
ಬೆಂಗಳೂರು[ಫೆ.15]: ಆಪರೇಷನ್ ಕಮಲ ಧ್ವನಿ ಸುರಳಿ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸುವುದಾಗಿ ಘೋಷಿಸಿದ್ದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಹೊರತು ನಾನಲ್ಲ. ಸದನದ ಒಬ್ಬ ಸದಸ್ಯನಾಗಿ ನಾನು ಸಲಹೆ ನೀಡಿದ್ದೇನೆ ಅಷ್ಟೆ. ಎಸ್‌ಐಟಿ ತನಿಖೆಗೆ ನನ್ನ ಒತ್ತಡವೇ ಕಾರಣ ಎಂಬ ಬಿಜೆಪಿಯ ಆರೋಪ ಮೂರ್ಖತನದ್ದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಟಿ ರಚನೆಗೆ ಸಿದ್ದರಾಮಯ್ಯ ಒತ್ತಡ ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಾರೆ. ಆದರೆ, ಸದನದ ಒಬ್ಬ ಸದಸ್ಯನಾಗಿ ನಾನು ಸಲಹೆ ನೀಡಿದ್ದೇನೆ ಅಷ್ಟೇ. ಎಸ್‌ಐಟಿ ರಚನೆ ಮಾಡುವುದಾಗಿ ಕುಮಾರಸ್ವಾಮಿ ಅವರೇ ಘೋಷಣೆ ಮಾಡಿದ್ದು ಎಂದರು.
ಎಸ್‌ಐಟಿ ವಿಚಾರದಲ್ಲಿ ಮುಖ್ಯಮಂತ್ರಿ ಅವರು ಸಾಫ್ಟ್ ಆಗಿರುವ ಮಾತುಗಳು ಕೇಳುಬರುತ್ತಿವೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಎಸ್‌ಐಟಿ ರಚಿಸುವುದಾಗಿ ಘೋಷಿಸಿದವರೆ ಮುಖ್ಯಮಂತ್ರಿಯವರು. ಆ ವಿಚಾರದಲ್ಲಿ ಈಗ ಏಕೆ ಸಾಫ್ಟ್ ಆಗುತ್ತಾರೆ? ಆದಷ್ಟುಬೇಗ ಎಸ್‌ಐಟಿ ತಂಡ ರಚನೆ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ