ರಾಜ್ಯದಲ್ಲಿ ಹೆಚ್ಚಾದ ಚಳಿ: ಬೀದರ್‌ನಲ್ಲಿ ಕನಿಷ್ಠ 9.4 ಡಿಗ್ರಿ..!

Kannadaprabha News   | Asianet News
Published : Dec 04, 2020, 09:34 AM IST
ರಾಜ್ಯದಲ್ಲಿ ಹೆಚ್ಚಾದ ಚಳಿ: ಬೀದರ್‌ನಲ್ಲಿ ಕನಿಷ್ಠ 9.4 ಡಿಗ್ರಿ..!

ಸಾರಾಂಶ

ರಾಜ್ಯದಲ್ಲಿ ಮಳೆ, ಮೋಡ ಕವಿದ ವಾತಾವರಣ ಸೃಷ್ಟಿ| ಉಷ್ಣಾಂಶ ಕಡಿಮೆಯಾಗಿದ್ದು, ಚಳಿ ಪ್ರಮಾಣ ಹೆಚ್ಚುತ್ತಿದೆ| ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್‌ ದಾಖಲು| 

ಬೆಂಗಳೂರು(ಡಿ.03): ರಾಜ್ಯದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಚಳಿ ಪ್ರಮಾಣ ಹೆಚ್ಚಾಗಿದೆ. ಬಂಗಾಳ ಕೊಲ್ಲಿಯಲ್ಲಿ ನಿಂತರವಾಗಿ ವಾಯುಭಾರ ಕುಸಿತ, ಮೇಲ್ಮೈ ಸುಳಿಗಾಳಿ ತೀವ್ರತೆ ಹಾಗೂ ವಾತಾವರಣದಲ್ಲಿನ ಬದಲಾವಣೆಗಳಿಂದ ರಾಜ್ಯದಲ್ಲಿ ಮಳೆ, ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. 

ಇದರಿಂದ ಉಷ್ಣಾಂಶ ಕಡಿಮೆಯಾಗಿದ್ದು, ಚಳಿ ಪ್ರಮಾಣ ಹೆಚ್ಚುತ್ತಿದೆ. ಕರಾವಳಿ ಭಾಗದಲ್ಲಿ ನಿತ್ಯ ತಾಪಮಾನ ಹೆಚ್ಚು ದಾಖಲಾಗುತ್ತಿದೆ. ಡಿ.3ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಯಲ್ಲಿ ಕಾರವಾರದಲ್ಲಿ ರಾಜ್ಯದ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. 

ಊಟಿಯಂತಾದ ಬೆಂಗಳೂರು: ಚಳಿಯೋ ಚಳಿ..!

ಹೀಗಾಗಿ ಅಲ್ಲಿ ಚಳಿ ತುಸು ಕಡಿಮೆ ಇದೆ. ಇನ್ನು ರಾಜ್ಯದ ಕನಿಷ್ಠ ತಾಪಮಾನ 9.4 ಡಿ.ಸೆ. ಬೀದರ್‌ನಲ್ಲಿ ದಾಖಲಾಗಿದೆ. ಅಲ್ಲದೆ ದಾವಣಗೆರೆ 11.3, ವಿಜಯಪುರ 12, ಧಾರವಾಡ 13.5, ಬೆಂಗಳೂರಲ್ಲಿ ಕನಿಷ್ಠ 18 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಕರಾವಳಿ ಭಾಗ ಹೊರತುಪಡಿಸಿ ಉಳಿದ ಭಾಗದಲ್ಲಿ ಚಳಿ ತುಸು ಹೆಚ್ಚಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!
BREAKING: ದಾವಣಗೆರೆ ಗಡಿ ಭಾಗದಲ್ಲಿ ಭಾರೀ ಸ್ಫೋಟದ ಸದ್ದು; ಭೂಮಿ ಕಂಪಿಸಿದ ಅನುಭವ, ಚಿಕ್ಕಮಲ್ಲನಹೊಳೆ ಗ್ರಾಮಸ್ಥರಲ್ಲಿ ಆತಂಕ