* ನಿತ್ಯ ಸರಾಸರಿ 8 ಕಪ್ಪು ಶಿಲೀಂಧ್ರ ಪ್ರಕರಣ
* ಕಳೆದ 33 ದಿನದಲ್ಲಿ 285 ಪ್ರಕರಣಗಳು ಪತ್ತೆ
* ಸೋಂಕು ಪ್ರಕರಣ 3,832ಕ್ಕೆ ಏರಿಕೆ
ಬೆಂಗಳೂರು(ಆ.21): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ ಕಡಿಮೆಯಾಗಿದ್ದರೂ ಬ್ಲಾಕ್ ಫಂಗಸ್ ಪ್ರಕರಣಗಳು ಮುಂದುವರೆದಿದ್ದು, ನಿತ್ಯ ಸರಾಸರಿ 8 ಪ್ರಕರಣದಂತೆ ಕಪ್ಪು ಶಿಲೀಂಧ್ರ ಸೋಂಕು ವರದಿಯಾಗುತ್ತಿದೆ. ಸೋಂಕು ಇಳಿಮುಖವಾದ ಬಳಿಕವೂ ಬ್ಲಾಕ್ ಫಂಗಸ್ ಪ್ರಕರಣ ಮುಂದುವರೆದಿದೆ.
ಕಳೆದ 33 ದಿನಗಳಲ್ಲಿ 285 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಒಟ್ಟು ಸೋಂಕು ಪ್ರಕರಣ 3,832ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸಾವಿನ ಸಂಖ್ಯೆಯೂ 441ಕ್ಕೆ ಹೆಚ್ಚಾಗಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಸೋಂಕು ಹಾಗೂ ಸಾವು ವರದಿಯಾಗಿದ್ದು, ಈವರೆಗೆ 1,207 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ 149 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ಅತಿ ಹೆಚ್ಚು ಪ್ರಕರಣ ವರದಿಯಾಗಿರುವ ಜಿಲ್ಲೆಗಳ ಪೈಕಿ ಬೆಂಗಳೂರಿನಲ್ಲಿ 1,207, ಧಾರವಾಡದಲ್ಲಿ 342, ವಿಜಯಪುರದಲ್ಲಿ 228, ಕಲಬುರಗಿಯಲ್ಲಿ 213, ಬಳ್ಳಾರಿಯಲ್ಲಿ 169 ಪ್ರಕರಣಗಳ ಮೂಲಕ ಮೊದಲ ಐದು ಸ್ಥಾನದಲ್ಲಿವೆ.
undefined
ಬ್ಲ್ಯಾಕ್ ಫಂಗಸ್‌ಗೆ ಒಂದೇ ದಿನ 11 ಬಲಿ : ಏರಿದ ಸೋಂಕು
ಸಾವಿನ ಪೈಕಿ ಒಟ್ಟು 441 ಮಂದಿ ಸಾವನ್ನಪ್ಪಿದ್ದು ಬೆಂಗಳೂರಿನಲ್ಲಿ 149 ಮಂದಿ ಸಾವನ್ನಪ್ಪಿದ್ದಾರೆ. ಧಾರವಾಡದಲ್ಲಿ ಎರಡನೇ ಅತಿ ಹೆಚ್ಚು (40) ಸಾವು ಸಂಭವಿಸಿದೆ. ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25, ಕಲಬುರಗಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.