Adichunchanagiri: ನಾಳೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ, ₹100 ಕೋಟಿಯ ಭೈರವೈಕ್ಯ ಮಂದಿರ ಲೋಕಾರ್ಪಣೆ

Kannadaprabha News   | Kannada Prabha
Published : Apr 14, 2026, 07:54 AM IST
Inauguration of a Rs 100 crore temple in Adichunchanagiri tomorrow

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ಏ.15 ರಂದು ಆದಿಚುಂಚನಗಿರಿಯಲ್ಲಿ ₹100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದ್ರಾವಿಡ ಶೈಲಿಯ ಶ್ರೀಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಈ ದೇಗುಲವು ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತುಶಿಲ್ಪದ ಸಮ್ಮಿಶ್ರಣವಾಗಿದ್ದು, ಇದೊಂದು ಜೀವಂತ ಆಧ್ಯಾತ್ಮ ಧಾಮವಾಗಿದೆ 

ಮಂಡ್ಯ (ಏ.14): ದ್ರಾವಿಡ ವಾಸ್ತು ಶಿಲ್ಪ ಶೈಲಿಯಲ್ಲಿ ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಶ್ರೀಗುರು ಭೈರವೈಕ್ಯ ಮಂದಿರ ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಅದೊಂದು ಜೀವಂತ ಆಧ್ಯಾತ್ಮ ಧಾಮವಾಗಿದ್ದು, ಏ.15 ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ₹100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಒರಿಸ್ಸಾದ ಸೂರ್ಯದೇಗುಲದ ಕಲೆಯನ್ನು ಒಳಗೊಂಡ ಸುಂದರ ದೇಗುಲ ರೂಪುಗೊಂಡಿದ್ದು, ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗ ವಾಸ್ತು ಶಿಲ್ಪದ ಸಮ್ಮಿಶ್ರಣವನ್ನು ಕಾಣಬಹುದಾಗಿದೆ ಎಂದರು.

ಪಿಎಂ ಮೋದಿ ಮುಕುಟಕ್ಕೆ ನಾಲ್ವಡಿ ಮಾದರಿಯ ಪೇಟ 

ಮೈಸೂರು: ಮೈಸೂರು ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ರಾಜಗಾಂಭೀರ್ಯದ ಪೇಟವು ಪ್ರಧಾನಿ ನರೇಂದ್ರ ಮೋದಿ ಅವರ ಮುಕುಟ ಏರಲು ಮೈಸೂರಿನಲ್ಲಿ ಸಿದ್ಧವಾಗಿದೆ. ಮೈಸೂರಿನ ಕಲಾವಿದ ನಂದನ್ ಅವರು 5 ದಿನ ಶ್ರಮ ವಹಿಸಿ ಅತ್ಯಂತ ಆಕರ್ಷಕವಾಗಿ ರೂಪಿಸಿದ್ದಾರೆ. ಬನಾರಸ್ ಸೀರೆ ಹಾಗೂ ವಿಶೇಷ ಮೋಲ್ಡ್‌ಗಳನ್ನು ಬಳಸಿ ಸಿದ್ಧಪಡಿಸಲಾಗಿದೆ.

ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸವಿದೆ. 3 ಮಾದರಿಯ ಕಲ್ಲುಗಳನ್ನು ಭೈರವೈಕ್ಯ ಮಂದಿರದಲ್ಲಿ ಕಾಣಬಹುದಾಗಿದೆ. ಕ್ಲೈರಾ ಎಂಬ ಕಲ್ಲನ್ನು ಹೆಚ್ಚು ಬಳಸಲಾಗಿದ್ದು, ಧರ್ಮಗುಡಿಗೆ ಇಳಕಲ್ ಮಾದರಿ ಶಿಲೆ, ಕೆಳಭಾಗಕ್ಕೆ ಸಂತೆಕಲ್ ಮಾದರಿಯ ಶಿಲೆ, ಮಂದಿರದ ಒಳಭಾಗ ಮತ್ತು ಹೊರಭಾಗ ಪೂರ್ತಾ ಕ್ಲೈರಾ ಶಿಲೆಯನ್ನು ಬಳಸಲಾಗಿದೆ ಎಂದು ವಿವರಿಸಿದರು.

ನವಿಲಿಗೆ ಸಂಬಂಧಿಸಿದ ಉಡುಗೊರೆ:

ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಪ್ರಧಾನಿ ಆಗಮಿಸುತ್ತಿದ್ದು, ನಮ್ಮ ರಾಷ್ಟ್ರಪಕ್ಷಿ ಹಾಗೂ ಆದಿ ಚುಂಚನಗಿರಿಯ ಸಂಕೇತವಾದ ನವಿಲಿಗೆ ಸಂಬಂಧಿಸಿದ ನೆನಪಿನ ಕಾಣಿಕೆಯನ್ನು ಉಡುಗೊರೆ ರೂಪದಲ್ಲಿ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಪ್ರಧಾನಿ ಕಾರ್ಯಕ್ರಮ:

ಏ.15ರಂದು ಬೆಂಗಳೂರಿನ ಎಚ್‌ಎಎಲ್ ಏರ್‌ಫೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಹೋರಡುವ ನರೇಂದ್ರ ಮೋದಿ ಅವರು ಆದಿ ಚುಂಚನಗಿರಿ ತಪೋವನಕ್ಕೆ ಬಂದಿಳಿಯುವರು. ಅಲ್ಲಿಂದ ಶ್ರೀಕಾಲಭೈರವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆಯುವರು. ನಂತರ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ವೀಕ್ಷಿಸುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಗೋರಕ್ಷನಾಥ ಸಿದ್ಧ ಸಿದ್ಧಾಂತ ಪದ್ಧತಿ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ನಿರ್ಬಂಧ

ಪ್ರಧಾನಿ ಮೋದಿ ಅವರು ಭೇಟಿ ಕಾರಣ ಮಠದ ಆವರಣ, ದೇವಾಲಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅವರು ತೆರಳಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ಕನಿಷ್ಠ 2 ಗಂಟೆ ಮೊದಲೇ ತಲುಪಿರಬೇಕು. ಪ್ರಧಾನಿ ಆಗಮನಕ್ಕೆ ಮೊದಲೇ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗುವುದು. ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ಷೇತ್ರದೊಳಗೆ ತರಲು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ದ್ರಾವಿಡ ವಾಸ್ತು ಶಿಲ್ಪ ಶೈಲಿ ಸಹಸ್ರಾರು ವರ್ಷಗಳಿಂದ ದೈವಿಕ ಶಕ್ತಿಯ ದೃಶ್ಯಭಾಷೆ ಎಂದೇ ಪ್ರಸಿದ್ಧಿ ಪಡೆದಿದೆ. ಆಗಸಕ್ಕೆ ಚಾಚಿದ ಗೋಪುರಗಳು, ಶಿಲ್ಪಕಲೆಯ ಅದ್ಭುತ ಕೆತ್ತನೆಗಳು, ಬ್ರಹ್ಮಾಂಡ ನಿಯಮಗಳಿಗೆ ಅನುಸಾರವಾದ ವಿನ್ಯಾಸವಿದೆ. 3 ಮಾದರಿಯ ಕಲ್ಲುಗಳನ್ನು ಭೈರವೈಕ್ಯ ಮಂದಿರದಲ್ಲಿ ಕಾಣಬಹುದಾಗಿದೆ. ಕ್ಲೈರಾ ಎಂಬ ಕಲ್ಲನ್ನು ಹೆಚ್ಚು ಬಳಸಲಾಗಿದ್ದು, ಧರ್ಮಗುಡಿಗೆ ಇಳಕಲ್ ಮಾದರಿ ಶಿಲೆ, ಕೆಳಭಾಗಕ್ಕೆ ಸಂತೆಕಲ್ ಮಾದರಿಯ ಶಿಲೆ, ಮಂದಿರದ ಒಳಭಾಗ ಮತ್ತು ಹೊರಭಾಗ ಪೂರ್ತಾ ಕ್ಲೈರಾ ಶಿಲೆಯನ್ನು ಬಳಸಲಾಗಿದೆ ಎಂದು ವಿವರಿಸಿದರು.

ನವಿಲಿಗೆ ಸಂಬಂಧಿಸಿದ ಉಡುಗೊರೆ:

ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಪ್ರಧಾನಿ ಆಗಮಿಸುತ್ತಿದ್ದು, ನಮ್ಮ ರಾಷ್ಟ್ರಪಕ್ಷಿ ಹಾಗೂ ಆದಿ ಚುಂಚನಗಿರಿಯ ಸಂಕೇತವಾದ ನವಿಲಿಗೆ ಸಂಬಂಧಿಸಿದ ನೆನಪಿನ ಕಾಣಿಕೆಯನ್ನು ಉಡುಗೊರೆ ರೂಪದಲ್ಲಿ ನೀಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

ಪ್ರಧಾನಿ ಕಾರ್ಯಕ್ರಮ:

ಏ.15ರಂದು ಬೆಂಗಳೂರಿನ ಎಚ್‌ಎಎಲ್ ಏರ್‌ಫೋರ್ಟ್‌ನಿಂದ ಹೆಲಿಕಾಪ್ಟರ್ ಮೂಲಕ ಹೋರಡುವ ನರೇಂದ್ರ ಮೋದಿ ಅವರು ಆದಿ ಚುಂಚನಗಿರಿ ತಪೋವನಕ್ಕೆ ಬಂದಿಳಿಯುವರು. ಅಲ್ಲಿಂದ ಶ್ರೀಕಾಲಭೈರವೇಶ್ವರ ಮಂದಿರಕ್ಕೆ ತೆರಳಿ ದರ್ಶನ ಪಡೆಯುವರು. ನಂತರ ಶ್ರೀಗುರು ಭೈರವೈಕ್ಯ ಮಂದಿರವನ್ನು ಲೋಕಾರ್ಪಣೆಗೊಳಿಸಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆ ವೀಕ್ಷಿಸುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಗೋರಕ್ಷನಾಥ ಸಿದ್ಧ ಸಿದ್ಧಾಂತ ಪದ್ಧತಿ’ ಎಂಬ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ನಿರ್ಬಂಧ

ಪ್ರಧಾನಿ ಮೋದಿ ಅವರು ಭೇಟಿ ಕಾರಣ ಮಠದ ಆವರಣ, ದೇವಾಲಯ ಪ್ರದೇಶಕ್ಕೆ ಸಾರ್ವಜನಿಕರಿಗೆ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅವರು ತೆರಳಿದ ಬಳಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ ಕನಿಷ್ಠ 2 ಗಂಟೆ ಮೊದಲೇ ತಲುಪಿರಬೇಕು. ಪ್ರಧಾನಿ ಆಗಮನಕ್ಕೆ ಮೊದಲೇ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗುವುದು. ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ಷೇತ್ರದೊಳಗೆ ತರಲು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: Adichunchanagiri - ನಾಳೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ, ₹100 ಕೋಟಿಯ ಭೈರವೈಕ್ಯ ಮಂದಿರ ಲೋಕಾರ್ಪಣೆ
Monsoon 2026: ಈ ವರ್ಷ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ; ಹವಾಮಾನ ಇಲಾಖೆ ಮುನ್ಸೂಚನೆ, ಮಳೆ ಕೊರತೆಗೆ ಕಾರಣವೇನು?