ಕಲಾವಿದರು ವಯಸ್ಸಾದ ಮೇಲೆ ಜೀವನ ನಡೆಸಲು ಕಷ್ಟವಾಗುತ್ತಿದ್ದು, ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬುದು ಲೀಲಾವತಿಯವರ ದೊಡ್ಡ ಬೇಡಿಕೆಯಾಗಿತ್ತು. ಇದರ ಬಗ್ಗೆ ಚರ್ಚೆ ನಡೆಸಿ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ದಾಬಸ್‌ಪೇಟೆ (ನ.29): ಕಲಾವಿದರು ವಯಸ್ಸಾದ ಮೇಲೆ ಜೀವನ ನಡೆಸಲು ಕಷ್ಟವಾಗುತ್ತಿದ್ದು, ಕಲಾವಿದರಿಗೆ ಪಿಂಚಣಿ ನೀಡಬೇಕು ಎಂಬುದು ಲೀಲಾವತಿಯವರ ದೊಡ್ಡ ಬೇಡಿಕೆಯಾಗಿತ್ತು. ಇದರ ಬಗ್ಗೆ ಚರ್ಚೆ ನಡೆಸಿ ಕಲಾವಿದರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ಧರ್ಮನಾಯಕನ ತಾಂಡ್ಯದಲ್ಲಿ ಸ್ವಂತ ಹಣದಲ್ಲಿ ನಿರ್ಮಿಸಿರುವ ಡಾ.ಲೀಲಾವತಿ ಪಶು ಆಸ್ಪತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲಾವಿದರಿಗೆ ಹೆಚ್ಚಿನ ಶಕ್ತಿ ತುಂಬಬೇಕು ಎಂಬ ಚಿಂತನೆ ಸರಕಾರಕ್ಕಿದೆ, ಕಲಾವಿದರು ರಾಷ್ಟ್ರಮಟ್ಟದಲ್ಲಿ ಬೆಳಕು ಬೀರುವ ಕೆಲಸ ಮಾಡುತ್ತಿದ್ದಾರೆ, ಅವರಿಗೆ ವಯಸ್ಸಾದ ಮೇಲೆ ಬಹಳಷ್ಟು ಕಷ್ಟವಾಗುತ್ತಿದೆ. ಆದ್ದರಿಂದ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂಬ ಲೀಲಾವತಿಯವರ ಬೇಡಿಕೆಯನ್ನು ಸಂಘ,ಸಂಸ್ಥೆಗಳ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳಲ್ಲಿ ಮಾತನಾಡಿ ನಿರ್ಣಯಿಸಲಾಗುತ್ತದೆ ಎಂದರು.
undefined
ಯಡಿಯೂರು ಶ್ರೀ ಸಿದ್ದಲಿಂಗೇಶ್ವರರ ಗದ್ದುಗೇಲಿ ಮತ್ತೆ ಬೆಳೆಯತ್ತಿದೆ ಹುತ್ತ!
ಪಶು ಆಸ್ಪತ್ರೆ ಕನಸು ನನಸು: ನಾನು ಬದುಕಿರುವಾಗಲೇ ಪಶು ಆಸ್ಪತ್ರೆ ಉದ್ಘಾಟನೆ ಮಾಡಬೇಕು ಎಂದು ಮನೆಗೆ ಬಂದು ಕೇಳಿದ್ದರು. ಅದಕ್ಕಾಗಿ ಸಂತೋಷದಿಂದ ಬಂದು ಉದ್ಘಾಟನೆ ಮಾಡಿದ್ದೇನೆ. ಡಾ.ಲೀಲಾವತಿಯವರ ಉಸಿರಿಲ್ಲದಿದ್ದರೂ ಸಹ ಹೆಸರು ಮಾತ್ರ ಶಾಶ್ವತವಾಗಿರುತ್ತದೆ. ಅವರು 60 ವರ್ಷಗಳ ಕಲಾಸೇವೆ ಸಲ್ಲಿಸಿದ್ದು, ಇಂದಿರಾಗಾಂಧಿ, ಡಾ.ರಾಧಕೃಷ್ಣನ್ ಸೇರಿದಂತೆ ಅನೇಕರಿಂದ ಪ್ರಶಸ್ತಿ ಪಡೆದಿದ್ದಾರೆ. ಸಮಾಜಕ್ಕೆ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ನಿರ್ಮಿಸಿ ಜನಸೇವೆ ಸಲ್ಲಿಸುತ್ತಿರುವ ಅವರ ಸೇವೆ ಬಹುದೊಡ್ಡದು ಎಂದು ಡಿಸಿಎಂ ಡಿಕೆಶಿವಕುಮಾರ್ ತಿಳಿಸಿದರು.
ನಟ ವಿನೋದ್ ರಾಜ್ ಮಾತನಾಡಿ, ಅಮ್ಮನ ಕನಸಿನ ಆಸ್ಪತ್ರೆ ಉದ್ಘಾಟನೆಯಾಗಿದೆ, ಅಮ್ಮ ಚೇತರಿಸಿಕೊಳ್ಳಲು ಎಲ್ಲರೂ ಹಾರೈಸಿದ್ದಾರೆ. ಅಮ್ಮ ನಾನು ಬದುಕಿರುವಾಗಲೇ ಪಶು ಆಸ್ಪತ್ರೆ ಉದ್ಘಾಟನೆ ಮಾಡುವ ಆಸೆ ಹೊಂದಿದ್ದರು. ಅದು ಡಿ.ಕೆ.ಶಿವಕುಮಾರ್ ಮೂಲಕ ನೇರವೇರಿದೆ ಎಂದರು.
ಮನವಿ ಪತ್ರ: ಸೋಲದೇವನಹಳ್ಳಿ ಸುತ್ತಮುತ್ತಲೂ ರೈತರ ಸಮಸ್ಯೆ, ಬಡಾವಣೆಯ ಸಮಸ್ಯೆಗಳು ಸೇರಿದಂತೆ ಕೆಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸ್ಥಳೀಯರ ಪರವಾಗಿ ನಟ ವಿನೋದ್‌ರಾಜ್ ಡಿಕೆಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಗೆಹರಿಸುವ ಭರವಸೆಯನ್ನೂ ಡಿಕೆಶಿ ನೀಡಿದ್ದಾರೆ.
ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಯೋಜನೆಯ 59 ತಿಂಗಳ 1.18 ಲಕ್ಷ ಅರ್ಪಣೆ: ಲಕ್ಷ್ಮೀ ಹೆಬ್ಬಾಳ್ಕರ್
ಕಾರ್ಯಕ್ರಮದಲ್ಲಿ ಎಂಎಲ್‌ಸಿ ರವಿ, ಶಾಸಕ ಎನ್.ಶ್ರೀನಿವಾಸ್, ನಟ ವಿನೋದ್ ರಾಜ್, ಡಿಸಿ. ಶಿವಶಂಕರ್, ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ತಹಸೀಲ್ದಾರ್ ಅರುಂಧತಿ, ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಸ್ಥಳೀಯ ಮುಖಂಡ ಸಿಎಂ ಗೌಡ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಮುಖ್ಯ ಪಶು ವೈದ್ಯಾಧಿಕಾರಿ ಸಿದ್ದಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿಯ ಭಾ.ಮ.ಹರೀಶ್, ಸಾರಾ ಗೋವಿಂದ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್‌ಗೌಡ, ನಾರಾಯಣಗೌಡ, ನಾಗರಾಜು ಸೇರಿದಂತೆ ಸ್ಥಳೀಯ ಮುಖಂಡರು, ಕಲಾವಿದರು ಉಪಸ್ಥಿತರಿದ್ದರು.