IISC ಕ್ಯಾಂಪಸ್‌ನಲ್ಲಿ ಹಣ, ಮೊಬೈಲ್‌ ಕದಿಯುತ್ತಿದ್ದ ಕಳ್ಳನ ಹಿಡಿದ ಸೆಕ್ಯೂರಿಟಿ

Published : May 18, 2023, 06:30 AM IST
IISC ಕ್ಯಾಂಪಸ್‌ನಲ್ಲಿ  ಹಣ, ಮೊಬೈಲ್‌ ಕದಿಯುತ್ತಿದ್ದ ಕಳ್ಳನ ಹಿಡಿದ ಸೆಕ್ಯೂರಿಟಿ

ಸಾರಾಂಶ

ಎಂಟೆಕ್‌ ವಿದ್ಯಾರ್ಥಿ ಸೋಗಿನಲ್ಲಿ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗೆ (ಐಐಎಸ್ಸಿ) ನುಗ್ಗಿ ಕಳ್ಳತನ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮೇ.18) : ಎಂಟೆಕ್‌ ವಿದ್ಯಾರ್ಥಿ ಸೋಗಿನಲ್ಲಿ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಗೆ (ಐಐಎಸ್ಸಿ) ನುಗ್ಗಿ ಕಳ್ಳತನ ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಜಿಯಾವುಲ್ಲಾ ಮಲ್ಲಿಕ್‌(Ziaullah Mallick) ಬಂಧಿತನಾಗಿದ್ದು, ಆರೋಪಿಯಿಂದ ನಕಲಿ ವಿದ್ಯಾರ್ಥಿ ಗುರುತಿನ ಪತ್ರ ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಐಐಎಸ್ಸಿ ಆವರಣದ ಬ್ಲಾಕ್‌ 2ರಲ್ಲಿ .900 ಕಳವು ಮಾಡಿ ಪರಾರಿಯಾಗುವಾಗ ಮಲ್ಲಿಕ್‌ ಅಲ್ಲಿನ ಸೆಕ್ಯುರಿಟಿ ಗಾರ್ಡ್‌ಗಳಿಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನ ವಿಚಾರಣೆ ನಡೆಸಿದಾಗ ಎಂಟೆಕ್‌ ವಿದ್ಯಾರ್ಥಿಯ ಹೆಸರಿನ ಐಐಎಸ್ಸಿ ಐಡಿ ಕಾರ್ಡನ್ನು ತೋರಿಸಿ ಮಲ್ಲಿಕ್‌ ಕ್ಯಾಂಪಸ್‌ ಪ್ರವೇಶಿಸಿದ್ದ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುಕೆಯಲ್ಲಿ ಬೆಲೆ ಏರಿಕೆಯದ್ದೇ ದೊಡ್ಡ ಸಮಸ್ಯೆ: ಸೂಪರ್‌ಮಾರ್ಕೆಟ್‌ ಕಳ್ಳತನದ ಹಾದಿ ಹಿಡಿದ ಯುವಕರು!

ಆರೋಪಿ ಮಲ್ಲಿಕ್‌ ಕೆಲಸವಿಲ್ಲದೆ ಅಲೆಯುತ್ತಿದ್ದು, ಕಳ್ಳತನವನ್ನೇ ಆತ ವೃತ್ತಿಯಾಗಿಸಿಕೊಂಡಿದ್ದ. ಮಹಾರಾಷ್ಟ್ರ ಮೂಲಕ ಆತ ನಗರಕ್ಕೆ ಬಂದಿದ್ದ. ಮಲ್ಲೇಶ್ವರ ಸಮೀಪ ಪಿಜಿಯಲ್ಲಿ ನೆಲೆಸಿದ್ದ ಮಲ್ಲಿಕ್‌, ಸುತ್ತಮುತ್ತ ಕಾಲೇಜುಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ಇತ್ತೀಚೆಗೆ ಐಐಎಸ್ಸಿ ಕ್ಯಾಂಪಸ್‌ ಬಳಿ ಆತನಿಗೆ ಎಂಟೆಕ್‌ ವಿದ್ಯಾರ್ಥಿಯೊಬ್ಬನ ಐಡಿ ಕಾರ್ಡ್‌ ಸಿಕ್ಕಿದೆ. ಈ ಕಾರ್ಡ್‌ ಬಳಸಿ ವಿದ್ಯಾರ್ಥಿ ಸೋಗಿನಲ್ಲಿ ಐಐಎಸ್‌ಸಿ ಕ್ಯಾಂಪ್‌ ಪ್ರವೇಶಿಸಿದ್ದ ಆತ, ಅಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

10 ಲಕ್ಷ ಮೌಲ್ಯದ ಕೇವಲ ಬಲಗಾಲಿಗೆ ಧರಿಸುವ 200 ಶೂ ಕದ್ದ ಖದೀಮರು

ಕೆಲ ದಿನಗಳಿಂದ ಆಗಾಗ್ಗೆ ಐಐಎಸ್ಸಿ ಕ್ಯಾಂಪಸ್‌ಗೆ(IISC campus) ಹೋಗಿ ಮೊಬೈಲ್‌, ಹಣ ಹಾಗೂ ಕ್ಯಾಮೆರಾ ಸೇರಿದಂತೆ ಕೆಲವು ವಸ್ತುಗಳನ್ನು ಆತ ಕಳವು ಮಾಡಿದ್ದ. ಈ ಬಗ್ಗೆ ಅಲ್ಲಿನ ಭದ್ರತಾ ಸಿಬ್ಬಂದಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಸರಣಿ ಕಳ್ಳತನದಿಂದ ಎಚ್ಚೆತ್ತ ಭದ್ರತಾ ಕಾವಲುಗಾರರು, ಕ್ಯಾಂಪಸ್‌ ಪ್ರವೇಶಿಸಿಸುವ ಹೊರಗಿನವರ ಮೇಲೆ ನಿಗಾವಹಿಸಿದ್ದರು. ಅಂತೆಯೇ ಮೇ 12ರಂದು ಬೆಳಗ್ಗೆ 10.30ಕ್ಕೆ ಐಐಎಸ್ಸಿ ಕ್ಯಾಂಪಸ್‌ನ 2ನೇ ಬ್ಲಾಕ್‌ನಲ್ಲಿ .900 ಕಳವು ಮಾಡಿ ಮಲ್ಲಿಕ್‌ ತೆರಳುತ್ತಿದ್ದ. ಆಗ ಆತನ ನಡವಳಿಕೆ ಮೇಲೆ ಅನುಮಾನಗೊಂಡ ಕಾವಲುಗಾರ, ಕೂಡಲೇ ಮಲ್ಲಿಕ್‌ನನ್ನು ತಡೆದು ವಿಚಾರಿಸಿದ್ದಾರೆ. ಇದರಿಂದ ಭೀತಿಗೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮಲ್ಲಿಕ್‌ನನ್ನು ಕಾವಲುಗಾರರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ