ಕರ್ನಾಟಕದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

By Suvarna NewsFirst Published Aug 14, 2020, 7:02 PM IST
Highlights

ಸ್ವಾತಂತ್ರ್ಯೋತ್ಸವ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ ರಾಜ್ಯದ 19 ಮಂದಿ ಪೊಲೀಸರ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ.

ಬೆಂಗಳೂರು, (ಆ.14): ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೊಲೀಸರ ಗಣನೀಯ ಸೇವೆ ಪರಿಗಣಿಸಿ ನೀಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 19 ಪೊಲೀಸರು ಭಾಜನರಾಗಿದ್ದಾರೆ.

BSY ಹೆಸರಲ್ಲಿ ನಕಲಿ ಟ್ವೀಟ್, ರಿಲಯನ್ಸ್ ತೆಕ್ಕೆಗೆ ಟಿಕ್‌ಟಾಕ್? ಆ.14ರ ಟಾಪ್ 10 ಸುದ್ದಿ!

ಕೇಂದ್ರ ಗೃಹ ಇಲಾಖೆಯು ರಾಷ್ಟ್ರ ಪದಕಕ್ಕೆ ಆಯ್ಕೆಯಾದವರನ್ನು ಪಟ್ಟಿಯನ್ನು ಇಂದು (ಶುಕ್ರವಾರ) ಬಿಡುಗಡೆ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆ ದಿನದಂದು ಈ ಪದಕ ಪ್ರದಾನ ಮಾಡಲಾಗುತ್ತದೆ. 

 ಪದಕಕ್ಕೆ ಭಾಜನರಾದವರ ಪಟ್ಟಿ
1. ಹೇಮಂತ್​ ಕುಮಾರ್​- ಡಿವೈಎಸ್​ಪಿ, ಲೋಕಾಯುಕ್ತ, ಬೆಂಗಳೂರು.
2. ಪರಮೇಶ್ವರ ಹೆಗ್ಡೆ- ಡಿವೈಎಸ್​ಪಿ, ಆಥಿರ್ಕ ಅಪರಾಧ ವಿಭಾಗ, ಸಿಐಡಿ, ಬೆಂಗಳೂರು.
3. ಆರ್​.ಮಂಜುನಾಥ್​- ಡಿವೈಎಸ್​ಪಿ, ಎಸಿಬಿ, ಮಂಡ್ಯ.
4. ಎಚ್​.ಎಂ.ಶೈಲೇಂದ್ರ- ಡಿವೈಎಸ್​ಪಿ, ಸೋಮವಾರಪೇಟೆ ವಿಭಾಗ, ಕೊಡಗು.
5. ಅರುಣ್​ ನಾಗೇಗೌಡ- ಡಿವೈಎಸ್​ಪಿ, ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆ.
6. ಎಚ್​.ಎಂ. ಸತೀಶ್​- ಎಸಿಪಿ, ಈಶಾನ್ಯ ಸಂಚಾರ ವಿಭಾಗ, ಬೆಂಗಳೂರು.
7. ಎಚ್​.ಬಿ. ರಮೇಶ್​ ಕುಮಾರ್​- ಡಿವೈಎಸ್​ಪಿ, ರಾಜ್ಯ ಗುಪ್ತಚರ, ತುಮಕೂರು.
8. ಪಿ. ಉಮೇಶ್​- ಡಿವೈಎಸ್​ಪಿ, ಪೊಲೀಸ್​ ತರಬೇತಿ ಶಾಲೆ, ಜ್ಯೋತಿನಗರ, ಮೈಸೂರು.
9. ಸಿ.ಎನ್​. ದಿವಾಕರ- ಇನ್​ಸ್ಪೆಕ್ಟರ್​, ಮಡಿಕೇರಿ ಗ್ರಾಮೀಣ ವೃತ್ತ, ಕೊಡಗು.
10. ಜಿ.ಎನ್​. ರುದ್ರೇಶ್​- ಇನ್​ಸ್ಪೆಕ್ಟರ್​, ಕೆಎಸ್​ಆರ್​ಪಿ, ಬೆಂಗಳೂರು.
11. ಬಿ.ಎ. ಲಕ್ಷ್ಮೀನಾರಾಯಣ್​- ಪಿಎಸ್​ಐ, ನಗರ ವಿಶೇಷ ವಿಭಾಗ, ಬೆಂಗಳೂರು.
12. ಎಚ್​.ಎಂ.ಚಂದ್ರಶೇಖರ್​- ಪಿಎಸ್​ಐ, ಕೆಎಸ್​ಆರ್​ಪಿ, ಬೆಂಗಳೂರು.
13. ಕೆ. ಜಯಪ್ರಕಾಶ್​- ಪಿಎಸ್​ಐ, ಮಂಗಳೂರು ನಗರ, ನಿಯಂತ್ರಣ ಕೊಠಡಿ.
14.ಎಚ್​. ನಂಜುಂಡಯ್ಯ- ಎಎಸ್​ಐ, ಡಿಸಿಆರ್​ಬಿ, ಎಸ್​ಪಿ ಕಚೇರಿ, ಚಿಕ್ಕಬಳ್ಳಾಪುರ.
15. ಹತೀಕ್​ ಯು.ಆರ್​. ರೆಹಮಾನ್​- ಎಎಸ್​ಐ, ಬೆರಳಚ್ಚು ವಿಭಾಗ, ಶಿವಮೊಗ್ಗ.
16. ರಾಮಾಂಜನೇಯ- ಎಎಸ್​ಐ, ಕೆ.ಬಿ.ಕ್ರಾಸ್​ ಪೊಲೀಸ್​ ಠಾಣೆ, ತುಮಕೂರು.
17. ಆರ್​.ಎನ್​. ಬಾಳೆಕಾಯಿ- ಎಎಸ್​ಐ, ರಾಣೇಬೆನ್ನೂರು ಗ್ರಾಮೀಣ ಠಾಣೆ, ಹಾವೇರಿ ಜಿಲ್ಲೆ.
18. ಕೆ. ಹೊನ್ನಪ್ಪ- ಮುಖ್ಯಪೇದೆ, ಬೆಂಗಳೂರು ಜಿಲ್ಲೆ.
19. ವಿ.ಎಲ್.ಎನ್. ಪ್ರಸನ್ನ ಕುಮಾರ್ ಎಎಸ್‌ಐ, ಸಿಐಡಿ

click me!