3 ಜಿಲ್ಲೆಗೊಂದು ವಿಪತ್ತು ಪಡೆ ನಿಯೋಜನೆ: ಗೃಹ ಸಚಿವ ಆರಗ

By Kannadaprabha NewsFirst Published Nov 8, 2022, 9:38 AM IST
Highlights
  • 3 ಜಿಲ್ಲೆಗೊಂದು ವಿಪತ್ತು ಪಡೆ: ಆರಗ
  • ರಾಜ್ಯ ಸರ್ಕಾರದಿಂದ ಯೋಜನೆ
  • ವಿಶಿಷ್ಟಸೇವಾ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ

ಬೆಂಗಳೂರು (ನ.8) : ರಾಜ್ಯ ವಿಪತ್ತು ಹಾಗೂ ತುರ್ತು ಸೇವೆಗಳ ಪಡೆಯನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಪ್ರತಿ ಮೂರು ಜಿಲ್ಲೆಗೆ ಒಂದರಂತೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ(ಎಸ್‌ಡಿಆರ್‌ಎಫ್‌) ನಿಯೋಜಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯ ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಾಗೂ ಎಸ್‌ಡಿಆರ್‌ಎಫ್‌ ನಿರ್ದೇಶನಾಲಯದಿಂದ ರಾಜಭವನದಲ್ಲಿ ಸೋಮವಾರ ಆಯೋಜಿಸಿದ್ದ ವಿಶಿಷ್ಟಸೇವೆಗೈದ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಾಕೃತಿಕ ಸಂಕಷ್ಟದ ಸಮಯದಲ್ಲಿ ಕ್ಷಿಪ್ರವಾಗಿ ಸೇವೆ ಸಲ್ಲಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಾಗರಿಕರ ಸುರಕ್ಷತೆ, ಆಸ್ತಿಪಾಸ್ತಿಗಳು ಹಾಗೂ ಸಾರ್ವಜನಿಕ ಸ್ವತ್ತುಗಳ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಹಲವಾರು ವರ್ಷಗಳ ನಂತರ, ರಾಜ್ಯ ಅಗ್ನಿಶಾಮಕ ದಳವನ್ನು ಬಲಪಡಿಸಲು ಸುಮಾರು 1,547 ವಿವಿಧ ದರ್ಜೆಯ ಹುದ್ದೆಗಳ ಭರ್ತಿಗೆ ಚಾಲನೆ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಜೀವದ ಹಂಗು ತೊರೆದು ಸಂಕಷ್ಟಕ್ಕೆ ಒಳಗಾದ ಜನರ ಜೀವ ರಕ್ಷಿಸಿದ ಹಾಗೂ ವಿಶಿಷ್ಟಸೇವೆಗೈದ 61 ಸಿಬ್ಬಂದಿಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ರಾಷ್ಟ್ರಪತಿ ಪದಕ ಪ್ರದಾನ ಮಾಡಿದರು.

ಸಮಾಜಕ್ಕೆ ನೇರ, ನಿಷ್ಠುರ ಪತ್ರಕರ್ತರು ಅಗತ್ಯ: ಆರಗ ಜ್ಞಾನೇಂದ್ರ

click me!