ಯೋಧ ಗುರು ತಿಥಿ ವೆಚ್ಚ ಭರಿಸುವೆ: ತಮ್ಮಣ್ಣ

By Web DeskFirst Published Feb 23, 2019, 9:19 AM IST
Highlights

ಗುರು ನಮ್ಮ ಊರಿನ ಯೋಧ. ಆತ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ. ಆತನ ಋುಣ ತೀರಿಸುವುದು ಅಸಾಧ್ಯ. ಆತನ ಪುಣ್ಯತಿಥಿಯ ಸಂಪೂರ್ಣ ಖರ್ಚನ್ನು ನಿರ್ವಹಿಸುವ ಮೂಲಕ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ- ಡಿ.ಸಿ.ತಮ್ಮಣ್ಣ

ಮಂಡ್ಯ[ಫೆ.23]: ಹುತಾತ್ಮ ಯೋಧ ಗುರು 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮದ ಸಂಪೂರ್ಣ ಖರ್ಚು, ವೆಚ್ಚವನ್ನು ವಹಿಸಿಕೊಳ್ಳುವುದಾಗಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗುರು ನಮ್ಮ ಊರಿನ ಯೋಧ. ಆತ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾನೆ. ಆತನ ಋುಣ ತೀರಿಸುವುದು ಅಸಾಧ್ಯ. ಆತನ ಪುಣ್ಯತಿಥಿಯ ಸಂಪೂರ್ಣ ಖರ್ಚನ್ನು ನಿರ್ವಹಿಸುವ ಮೂಲಕ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರು ಕೂಡ ಎಲ್ಲಾ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು.

ಪುಣ್ಯತಿಥಿಯ ದಿನ ಮಾಮೂಲಿಯಾಗಿ ಏನೇನು ಅಡುಗೆ ಮಾಡುತ್ತಾರೋ ಅದೆಲ್ಲವನ್ನೂ ಮಾಡಿಸಲಾಗುವುದು. ಮನೆಯವರ ಆಶಯದಂತೆ ಕಾರ್ಯ ನಡೆಯಲಿದೆ. 4ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕವನ್ನೂ ಕೂಡ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

click me!