ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ವಚಾರಗಳ ಬಗ್ಗೆ ಮಾತನಾಡುವುದಕ್ಕೆ ಡಿ.ರೂಪಾ ಯಾರು? ಅವರು ಹೊಟ್ಟೆಕಿಚ್ಚಿಗೆ ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಫೆ.20): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ವಚಾರಗಳ ಬಗ್ಗೆ ಮಾತನಾಡುವುದಕ್ಕೆ ಡಿ.ರೂಪಾ ಯಾರು? ಅವರು ಹೊಟ್ಟೆಕಿಚ್ಚಿಗೆ ಸುಳ್ಳು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ. ರೂಪಾ (Roopa IPS) ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ಆಗಿದ್ದು, ಮೊದಲು ನಾನು ಭಾರತಿಯ ಆಗಿದ್ದೇನೆ. ಆಂಧ್ರ ಪ್ರದೇಶಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ ಎಂದು ರೂಪಾ ವಿರುದ್ಧ ವಾಗ್ದಾಳಿ ನಡೆಸಿದರು.
IAS vs IPS Fight: ರೋಹಿಣಿ ಸಿಂಧೂರಿ, ಡಿ.ರೂಪಾ ಜಗಳದ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ: ನೋಟಿಸ್ ಜಾರಿ ಸಾಧ್ಯತೆ
ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋ ಕಳವು: ಮತ್ತೊಂದೆಡೆ ರೋಹಿಣಿ ಸಿಂಧೂರಿಯ (Rohini Sindhuri) ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗವನ್ನು ತೊರೆದು ಅವರೊಂದಿಗೆ ಇರಲು ಇಲ್ಲಿಗೆ ಬಂದಿದ್ದೇನೆ. ನಾವು ಮಾತನಾಡುವ ಹಾಗೂ ಸಂಭಾಷಣೆ ಮಾಡುವ ಬಗ್ಗೆ ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋಸ್‍ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ದೂರು ಕೊಡುತ್ತೇವೆ ಎಂದು ಹೇಳಿದರು.
ಮೃತ ಡಿ.ಕೆ. ರವಿ ಬಗ್ಗೆ ನಾನು ಮಾತನಾಡಲ್ಲ: ಹಲವು ವರ್ಷಗಳ ಹಿಂದೆ ಸಾವನ್ನಪ್ಪಿರುವ ಅಧಿಕಾರಿ ಡಿ.ಕೆ ರವಿ ಅವರ ಬಗ್ಗೆ ನಾನು ಮಾತನಾಡಲ್ಲ. ಮೃತಪಟ್ಟವರ ಈಗ ಬಗ್ಗೆ ಮಾತನಾಡುವುದು ಸರಿಯಲ್ಲ. ನನಗೂ ಸಂಸ್ಕಾರ ಗೊತ್ತಿದೆ. ನಮ್ಮ ತಂದೆಯವರು 50 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲಿನಿಂದಲೂ ನಮ್ಮ ಆಸ್ತಿಗಳು ರಾಜ್ಯದಲ್ಲಿಯೇ ಇಲ್ಲಿವೆ. ರೋಹಿಣಿ ಅವರನ್ನು ಮದುವೆಯಾಗುವ ಮೊದಲೇ ನಮ್ಮ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುಕೊಂಡು ಬಂದಿತ್ತು ಎಂದು ಪ್ರತಿಕ್ರಿಯಿಸಿದರು.
ಫೋಟೋ ಹ್ಯಾಕ್ ಬಗ್ಗೆ ದೂರು ಕೊಡಲು ನಿರ್ಧಾರ: ಐಜಿಪಿ ಡಿ ರೂಪಾ ವಿರುದ್ದ ದೂರು ಕೊಡಲು ರೋಹಿಣಿ ಚಿಂತನೆ ನಡೆಸಿದ್ದಾರೆ. ದೂರು ಕಾಪಿಯನ್ನ ಸಿದ್ದಪಡಿಸಿರುವ ರೋಹಿಣಿ ಸಿಂಧೂರಿ ಅವರು, ಡಿ ರೂಪಾ ಪೋಟೊ ಹ್ಯಾಕ್ ಮಾಡಿರುವ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಟೋಗಳನ್ನ ಹರಿ ಬಿಟ್ಟಿರುವ ಡಿ ರೂಪಾ ಬಗ್ಗೆ ದೂರು ನೀಡಲು ರೋಹಿಣಿ ಸಿಂಧೂರಿ ಅವರ ಕುಟಂಬಸ್ಥರು ಕೂಡ ಸಾಥ್ ನೀಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಲಿರುವ ರೋಹಿಣಿ ಸಿಂಧೂರಿ ಕುಟಂಬ ಸಿದ್ಧವಾಗಿದೆ.
IAS vs IPS Fight: ಈ ಪಿಕ್ಸ್ ಕೇವಲ ಸ್ಯಾಂಪಲ್ ಅಷ್ಟೆ: ಆಕೆ ಬಿಹೇವಿಯರ್ ಸರಿಯಿಲ್ಲ..! ಎಂದ ಡಿ ರೂಪಾ
ಬೆಂಗಳೂರು (ಫೆ.20): ಭಾನುವಾರ ರಜಾ ದಿನದ ವೇಳೆ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಪರಸ್ಪರ ಕಿತ್ತಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಮಾಹಿತಿಯನ್ನು ಪಡೆದುಕೊಂಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿಯಿಂದ ನೋಟಿಸ್ ಜಾರೊಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.
ಡಿ. ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ಅವರು ಪ್ರಮುಖ ಹುದ್ದೆಗಳಲ್ಲಿದ್ದು ಬೀದಿ ರಂಪಾಟದ ಮಾಡಿಕೊಂಡಿರುವ ಬಗ್ಗೆ ಸಿಎಂ ಬೊಮ್ಮಾಯಿ ಅವರು ಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇಬ್ಬರು ಅಧಿಕಾರಿಗಳು ಸಾಮಾಜಿಕ ಜಾಲತಾಣದ ಮೂಲಕ ಕಿತ್ತಾಟ ನಡೆಸಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ಸರ್ಕಾರಕ್ಕೆ ಮುಜುಗರ ಉಂಟಾಗುವುದನ್ನು ತಡೆಯುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಕಾನೂನು ಚೌಕಟ್ಟಿನಲ್ಲಿ ಏನು ಕ್ರಮ ಕೃಗೊಳ್ಳಬೇಕು ಅದನ್ನ ತಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ, ಮುಖ್ಯ ಕಾರ್ಯದರ್ಶಿ (ಸಿಎಸ್) ಮೂಲಕ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಕಂಡುಬರುತ್ತಿದೆ. ಬಹಿರಂಗ ಕಿತ್ತಾಟದ ಕಾರಣ ಕೇಳಿ ನೋಟಿಸ್ ನೀಡಲಿದ್ದು, ಈ ಮೂಲಕ ಇಬ್ಬರು ಅಧಿಕಾರಿಗಳ ಬಹಿರಂಗ ಕಿತ್ತಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.