ಮುರುಘಾ ಶ್ರೀ ವಿರುದ್ಧ ಗುಡುಗಿದ ಯಡಿಯೂರಪ್ಪ: ಅಕ್ಷಮ್ಯ ಅಪರಾಧ ಎಂದ ಬಿಎಸ್‌ವೈ

By Sharath Sharma Kalagaru  |  First Published Nov 8, 2022, 11:28 AM IST

BS Yediyurappa on Murugha Sri: ಮುರುಘಾ ಮಠದ ಶರಣರ ವಿರುದ್ಧ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಗುಡುಗಿದ್ದಾರೆ. ಮುರುಘಾ ಶ್ರೀಗಳು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರು ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನಂದುಕೊಂಡಿರಲಿಲ್ಲ ಎಂದಿದ್ದಾರೆ. 


ಉಡುಪಿ: ಮುರುಘಾ ಶರಣರಿಂದ ಲೈಂಗಿಕ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಪ್ರತಿಕ್ರಿಯಿಸಿದ್ಧಾರೆ. ಉಡುಪಿಯಲ್ಲಿ ಮಾತನಾಡಿದ ಬಿಎಸ್‌ ಯಡಿಯೂರಪ್ಪ ಮುರುಘಾ ಶರಣರು ಕ್ಷಮಿಸಲಾರದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಖಂಡಿಸಬೇಕು. ಶ್ರೀ ಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ. ಮುರುಘಾ ಶರಣರ ವಿರುದ್ಧ ನ್ಯಾಯಾಲಯಕ್ಕೆ ಸೋಮವಾರ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ದೋಷಾರೋಪ ಪಟ್ಟಿಯಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಮಾಡಲಾಗಿದೆ. ಜತೆಗೆ ಬೆಂಗಳೂರಿನಲ್ಲಿ ಒಬ್ಬ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಆರೋಪವನ್ನೂ ಮಾಡಲಾಗಿದೆ. 

ಸಿದ್ದರಾಮಯ್ಯ ವಿರುದ್ಧವೂ ಕಿಡಿ:

Latest Videos

undefined

ಚುನಾವಣೆಗೆದ್ದು ಖರ್ಗೆಗೆ ಗಿಫ್ಟ್ ಕೊಡುತ್ತೇವೆ ಎಂದಿರುವ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬಿ.ಎಸ್ ಯಡಿಯೂರಪ್ಪ ಅವರು ಸಿದ್ದರಾಮಯ್ಯ ಯಾವುದೊ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಮನಸ್ಸಲ್ಲಿದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ. ನಾನು ಮತ್ತು ಬೊಮ್ಮಾಯಿ ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯನಿಂದ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರ್ತೀವಿ ಅಂತೀರಿ ಆದರೆ ನೀವು ಬಾದಾಮಿಯನ್ನು ಯಾಕೆ ಬಿಟ್ಟು ಬರುತ್ತಿದ್ದೀರಿ. ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಸೋಲು ನಿಶ್ಚಿತ. ಎಂಎಲ್ಎ ಆಗಿ ಕೆಲವೇ ಮತಗಳಿಂದ ಅಂದು ಗೆದ್ದಿದ್ದೀರಿ. ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದೀರಿ ಅಭಿವೃದ್ಧಿ ಮಾಡಿಲ್ಲ. ಬಾದಾಮಿಯನ್ನು ತೊರೆಯುತ್ತೀರಿ ಎಂಬುದು ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ. ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದಾರೆ ನಿಮಗೆ ಉತ್ತರ ಕೊಡುತ್ತಾರೆ, ಎಂದಿದ್ದಾರೆ. 

ಮುಂದುವರೆದ ಅವರು ಬೇರೆಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿ ಬಂದಿದ್ದಾರೆ ಇನ್ನೂ ಬರುವವರಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಈ ಬಾರಿ ಬಾದಾಮಿ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವುದು ಬಹುತೇಕ ಸಂಶಯವಾಗಿದೆ. ಅವರು ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಹಿಂದಿನ ಬಾರಿಯಂತೆ ಎರಡು ಕ್ಷೇತ್ರಗಳಿಗೆ ಪಕ್ಷ ಅವರಿಗೆ ಟಿಕೆಟ್‌ ನೀಡುವುದಿಲ್ಲ. ಕೋಲಾರ ಅಥವಾ ವರುಣಾ ಕ್ಷೇತ್ರದಿಂದಲೇ ಅವರು ಚುನಾವಣೆಗೆ ನಿಲ್ಲುವ ಸಾಧ್ಯತೆಯಿದೆ. ವರುಣಾದಲ್ಲಿ ನಿಂತರೆ ಮಗ ಯತೀಂದ್ರ ಅವರನ್ನು ಎಂಎಲ್‌ಸಿಯಾಗಿ ಮಾಡಬೇಕಾಗಲಿದೆ. 

ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿರುವ ಅಂಶಗಳೇನು?:

1. ಮುರುಘಾ ಶ್ರೀಗಳು ತನ್ನ ಬಳಿಗೆ ಇಬ್ಬರು ಹುಡುಗಿಯರನ್ನು ಕಳುಹಿಸುವಂತೆ ಚೀಟಿ ಕಳುಹಿಸುತ್ತಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ಶ್ರೀ ಹೇಳಿದ ಇಬ್ಬರು ಹುಡುಗಿಯರನ್ನು ಶ್ರೀಗಳ ಬಳಿ ವಾರ್ಡ್‌ನ್ ರಶ್ಮಿ ಕಳುಹಿಸುತ್ತಿದ್ದಳು. 

2. ಟ್ಯೂಷನ್ ಮಾಡುವದಾಗಿ ಭಾನುವಾರ ಸಂಜೆ ವಿದ್ಯಾರ್ಥಿನಿಯರನ್ನು ಮುರುಘಾ ಶರಣರು ಕರೆಸಿಕೊಳ್ಳುತ್ತಿದ್ದರು. ಟ್ಯೂಷನ್ ಮುಗಿದ ನಂತರ ಇಬ್ಬರು ಹುಡುಗಿಯರನ್ನು ಅಲ್ಲಿಯೇ ಉಳಿಸಿಸಕೊಳ್ಳುತ್ತಿದ್ದರು. ಕಸ ಹೊಡೆಯಬೇಕು ಎಂದು ವಿದ್ಯಾರ್ಥಿನಿಯರನ್ನು ಇರಿಸಿಕೊಳ್ಳುತ್ತಿದ್ದ ಶ್ರೀಗಳು . 

3. ವಿದ್ಯಾರ್ಥಿನಿಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹಣ್ಣು, ಡ್ರೈಫೂಟ್ಸ್ ಕೊಡುತ್ತಿದ್ದ ಮುರುಘಾ ಶ್ರೀ. ಈ ವೇಳೆ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟುತ್ತಿದ್ದರು. ತಾನು ಬೆತ್ತಲ್ಲಾಗಿ  ವಿದ್ಯಾರ್ಥಿನಿಯರ ಸೊಂಟವನ್ನು ಮುಟ್ಟುತ್ತಿದ್ದರು. ನಮ್ಮ ಬಟ್ಟೆ ಬಿಚ್ಚಿ ಅತ್ಯಾಚಾರ ಮಾಡಿದ ಬಗ್ಗೆ ಪೊಲೀಸರಿಗೆ ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ. 

4. ನನ್ನ ಎದುರಿಗೆ ಮಧ್ಯಪಾನ ಮಾಡಿ ಅವಾಚ್ಯವಾಗಿ ನಿಂದಿಸಿದ್ರು. ಪ್ರತಿದಿನ ವಾರ್ಡನ್ ರಶ್ಮಿಗೆ ವಿದ್ಯಾರ್ಥಿನಿಯರ ಹೆಸರು ಬರೆದು ಕಳುಹಿಸುತ್ತಿದ್ದ ಶ್ರೀಗಳು. 
ಚೀಟಿಯಲ್ಲಿದ್ದ ಹೆಸರಿನ ಯುವತಿರನ್ನು ಶ್ರೀಗಳ ಬಳಿಗೆ ಕಳುಹಿಸತ್ತಿದ್ದ ವಾರ್ಡನ್​ ರಶ್ಮಿ. 

ಇದನ್ನೂ ಓದಿ: Bengaluru: ತಡರಾತ್ರಿ ಪಿಸ್ತೂಲ್ ಹಿಡಿದು ಬೆದರಿಸಿ ಅಟ್ಟಹಾಸಗೈದ ಬಿಲ್ಡರ್..!

5. ಬಾಲಕಿಯರು ಶ್ರೀಗಳ ಬಳಿ  ಹೋಗಲು ಒಪ್ಪದಿದ್ದಾಗ ಅವಾಚ್ಯವಾಗಿ ನಿಂದನೆ ಮಾಡಲಾಗುತ್ತಿತ್ತು. ಮನೆಯವರಿಗೆ ಸಹಾಯ ಮಾಡುವುದಾಗಿ ಹೇಳಿ ಅತ್ಯಾಚಾರ ಬಗ್ಗೆ ಬಾಯಿಬಿಡದಂತೆ ಬೆದರಿಕೆ ಹಾಕಲಾಗುತ್ತಿತ್ತು. 

6. ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡು ಮಧ್ಯಪಾನ ಮಾಡಿಸುತ್ತಿದ್ದ ಮುರುಘಾ ಶ್ರೀಗಳು. ಶ್ರೀಗಳಿಗೆ ಗಂಗಾಧರ್, ಬಸವಾದಿತ್ಯ ಸ್ವಾಮಿ, ರಶ್ಮಿ ಪರಮಶಿವಯ್ಯನವರು ಬೆಂಬಲ ನೀಡುತ್ತಿದ್ದರು.

7. ಬೆಂಗಳೂರಿನ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಕಡೆಯವರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಹಾಸ್ಟೆಲ್​ನಲ್ಲಿ ಚರ್ಚೆಯಾಗುತ್ತಿದ್ದ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 

ಇದನ್ನೂ ಓದಿ: Murughamutt Chargesheet: ಮುರುಘಾ ಶ್ರೀ ವಿರುದ್ಧ ಚಾರ್ಜ್‌ಶೀಟ್‌, ಮಕ್ಕಳ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆರೋಪ

8. ವಾರ್ಡನ್​ ರಶ್ಮಿ ಜೊತೆ ಜಗಳವಾಡಿ ಬೆಂಗಳೂರಿನಲ್ಲಿ ದೂರು ನೀಡಿದ್ದಾಗಿ  ಯುವತಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತರೆಲ್ಲರ ಹೇಳಿಕೆಗಳನ್ನು ಚಾರ್ಜ್‌ಶೀಟ್‌ನಲ್ಲಿ ಹಾಕಲಾಗಿದೆ.

click me!