
ಬೆಂಗಳೂರು (ಮಾ.1): ಏಳನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ(ಎನ್‌ಪಿಎಸ್) ರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯದ ಸರ್ಕಾರಿ ನೌಕರರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶೇ.17ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿ ಅಧಿಕೃತ ಆದೇಶ ಹೊರ ಹಾಕಿದ ಬೆನ್ನಲ್ಲೇ ನೌಕರರು ತಮ್ಮ ಅನಿರ್ಧಿಷ್ಟಾವಧಿ ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ಶೇ.17ರಷ್ಟು ವೇತನ ಹೆಚ್ಚಳ ಆದೇಶ ಎಪ್ರಿಲ್ 1, 2023 ರಿಂದ ಜಾರಿ ಆಗಲಿದೆ ಎಂದು ಸರಕಾರ ಘೋಷಿಸಿದೆ. ಈ ಮೂಲಕ ಸರಕಾರಿ ನೌಕರರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಈ ಮೂಲಕ ನೌಕರರ ಪ್ರತಿಭಟನೆ ಅಂತ್ಯವಾಗಿದೆ.
ಈ ಬಗ್ಗೆ ಮಾತನಾಡಿರುವ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಮಾಧ್ಯಮ ಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ನಮಗೆ ಇದು ಸಮಾಧಾನ ತಂದಿಲ್ಲ. 25% ಇಟ್ಟಿದ್ದೆವು. 17 % ನೀಡಿದ್ದಾರೆ. ಸರ್ಕಾರ ಮೊದಲ ಹಂತದಲ್ಲಿ ಈ ತೀರ್ಮಾನ ಮಾಡಿದೆ. ನಮದೆ ಸಂತೃಪ್ತಿ ಇಲ್ಲ ಸಮಾಧಾನ ಇದೆ. ಹಾಗಾಗಿ ಸರ್ಕಾರದ ಈ ತೀರ್ಮಾನವನ್ನ ಒಪ್ಪಿಕೊಂಡಿದ್ದೇವೆ. ನಾವು ಎರಡು ಪ್ರಮುಖ ಬೇಡಿಕೆ ಇಟ್ಟಿದ್ವಿ, ನಮ್ಮ ಸಂಘಟನೆ ಅದ್ಭುತ ವಾದ ಸಂಘಟನೆ. ಇಂದು ಮುಷ್ಕರ ಆರಂಭವಾಗಿದೆ.
ನಮಗೆ ಎರಡೂ ಆದೇಶಗಳನ್ನ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ನಿರ್ಧಾರ ಸ್ವಾಗತಿಸುತ್ತೇವೆ. ನಾವು ಸಕಾರಾತ್ಮಕವಾಗಿ ಒಪ್ಪಿರುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮುಷ್ಕರವನ್ನ ವಾಪಸ್ ಪಡೆಯುತ್ತೇವೆ ಎಂದಿರುವ ರಾಜ್ಯಾಧ್ಯಕ್ಷ ಷಡಕ್ಷರಿ ಈ ತಕ್ಷಣದಿಂದ ಎಲ್ಲ ಸರ್ಕಾರಿ ನೌಕರರು ಕಚೇರಿಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಸರ್ಕಾರ ನಮ್ಮ ಬೇಡಿಕೆ ಬಗ್ಗೆ ನಿನ್ನೆ ಬೆಳಗಿನಿಂದ ಚರ್ಚೆ ಮಾಡಿತ್ತು. ನಾವು ಸರ್ಕಾರ ಆಡಳಿತ ವ್ಯವಸ್ಥೆಯ ಒಂದು ಭಾಗ. ಇದನ್ನ ಸರ್ಕಾರ ನಮ್ಮ ಬೇಡಿಕೆಗೆ ಪೂರಕವಾಗೇ ಪರಿಗಣಿಸಿದೆ. 7 ನೇ ವೇತನ ಆಯೋಗ ಮಧ್ಯಂತರ ವರದಿಗೆ 30 ದಿನ ಕಾಲಾವಕಾಶ ಕೇಳಿತ್ತು. ಒಂದು ವಾರದಲ್ಲಿ ರಿಪೋರ್ಟ್ ಕೊಡಲು ವೇತನ ಆಯೋಗ ನಿರಾಕರಿಸಿತು. ಈ ಹಿಂದೆ ಮಧ್ಯಂತರ ಪರಿಹಾರ ಕೊಟ್ಟಿತ್ತು. ಅದರಂತೆ ಈ ಬಾರಿಯೂ ಪರಿಹಾರ ಭತ್ಯೆ ನೀಡಲು ಒಪ್ಪಿದೆ. ತಾತ್ಕಾಲಿಕ ಭತ್ಯೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಎನ್‌ಪಿಎಸ್ ಅನ್ನು ಒಪಿಎಸ್ ಮಾಡ್ಬೇಕು ಅನ್ನೋದು ನಮ್ಮ ಡಿಮ್ಯಾಂಡ್.
ಬಿಜೆಪಿ ಸರ್ಕಾರ ಯಾವುದೇ ರಾಜ್ಯದಲ್ಲಿ ಎನ್ಪಿಎಸ್ ಓಪಿಎಸ್ ಮಾಡಿಲ್ಲ. ಆದ್ರೆ ಈ ಬಗ್ಗೆ ಸಿಎಂ ನಮ್ಮ ಸಂಘಟನೆ ಒತ್ತಾಯಕ್ಕೆ ಮಣಿದು ಬೇರೆ ರಾಜ್ಯದ ಅಧ್ಯಯನಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಜಾರಿಯಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಓಪಿಎಸ್ ಜಾರಿ ಮಾಡಿರುವ ರಾಜ್ಯಗಳಿಗೆ ಭೇಟಿ ನೀಡಿ ವರದಿ ಕೊಡೋದಕ್ಕೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ. ಎರಡು ತಿಂಗಳು ಕಾಲ ಸಮಯವಾಕಾಶ ಸರ್ಕಾರ ಕೇಳಿದೆ.
ಇಂದಿನಿಂದ ಸರ್ಕಾರಿ ನೌಕರರ ಪ್ರತಿಭಟನೆ: ಎಂದಿನಂತೆ ಬಸ್'ಗಳ ಸಂಚಾರ
ನಾವು 40% ಫಿಟ್ ಮೆಂಟ್ ಸೌಲಭ್ಯ ಕೇಳಿದ್ವಿ. ನಮ್ಮ ಮುಖ್ಯ ಬೇಡಿಕೆ ಎನ್ ಪಿಎಸ್ ಅನ್ನ ಓಪಿಎಸ್ ಮಾಡಬೇಕು ಅನ್ನೋದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳೋದರ ಬಗ್ಗೆ ಭರವಸೆ ನೀಡಿದ್ದಾರೆ. ಬೇರೆ ರಾಜ್ಯದ ಆದೇಶದ ವಿವರ ವರದಿ ಪಡೆಯೋದಾಗಿ ಹೇಳಿದೆ. ಎರಡು ತಿಂಗಳೊಳಗಾಗಿ ಇದನ್ನ ಮಾಡೋದಾಗಿ ಹೇಳಿದೆ. ಸರ್ಕಾರಿ ಅಪರ ಮುಖ್ಯ ಕಾರ್ಯದರ್ಶಿ ಯನ್ನ ಅಧ್ಯಕ್ಷರನ್ನಾಗಿ ಮಾಡಿದ್ದಾರೆ.
ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರಕಾರ ಅಧಿಕೃತ ಆದೇಶ, ಮುಷ್ಕರ ವಾಪಸ್
ಐದು ರಾಜ್ಯದ ವರದಿ ತಂದು ಸರ್ಕಾರದ ಮುಂದೆ ಮಂಡಿಸಲಿದ್ದಾರೆ. 15 ದಿನದ ಒಳಗಾಗಿ ಸರ್ಕಾರಿ ನೌಕರ ಕುಟುಂಬಕ್ಕೆ ಉಚಿತ ಆರೋಗ್ಯ ಯೋಜನೆ ಕೊಡೋದಾಗಿ ಹೇಳಿದ್ದಾರೆ. 17% ಫಿಟ್ ಮೆಂಟ್ ಸೌಲಭ್ಯಕ್ಕೆ ಸರ್ಕಾರಿ ನೌಕರ ಸಂಘ ಒಪ್ಪಿಗೆ ಸೂಚಿಸಿದೆ. ಮೊದಲ ಹಂತವಾಗಿ ಈ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ. 40% ಅನ್ನು ಕೊಡೊ ಭರವಸೆ ಸರ್ಕಾರ ನೀಡಿದೆ. ಅದು ಏಳನೇ ವೇತನ ಆಯೋಗದಲ್ಲಿ ಬರಬೇಕು. ಅದನ್ನ ಪೂರೈಕೆ ಮಾಡಲೇಬೇಕು. ಇಲ್ಲದಿದ್ದರೆ ಮತ್ತೆ ಎರಡ್ಮೂರು ತಿಂಗಳ ಬಳಿಕ ಹೋರಾಟ ಮುಂದುವರೆಸ್ತೇವೆ ಎಂದು ಷಡಕ್ಷರಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ