕಡಾ 35 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಮುಸ್ಲಿಮರ ಸಂಖ್ಯೆ ಶೇಕಡಾ 73 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಮುಖವಾಗಿ 2050 ರ ಹೊತ್ತಿಗೆ ಮುಸ್ಲಿಮರ ಸಂಖ್ಯೆ 2.8 ಬಿಲಿಯನ್‌ಗೆ ತಲುಪುವ ಸಾಧ್ಯತೆ ಇದೆ. 2050ರ ವೇಳೆಗೆ ಭಾರತವು 31 ಕೋಟಿ ಮುಸ್ಲಿಮರನ್ನು ಹೊಂದಲಿದ್ದು, ಜಾಗತಿಕ ಮುಸ್ಲಿಂ ಜನಸಂಖ್ಯೆಯ 11% ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ. 2010 ರಲ್ಲಿ, ಮುಸ್ಲಿಮರ ಒಟ್ಟು ಜನಸಂಖ್ಯೆಯ 14.4% ರಷ್ಟಿತ್ತು. ಆದರೆ 2050ರ ವೇಳೆಗೆ ಇದು 18.4% ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಜಗತ್ತಿನಲ್ಲೇ ಅತಿಹೆಚ್ಚು ಮುಸ್ಲಿಮರು ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇದರ ಪ್ರಮಾಣ ಶೇ. 62ರಷ್ಟಿದೆ. ಇದರಲ್ಲಿ ಇಂಡೋನೇಷ್ಯಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್ ಮತ್ತು ಟರ್ಕಿಯಲ್ಲಿ ದೊಡ್ಡ ಜನಸಂಖ್ಯೆ ಸೇರಿದೆ. ಪ್ರಸ್ತುತ, ಇಂಡೋನೇಷ್ಯಾ ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!