
ಬೆಂಗಳೂರು (ಆ.12): ಹಿಂದೂಗಳು ಜಾತಿ, ಅಸ್ಪ್ರಶ್ಯತೆ, ಮತ, ಪಂಥ, ಭಾಷೆಗಳ ಹೆಸರಲ್ಲಿ ಬಡಿದಾಡಿಕೊಂಡಿದ್ದರೆ, ಕ್ಷುದ್ರ ಮನಸ್ಸಿನವರು ಲಾಭ ಪಡೆಯುತ್ತಾರೆ. ಸಂಘಟಿತರಾದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಸಣ್ಣ ಸಂಖ್ಯೆಯಲ್ಲಿದ್ದರೂ ಮಾನ, ಪ್ರಾಣ ಹಾಗೂ ಆಸ್ತಿಯ ರಕ್ಷಣೆ ಸಾಧ್ಯವೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಅವರು ಶಂಕರಪುರದಲ್ಲಿ ಭಾನುವಾರ ನಡೆದ ವಿಶ್ವ ಹಿಂದೂ ಪರಿಷದ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯದ ನೂತನ ಕಟ್ಟಡ 'ಧರ್ಮಶ್ರೀ' ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಂಗ್ಲಾ ಹಿಂದೂಗಳ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ, ಬೌದ್ಧರ ಮಾನ, ಪ್ರಾಣ, ಆಸ್ತಿ ರಕ್ಷಣೆಗೆ ಧ್ವನಿ ಜಾಗತಿಕ ಮಟ್ಟದಲ್ಲಿ ಎತ್ತಬೇಕು. ಜಗತ್ತಿನ ಹಲವೆಡೆ ಹಿಂದೂಗಳ ಮಾನವಾಧಿಕಾರ ಸ್ಥಿತಿ ಗಂಭೀರವಾಗಿದೆ. ಹಿಂಸೆಯ ಆಧಾರದಲ್ಲಿ ಮತಪ್ರಚಾರ ಮಾಡುತ್ತ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವವರು ಇಂಥದ್ದು ಬಹಳ ಕಾಲ ಇದು ನಡೆಯುವುದಿಲ್ಲ ಎಂಬುದು ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಬಾಂಗ್ಲಾದೇಶದ ನಿರ್ಗಮಿತ ಪ್ರಧಾನಿ ಶೇಖ್ ಹಸೀನಾ ಸ್ಫೋಟಕ ಹೇಳಿಕೆ! ಹಿಂಸಾಚಾರದ ಹಿಂದೆ ಅಮೆರಿಕ ಕೈವಾಡ!
ಹಿಂದೂ ಸಮಾಜ ಸಂಘಟಿತವಾದರೆ ಜಗತ್ತಿನ ಯಾವುದೇ ಮೂಲೆಯಲ್ಲಿ ಎಷ್ಟೇ ಕಡಿಮೆ ಸಂಖ್ಯೆಯಲ್ಲಿದ್ದರೂ ಹಿಂದೂಗಳ ಮಾನ ಪ್ರಾಣ, ಆಸ್ತಿ ರಕ್ಷಣೆ ಸಾಧ್ಯ. ಅಯೋಧ್ಯೆ ರಾಮಮಂದಿರ ಇದಕ್ಕೆ ಸಾಕ್ಷಿ. ನಾವು ಒಂದಾದರೆ ಕಾಶ್ಮೀರದ ಕುರಿತು ಯಾರೂ ಸೊಲ್ಲೆತ್ತಲು ಸಾಧ್ಯವಿಲ್ಲ. ಮತ ಪಂಥ, ಭಾಷೆ, ಪ್ರಾಂತ್ಯದ ಆಧಾರದಲ್ಲಿ ತಮ್ಮನ್ನು ತಾವೇ ಒಡೆದುಕೊಂಡರೆ ದೇವರೂ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಅರಿಯಬೇಕು ಎಂದರು.
ಭಾರತ ಯಾವತ್ತಿಗೂ ನಮ್ಮ ಪರಮಾಪ್ತ ರಾಷ್ಟ್ರ; ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಹಾಡಿಹೊಗಳಿದ್ದಾರೆ
ವಿಹಿಂಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷೆ ವಿಜಯಲಕ್ಷ್ಮಿ ದೇಶಮಾನೆ, ಕ್ಷೇತ್ರೀಯ ಪ್ರಚಾರಕ್ ಸುಧೀರ್, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ ಸೇರಿ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ