Covid Threat: '1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ: ಲಾಕ್ಡೌನ್‌ ಮಾಡದಿದ್ದರೆ ನಿತ್ಯ 50,000 ಕೇಸ್‌'

By Suvarna NewsFirst Published Jan 4, 2022, 5:21 AM IST
Highlights

* 1 ತಿಂಗಳಲ್ಲಿ ರಾಜ್ಯದಲ್ಲಿ ಸೋಂಕಿನ ಅಬ್ಬರ ಸಂಭವ

* ಲಾಕ್ಡೌನ್‌ ಮಾಡದಿದ್ದರೆ ನಿತ್ಯ 50000 ಕೇಸ್‌: ತಜ್ಞರ ಎಚ್ಚರಿಕೆ

* ತುತ್ತತುದಿಗೆ ಹೋದಾಗ ಪ್ರತಿನಿತ್ಯ 1 ಲಕ್ಷ ಪ್ರಕರಣ!

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಜ.04): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ರಾತ್ರಿ ಕಫä್ರ್ಯ, ಲಾಕ್‌ಡೌನ್‌ನಂತಹ ಕಠಿಣ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಒಂದು ತಿಂಗಳೊಳಗೆ ನಿತ್ಯ 50 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ!

ಇನ್ನು ಸೋಂಕಿನ (ಮೂರನೇ ಅಲೆಯ) ಉಚ್ಛ್ರಾಯ ಸ್ಥಿತಿಯಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಒಂದು ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಶೀಘ್ರದಲ್ಲಿಯೇ ಕಠಿಣ ಕ್ರಮಗಳನ್ನು ಕೈಗೊಂಡರೆ ಹೊಸ ಪ್ರಕರಣಗಳನ್ನು 15-20 ಸಾವಿರಕ್ಕೆ ನಿಯಂತ್ರಿಸಬಹುದು ಎನ್ನುತ್ತಾರೆ ತಜ್ಞರು.

ವಿದೇಶಗಳಲ್ಲಿ ಒಮಿಕ್ರೋನ್‌ ಪ್ರಕರಣಗಳ ಹೆಚ್ಚಳ ಅಂಕಿ-ಅಂಶ, ಈ ಹಿಂದಿನ ಡೆಲ್ಟಾಸೇರಿದಂತೆ ಒಮಿಕ್ರೋನ್‌ ರೂಪಾಂತರಿಗಳ ವರ್ತನೆ, ನೆರೆಯ ರಾಜ್ಯಗಳ ಸೋಂಕು ಹೆಚ್ಚಳ ಅವಧಿ ಮತ್ತು ಕಳೆದ ಒಂದು ತಿಂಗಳಲ್ಲಿ ಪತ್ತೆಯಾದ ಒಮಿಕ್ರೋನ್‌ ಪ್ರಕರಣಗಳು ಸೇರಿದಂತೆ ಹಲವು ಅಂಶಗಳನ್ನು ತಜ್ಞರು ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ‘ಜನವರಿ ಕೊನೆಯ ವಾರದಿಂದ ಫೆಬ್ರವರಿ ಕೊನೆಯ ವಾರದವರೆಗೂ ರಾಜ್ಯದಲ್ಲಿ ಕೊರೋನಾ ಉಚ್ಛ್ರಾಯ (ಪೀಕ್‌) ಹಂತದಲ್ಲಿರುತ್ತದೆ. ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನಂತಹ ಮುಂಜಾಗ್ರತಾ ಕ್ರಮಗಳ ನಡುವೆಯೂ ಈ ತಿಂಗಳಾಂತ್ಯದಲ್ಲಿ ನಿತ್ಯ 15ರಿಂದ 20 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತವೆ. ಲಾಕ್‌ಡೌನ್‌ನಂತಹ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ಫೆಬ್ರವರಿ ಮೊದಲ ವಾರದಲ್ಲಿಯೇ ನಿತ್ಯ 50 ಸಾವಿರ ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಗಳಿವೆ. ಶೀಘ್ರವೇ ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

"

ಪ್ರಕರಣಗಳು ದುಪ್ಪಟ್ಟು ಸಾಧ್ಯತೆ:

‘ಹಿಂದಿನ ಕೊರೋನಾ ಡೆಲ್ಟಾರೂಪಾಂತರಿಗೆ ಹೋಲಿಸಿದರೆ ಒಮಿಕ್ರೋನ್‌ ದುಪ್ಪಟ್ಟು ವೇಗವಾಗಿ ಹರಡುತ್ತದೆ. ಆದರೆ, ತೀವ್ರತೆ ಸಾಕಷ್ಟುಕಡಿಮೆ. ಎರಡನೇ ಅಲೆಯಲ್ಲಿ ಡೆಲ್ಟಾರೂಪಾಂತರಿ ಮಾಚ್‌ರ್‍ ಆರಂಭದಲ್ಲಿ ಶೇ.0.5 ಪಾಸಿಟಿವಿಟಿ ದರ(500 ಕೇಸ್‌) ಹೊಂದಿತ್ತು. ಮಾಚ್‌ರ್‍ ಅಂತ್ಯಕ್ಕೆ ಶೇ.5ಕ್ಕೆ (5,000 ಸಾವಿರ ಕೇಸ್‌) ಹೆಚ್ಚಳವಾಯಿತು. ಅದೇ ಏಪ್ರಿಲ್‌ ಅಂತ್ಯಕ್ಕೆ ಶೇ.25ಕ್ಕೆ (50 ಸಾವಿರ ಕೇಸ್‌) ತಲುಪಿತ್ತು. ಎರಡು ತಿಂಗಳಲ್ಲಿ ಉಚ್ಛ್ರಾಯ ಸ್ಥಿತಿ ಮುಟ್ಟಿತ್ತು. ಇನ್ನು ಎರಡು ಪಟ್ಟು ವೇಗ ಲಕ್ಷಣ ಹೊಂದಿರುವ ಒಮಿಕ್ರೋನ್‌ ಡಿಸೆಂಬರ್‌ ಆರಂಭದಲ್ಲಿ ಕಾಣಿಸಿಕೊಂಡು, ಅಂತ್ಯದಲ್ಲಿ ಹೆಚ್ಚಾಗಿದೆ. ಈ ತಿಂಗಳಾಂತ್ಯಕ್ಕೆ 20 ಸಾವಿರ ಆಸುಪಾಸಿಗೆ ಹೊಸ ಪ್ರಕರಣಗಳು ಹೆಚ್ಚಲಿದ್ದು, ಮುಂದಿನ ಒಂದು ತಿಂಗಳಲ್ಲಿ ಉಚ್ಛ್ರಾಯ ಸ್ಥಿತಿ ಮುಟ್ಟಿ50 ಸಾವಿರಕ್ಕೆ ತಲುಪಬಹುದು’ ಎಂದು ವಂಶವಾಹಿ ಪರೀಕ್ಷೆ ಸರ್ವೇಕ್ಷಣ ಸಮಿತಿ ಸದಸ್ಯ ಡಾ.ವಿಶಾಲ್‌ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

ಒಂದೇ ವಾರಕ್ಕೆ 4 ಪಟ್ಟು ಏರಿಕೆ:

ಒಮಿಕ್ರೋನ್‌ ಹೆಚ್ಚಳವಾದಂತೆ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಾ ಸಾಗಿವೆ. ಡಿಸೆಂಬರ್‌ ಮೂರನೇ ವಾರ (ಡಿ.25ಕ್ಕೆ) ಪ್ರಕರಣಗಳು 250 ಆಸುಪಾಸಿನಲ್ಲಿದ್ದವು. ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಸಾಗಿದ್ದು, ಡಿ.31ರಿಂದ ಜ.3ವರೆಗೂ ಕ್ರಮವಾಗಿ 832, 1033, 1187, 1290 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಂದೇ ವಾರದಲ್ಲಿ ನಿತ್ಯ ಸೋಂಕಿಗೊಳಗಾಗುವವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಇದೇ ಮಾದರಿಯಲ್ಲಿ ಡಿಸೆಂಬರ್‌ ಅಂತ್ಯಕ್ಕೆ 1,000 ಸಾವಿರ ಇದ್ದ ಹೊಸ ಪ್ರಕರಣಗಳು ಜನವರಿ ಮೊದಲ ವಾರಾಂತ್ಯಕ್ಕೆ 2,000ಕ್ಕೆ, ಎರಡನೇ ವಾರಾಂತ್ಯಕ್ಕೆ 4,000ಕ್ಕೆ. ನಾಲ್ಕನೇ ವಾರಾಂತ್ಯಕ್ಕೆ 8,000ಕ್ಕೆ, ತಿಂಗಳಾಂತ್ಯದಲ್ಲಿ 15 ರಿಂದ 20 ಸಾವಿರಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ.

ತಜ್ಞರ ವಾದಕ್ಕೆ ಆಧಾರವೇನು?

* ನೆರೆಯ ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಳವಾಗಿ ಎರಡು ವಾರದ ಬಳಿಕ ಕರ್ನಾಟಕದಲ್ಲಿಯೂ ಸೋಂಕು ಹೆಚ್ಚಳ. ಮಹಾರಾಷ್ಟ್ರದಲ್ಲಿ 10 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

* ಒಮಿಕ್ರೋನ್‌ ಸಮುದಾಯಕ್ಕೆ ಹರಡಿದ್ದು, ವಿದೇಶದಿಂದ ಬಂದವರಲ್ಲಿ ಮಾತ್ರವಲ್ಲದೆ 30 ಸ್ಥಳೀಯರಲ್ಲಿ ಪತ್ತೆಯಾಗಿದೆ.

* ರಾಜ್ಯದಲ್ಲಿ ಒಬ್ಬ ಸೋಂಕಿತನಿಂದ 20 ರಿಂದ 30 ಜನಕ್ಕೆ ಒಮಿಕ್ರೋನ್‌ ಸೋಂಕು ಹರಡಿರುವ ಪ್ರಕರಣಗಳಿವೆ.

* ನವೆಂಬರ್‌, ಡಿಸೆಂಬರ್‌ನಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರಿನ ಶಾಲಾ ಕಾಲೇಜುಗಳ ಕ್ಲಸ್ಟರ್‌ ಕೇಸ್‌ಗಳಲ್ಲಿ ಒಮಿಕ್ರೋನ್‌ ರೂಪಾಂತರಿ ಪತ್ತೆಯಾಗಿದ್ದು, ವೇಗವಾಗಿ ಹೆಚ್ಚು ಜನರಿಗೆ ಹರಡುತ್ತದೆ ಎಂಬುದಕ್ಕೆ ಸಾಕ್ಷಿ

ಡೆಲ್ಟಾಗಿಂತ ಒಮಿಕ್ರೋನ್‌ ವೇಗವಾಗಿ ಹರಡಲಿದ್ದು, ಮೂರೇ ದಿನದಲ್ಲಿ ದುಪ್ಪಟ್ಟಾಗುತ್ತದೆ. ಸೋಂಕು ಏರಿಕೆಯಾಗಿ ಒಂದೇ ತಿಂಗಳಿಗೆ ಪಾಸಿಟಿವಿಟಿ ದರ ಶೇ.20ಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಹೊಸ ಪ್ರಕರಣಗಳು 15-20 ಸಾವಿರ ಆಸುಪಾಸಿಗೆ ಹೆಚ್ಚಲಿವೆ. ಮುಂದಿನ ಒಂದು ತಿಂಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪುವ ನಿರೀಕ್ಷೆ ಇದೆ.

-ಡಾ.ವಿಶಾಲ್‌ ರಾವ್‌, ವಂಶವಾಹಿ ಪರೀಕ್ಷೆ ಸರ್ವೇಕ್ಷಣ ಸಮಿತಿ ಸದಸ್ಯ

ಸರ್ಕಾರಕ್ಕೆ ತಜ್ಞರು ಹೇಳುವುದೇನು?

1. ಈಗಲೇ ಕಠಿಣ ನಿರ್ಬಂಧ ಹೇರಿದರೆ 15ರಿಂದ 20 ಸಾವಿರಕ್ಕೆ ಕೇಸ್‌ ತಗ್ಗಿಸಬಹುದು

2. ಜನವರಿ ಅಂತ್ಯದಿಂದ ಫೆಬ್ರವರಿ ಕೊನೆ ವಾರದವರೆಗೆ ರಾಜ್ಯದಲ್ಲಿ ಕೋವಿಡ್‌ ಉಚ್ಛ್ರಾಯ

3. ಡೆಲ್ಟಾಗಿಂತ ಒಮಿಕ್ರೋನ್‌ ರೂಪಾಂತರಿ ಸೋಂಕು ದುಪ್ಪಟ್ಟು ವೇಗದಲ್ಲಿ ಹೆಚ್ಚುತ್ತದೆ

4. ಒಮಿಕ್ರೋನ್‌ 3 ದಿನಕ್ಕೇ ಡಬಲ್‌ ಆಗುತ್ತದೆ, ಪಾಸಿಟಿವಿಟಿ 20%ಗೆ ಏರಿಕೆಯಾಗಬಹುದು

click me!