ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರಿಗೆ ಕೊಲೆ ಮಾಡೋದಾಗಿ 7 ಜನ ಯುವಕರು ನಿನ್ನೆ ರಾತ್ರಿ ಬೆದರಿಕೆ ಹಾಕಿದ್ದಾರೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಆ.11): ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡನ ಹತ್ಯೆಗೆ ಸ್ಕೆಚ್ ಹಾಕಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ಇಸ್ಮಾಯಿಲ್ ತಮಾಟಗಾರ ಅವರಿಗೆ ಕೊಲೆ ಮಾಡೋದಾಗಿ 7 ಜನ ಯುವಕರು ನಿನ್ನೆ ರಾತ್ರಿ ಬೆದರಿಕೆ ಹಾಕಿದ್ದಾರೆ ಎಂದು ಸದ್ಯ ಇಸ್ಮಾಯಿಲ್ ತಮಾಟಗಾರ ಅವರು ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪೋಟಕ ಹೇಳಿಕೆಯನ್ನ ಹೇಳಿದರು. ಇಸ್ಮಾಯಿಲ್ ತಮಾಟಗಾರ ಅವರು ಕಳೆದ 10 ವರ್ಷದಿಂದ ಅಂಜುಮನ್ ಇಸ್ಲಾಂ ಮುಖಂಡ ಸದ್ಯ ಜೀವ ಬೆದರಿಕೆಗೆ ಒಳಗಾಗಿದ್ದಾರೆ.
ಕಳೆದ ರಾತ್ರಿ 9 ಘಂಟೆಗೆ ಧಾರವಾಡದ ಶಹರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜಮಾದಾರ ಗಲ್ಲಿ, ದರೂರ ಓಣಿಯಲ್ಲಿ ಬಂದು ಇಸ್ಮಾಯಿಲ್ ತಮಾಟಗಾರ ಸಹೋದರ ಜಮಾಲ್ ತಮಾಟಗಾರಗೆ ಹೋಗಿ ನಿಮ್ಮ ಅಣ್ಣ ಎಲ್ಲಿದ್ದಾನೆ ಅವನನ್ನ ನಾವು ಕೊಲೆ ಮಾಡುತ್ತೆವೆ ಎಂದು ಬೆದರಿಕೆ ಹಾಕಿದ್ದಾರೆ.ಈ ಕುರಿತು ಧಾರವಾಡ ಶಹರ ಪೋಲಿಸ್ ಠಾಣೇಯಲ್ಲಿ ದೂರು ನೀಡಿದ್ದಾರೆ.ಇಸ್ಮಾಯಿಲ್ ತಮಾಟಗಾರ ಅವರನ್ನ ರಾಜಕೀಯ ದ್ವೇಷದಿಂದ ಕೊಲೆ ಮಾಡಬೇಕು ಎಂದು ಒಂದು ತಿಂಗಳಿಂದ ಸ್ಕೆಚ್ ಹಾಕಿದ್ದಾರೆ. ಧಾರವಾಡದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಪತ್ರಿಕಾಗೋಷ್ಠಿ ನಡೆಸಿದರು.
ಕರಾಳ ದಿನ ಆಚರಿಸಬೇಕಾಗಿದ್ದು ಖಾಸಗಿ ಶಾಲೆಗಳಲ್ಲ: ಆ ಶಾಲೆಗಳ ಮಕ್ಕಳ ಪೋಷಕರು!
ಅಂಜುಮನ್ ನಲ್ಲಿ ನಿನ್ನೆ ಸಂಜೆ 7:30 ಕ್ಕೆಸಭೆ ಕರೆದಿದ್ದೆವೆ ಅಲ್ಲಿ ಎಲ್ಲರೂ ಸಂಸ್ಥೆಯ ಬಗ್ಗೆ ಚರ್ಚೆ ಮಾಡಲಾಗಿದೆ.ನಾನು ಆಮೆಲೆ ನಾನು ಬೆಂಗಳೂರಿಗೆ ಹೊರಟಿದ್ದೆ ಬಳಿಕ ನಮ್ಮ ಬ್ರದರ್ ಕರೆ ಮಾಡಿ ಹೇಳಿದರು 17 ವರ್ಷದ ಯುವಕರು ಗಾಂಜಾ ಸೇವನೆ ಮಾಡಿ ಬಂದಿದ್ದರು ಮಣಿಕಿಲ್ಲಾ ದಲ್ಲಿ ನನಗೆ ಹೊಡೆಯೋದಾಗಿ ಹೇಳಿದ್ದಾರೆ ಜೊತೇಗೆ ಜಿವ ಬೆದರಿಕೆ ಹಾಕಿದ್ದಾರೆ ನನಗೆ ಪೋಲಿಸ್ ಕಮಿಷನರ್ ಮೆಲೆ ನಂಬಿಕೆ ಇದೆ ಸರಿಯಾಗಿ ತನಿಖೆಯಾಗಬೇಕು ಪೋಲಿಸ್ ಇಲಾಖೆ ಗಂಭಿರವಾಗಿ ಪರಿಗಣಿಸಬೇಕು ಎಂದು ಹೇಳಿದರು. ರಿಕ್ಷಾ ಹೊಡೆಯುವ ಯುವಕರು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಇವರಿಗೆ ಪ್ರಚೋದನೆ ಮಾಡಿದ್ದು ಯಾರು..?
ಎಂಬುದರ ಬಗ್ಗೆ ತನಿಖೆ ಯಾಗಬೇಕು ಕೇವಲ ತಮಾಟಗಾರ ಅಲ್ಲ ಪ್ರಭಾವಿಗಳ ಮೆಲೆ ಮಾಡೋದಾಗಿ ಹೇಳಿದ್ದಾರೆ ಓಣಿಯಲ್ಲಿ ತಲ್ವಾರ ತಗೊಂಡು ತಿರುಗಾಡುತ್ತಿದ್ದಾರೆ ನನ್ನ ಕಡೆ ಎಲ್ಲ ಆಡಿಯೋ ಇದೆ, ಯಾರು ಮಾಡ್ತಾ ಇದಾರೆ ಅನ್ನೋದು ನನಗೆ ಗೊತ್ತು ಕಳೆದ ಒಂದು ವರ್ಷದಿಂದ ನನ್ನ ಮೆಲೆ ಮುಸ್ಲಿಂ ಯುವಕರೆ ಕೊಲೆ ಮಾಡಬೇಕು ಎಂದು ಸ್ಕೆಚ್ ಹಾಕಿದ್ದಾರೆ 8 ಜನರಿಗೆ ಸಂಪರ್ಕ ಮಾಡಿದ್ದಾರೆ ನಾನು ಯಾರ ಮೆಲೆ ಆರೋಪ ಮಾಡ್ತಿಲ್ಲ ಮುಸ್ಲಿಂ ಯುವಕರಿಂದ ಇಸ್ಮಾಯಿಲ್ ತಮಾಟಗಾರಗೆ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ನನಗೆ ಎಲ್ಲ ಮಾಹಿತಿ ಇದೆ.
ಕಳೆದ ಒಂದು ವರ್ಷದಿಂದ ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾರೆ ನಾನು ಪೋಲಿಸ್ ಕಮಿಷನರ್ ಅವರಿಗೆ ದೂರು ಕೊಡುತ್ತೆನೆ ನನ್ನ ರಾಜಕೀಯ ದ್ವೆಷದಿಂದ ಕೊಲೆ ಮಾಡಲು ಸ್ಕೆಚ್ ಹಾಕ್ತಾ ಇದಾರೆ ಮುಸ್ಲಿಂ ಜನಾಂಗದವರಿಂದಲೆ ನನ್ನ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ನಾನು ಬಹಳ ಅಂದ್ರೆ 10 ವರ್ಷ ಬದುಕಬಹುದು ಕಳೆದ 10 ವರ್ಷದಿಂದ ಪ್ರಾಣ ಬೆದರಿಕೆ ಇದೆ ನನಗೆ ರಕ್ಷಣೆ ಕೊಡಿ ಎಂದು ಪೋಲಿಸ್ ಕಮಿಷನರ್ ಗೆ ಮನವಿ ಮಾಡುವೆ ಎಂದರು ಇನ್ನು ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ_ಧಾರವಾಡ ನಗರ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಘಟನಾ ಸ್ಥಳಕ್ಕೆ ಬೇಟಿ ನೀಡಿ ಜಮಾದಾರ ಗಲ್ಲಿ ದರೂರ ಓಣಿ ಗೆ ಬೇಟಿ ನೀಡಿ ಮಾಹಿತಿ ಪಡೆದರು ಘಟನಾ ಸ್ಥಳದಲ್ಲಿ ಸಿಸಿ ಟಿವಿ ಪರಿಶಿಲನೆ ಮಾಡಿದರು.
ಜಮಾಲ್ ತಮಾಟಗಾರ ಅವರಿಂದ ಮಾಹಿತಿ ಪಡೆದು ಘಟನಾ ಸ್ಥಳದಲ್ಲಿ ಗಲ್ಲಿ ಗಲ್ಲಿಗೂ ಬೇಟಿ ನೀಡಿದರು.ಘಟನಾ ಸ್ಥಳೀಯ ಭೆಟಿ ನೀಡಿದ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೇ ನೀಡಿದ ಕಮಿಷನರ ಅವರು ಮಾತನಾಡಿ ನಿನ್ನೆ ರಾತ್ರಿ 10 ಘಂಟೆಗೆ 7 ಜನ ನಿಂತು ಗಲಾಟೆ ಮಾಡುತ್ತಿದ್ದರು ಜಮಾಲ ತಮಾಟಗಾರ ಅವರು ಅವರಿಗೆ ಗಲಾಟೆ ಮಾಡಬೇಡಿ ಎಂದು ಹೇಳಿದ್ದಾರೆ ರೋಡ ಮೆಲೆ ಗಲಾಟೆ ಮಾಡುತ್ತಿದ್ದರು ಯಾಕೆ ನೀವು ಗಲಾಟೆ ಮಾಡುತ್ತಿದ್ದರಿ ಎಂದು ಪ್ರಶ್ನೆ ಮಾಡಿದಕ್ಕೆ ಚಾಕುವಿನಿಂದ ಇರಿದಿರುವ ಯುವಕರುಸದ್ಯ ಪ್ರಕರಣದ ನಾಲ್ಕು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ ನಾನು ವಿಚಾರಣೆ ಮಾಡುತ್ತಾನೆ,
ನಮ್ಮ ಇಲಾಖೆ ಸೂಕ್ತ ತನಿಖೆ ನಡೆಸುತ್ತದೆ ಪ್ರಕರಣದಲ್ಲಿ ಯಾರ‌್ಯಾರು ಭಾಗಿಯಾಗಿದ್ದಾರೆ ಅನ್ನೋದು ತನಿಖೆಯಲ್ಲಿ ಬೆಳಕಿಗೆ ಬರುತ್ತೆ ಸದ್ಯ ಸಿಸಿಟಿವಿಯಲ್ಲಿ ವಿಡಿಯೋ ಪರಿಶಿಲನೆ ಮಾಡಲಾಗುತ್ತಿದೆ ಪ್ರಮುಖ ಆರೋಪಿ ಸೇರಿ ನಾಲ್ಕು ಜನರನ್ನ ಅರೆಸ್ಟ ಮಾಡಲಾಗಿದೆ ಆ ಆರೋಪಿಗಳನ್ನ ನಾವು ಮೆಡಿಕಲ್ ಟೆಸ್ಟ ಮಾಡಲಾಗುತ್ತೆ ಸದ್ಯ ಪ್ರಕರಣದ ಬಗ್ಗೆ ತನಿಖೆ ಮಾಡುತ್ತೆವೆ ಎಂದು ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಅವರು ಹೇಳಿದರು. ಕಮಿಷನರ್ ಅವರಿಗೆ ಎಸಿಪಿ ಪ್ರಶಾಂತ , ಸಿಪಿಐ ಕಾಡದೇವರಮಠ, ಸಿಪಿಐ ದಯಾನಂದ ಸೇಗುಣಸಿ, ವಿದ್ಯಾಗಿರಿ ಠಾಣೆಯ ಸಂಗಮೇಶ ದಿಡಗಿನಾಳ ಉಪಸ್ಥಿತರಿದ್ದರು.