ವಿವಾದಿತ ಸ್ಥಳದಲ್ಲಿ ಶವಸಂಸ್ಕಾರದ ವೇಳೆ ಹೈಡ್ರಾಮಾ : ಶವದ ಗುಂಡಿಗೆ ಇಳಿದು ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರತಿಭಟನೆ

By Suvarna News  |  First Published Dec 6, 2024, 11:33 PM IST

ಕಾಫಿನಾಡಲ್ಲಿ ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಏರ್ಪಟ್ಟಿದೆ. ಅದು ಕೂಡ ಶವ ಸಂಸ್ಕಾರದ ಜಾಗಕ್ಕಾಗಿ. ದಲಿತರು ನಾವು ಶವಸಂಸ್ಕಾರ ಮಾಡೇ ಮಾಡ್ತೀವಿ ಅಂತ. ಒಕ್ಕಲಿಗರು ಇಲ್ಲ. ಶವಸಂಸ್ಕಾರ ಮಾಡುವಂತಿಲ್ಲ. ಅದ್ಹೇಗ್ ಮಾಡ್ತೀರಾ ನಾವು ನೋಡ್ತೀವಿ ಅಂತ. ಹೆಣ ಊಳೋ ವಿಚಾರವಾಗಿ ಇಬ್ಬರ ಮಧ್ಯೆ ಕೋಲ್ಡ್ವಾರ್ ಏರ್ಪಟ್ಟಿದೆ. ಎಷ್ಟರಮಟ್ಟಿಗೆ ಅಂದ್ರೆ, ದಲಿತರ ಶವ ಹೂಳಲು ತೆಗೆದಿದ್ದ ಗುಂಡಿಯೊಳಗೆ ಒಕ್ಕಲಿಗ ಮಹಿಳೆಯರು ಇಳಿದು ಆಕ್ರೋಶ ಹೊರಹಾಕಿದರು.


ಚಿಕ್ಕಮಗಳೂರು : ಕಾಫಿನಾಡಲ್ಲಿ ಒಕ್ಕಲಿಗರು ವರ್ಸಸ್ ದಲಿತರ ಮಧ್ಯೆ ಏರ್ಪಟ್ಟಿದೆ. ಅದು ಕೂಡ ಶವ ಸಂಸ್ಕಾರದ ಜಾಗಕ್ಕಾಗಿ. ದಲಿತರು ನಾವು ಶವಸಂಸ್ಕಾರ ಮಾಡೇ ಮಾಡ್ತೀವಿ ಅಂತ. ಒಕ್ಕಲಿಗರು ಇಲ್ಲ. ಶವಸಂಸ್ಕಾರ ಮಾಡುವಂತಿಲ್ಲ. ಅದ್ಹೇಗ್ ಮಾಡ್ತೀರಾ ನಾವು ನೋಡ್ತೀವಿ ಅಂತ. ಹೆಣ ಊಳೋ ವಿಚಾರವಾಗಿ ಇಬ್ಬರ ಮಧ್ಯೆ ಕೋಲ್ಡ್ವಾರ್ ಏರ್ಪಟ್ಟಿದೆ. ಎಷ್ಟರಮಟ್ಟಿಗೆ ಅಂದ್ರೆ, ದಲಿತರ ಶವ ಹೂಳಲು ತೆಗೆದಿದ್ದ ಗುಂಡಿಯೊಳಗೆ ಒಕ್ಕಲಿಗ ಮಹಿಳೆಯರು ಇಳಿದು ಆಕ್ರೋಶ ಹೊರಹಾಕಿದರು.
 
ದಲಿತರು ಮತ್ತು ಒಕ್ಕಲಿಗರ ಹಕ್ಕೊತ್ತಾಯ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ವಿವಾದ ದಶಕಗಳಿಂದಲೂ ಇದೆ. ದಲಿತರು ನಮ್ದು ಅಂದ್ರೆ, ಒಕ್ಕಲಿಗರು ನಮ್ದು ಅಂತಾನೇ ಜಗಳ ಆಡ್ತಿದ್ದಾರೆ. ಆದ್ರೆ, ಈ ಕೋಲ್ಡ್ ವಾರ್ ಮಾತ್ರ ಬಗೆಹರಿದಿಲ್ಲ. ಈ ವಿವಾದ ನ್ಯಾಯಲಯದಲ್ಲೂ ಇದೆ. ಆದ್ರೂ, ಎರಡು ಸಮುದಾಯದವರು ನಮ್ದು... ನಮ್ದು... ಅನ್ನೋದನ್ನ ಮಾತ್ರ ಬಿಟ್ಟಿಲ್ಲ. ಅಲ್ಲಿನ ಪರಿಸ್ಥಿತಿ ಅಂದಿನಿಂದಲೂ ಕೂಡ ಬೂದಿ ಮುಚ್ಚಿದ ಕೆಂಡಂತಯೇ ಇದೆ. ಇಂದು ಸಾವನ್ನಪ್ಪಿದ್ದ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನ ದಲಿತರು ಅಂತ್ಯಸಂಸ್ಕಾರಕ್ಕೆಂದು ಅಲ್ಲಿಗೆ ಕೊಂಡೊಯ್ದಾಗ ಒಕ್ಕಲಿಗರು ರೊಚ್ಚೆಗೆದಿದ್ದರು. ದಲಿತರು ಮೃತದೇಹವನ್ನ ಆ ಜಾಗಕ್ಕೆ ತರ್ತಿದ್ದಂತೆ ಕ್ಷಣಾರ್ಧದಲ್ಲಿ ಹೆಣ ಇಟ್ಕೊಂಡು ಇಬ್ಬರೂ ಜಗಳಕ್ಕೆ ನಿಂತಿದ್ದರು. 

Tap to resize

Latest Videos

ಇಂದಿನಿಂದ 9 ದಿನಗಳ ಕಾಲ ದತ್ತಜಯಂತಿ ಕಾಫಿನಾಡಲ್ಲಿ ಖಾಕಿ ಫುಲ್ ಅಲರ್ಟ್!

ವಿವಾದಿತ ಸ್ಥಳದಲ್ಲಿ ಶವಸಂಸ್ಕಾರದ ವೇಳೆ ಹೈಡ್ರಾಮಾ : 

ಇನ್ನು ಒಕ್ಕಲಿಗರ ವಿರೋಧದ ಮಧ್ಯೆಯೂ ದಲಿತರು ಯಾವುದೇ ಕಾರಣಕ್ಕೂ ಶವಸಂಸ್ಕಾರ ನಿಲ್ಸೊದಿಲ್ಲ ಅಂತಾ ಅಂತಿಮ ವಿಧಿ-ವಿಧಾನ ಮಾಡುತ್ತಿರುವಾಗಲೇ ಒಕ್ಕಲಿಗರ ಪರವಾಗಿದ್ದ ಮಾಜಿ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಪೂರ್ಣಿಮ ಸುಧೀನ್ ಸೇರಿ ಮೂವರು ಮಹಿಳೆಯರು ಗುಂಡಿಯೊಳಗೆ ಇಳಿದು ಅಕ್ರೋಶ ಹೊರಹಾಕಿದ್ರು. ಪರ-ವಿರೋಧದ ಅಕ್ರೋಶದ ನಡುವೆಯೂ ಪೊಲೀಸರು ಮಹಿಳೆಯರನ್ನ ಗುಂಡಿಯಿಂದ ಮೇಲೆ ಎಳೆದು ಹಾಕಿದ್ರು. ನಂತರ ಮೃತದೇಹವನ್ನ ಆ ಜಾಗದಲ್ಲಿಯೇ ಊಳಲಾಯ್ತು. ಅಂತ್ಯಸಂಸ್ಕಾರದ ನಂತರವೂ ಎರಡು ಗುಂಪುಗಳ ನಡುವೇ ಮಾತಿನ ಚಕಮಕಿಯಾಗಿ ಕೊನೆಗೆ ಪೆÇಲೀಸ್ ಠಾಣೆಯ ಮೆಟ್ಟಿಲೇರಿ ಎರಡು ಕಡೆಯಿಂದಲೂ ದೂರು ನೀಡಲಾಯ್ತು. ಒಕ್ಕಲಿಗರ ಸಂಘ ಸಭೆ ನಡೆಸಿ ಪೆÇಲೀಸ್ ಆಲ್ದೂರು ಸಬ್ಇನ್ಸ್ಪೆಕ್ಟರ್ ಹಾಗೂ ತಹಶೀಲ್ದಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೋಮವಾರದವರೆಗೂ ಗಡುವು ನೀಡಿ, ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಚಿಕ್ಕಮಗಳೂರು: ನರಕ ಸದೃಶ್ಯ ಈ ರಸ್ತೇಲೂ ನಿತ್ಯ ಸಾವಿರಾರು ಪ್ರವಾಸಿಗರು! ಚುನಾವಣೆ ಬಳಿಕ ತಲೆಹಾಕದ ಜನಪ್ರತಿನಿಧಿಗಳು!

ಒಟ್ಟಾರೆ, ದಶಕದಿಂದಲೂ ಇದ್ದ ಆ ಜಾಗದ ವಿವಾದ ಇಂದು ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೆ, ಇಂದು ಆ ವಿವಾದದ ಜಾಗ ಶವದಿಂದಾಗಿ ರಣರಂಗವಾಗಿತ್ತು. ಒಕ್ಕಲಿಗರ ಭಾರೀ ಆಕ್ರೋಶದ ಮಧ್ಯೆಯೂ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆದಿರೋದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಹಳ್ಳಿ ಅಕ್ಷರಶಃ ರಣರಂಗವಾಗ್ತಿದ್ದಂತೆ ಅಲರ್ಟ್ ಆದ ಪೊಲೀಸರು ಹೈ ಅಲರ್ಟ್ ಘೋಷಿಸಿ 80ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಿದ್ದರು. ಆದರೆ, ತಹಶೀಲ್ದಾರ್ ಹಾಗೂ ಪಿ.ಎಸ್.ಐ. ವಿರುದ್ಧ ಕ್ರಮಕ್ಕೆ ಆಗ್ರಹಿಸಿರೋ ಒಕ್ಕಲಿಗರ ಸಂಘ ಸೋಮವಾರದವರೆಗೆ ಡೆಡ್ಲೈನ್ ನೀಡಿ ಪ್ರತಿಭಟನೆಯಿಂದ ಹಿಂದೆ ಸರಿದಿದೆ

click me!