ಬೆಂಗಳೂರು ಗಲಭೆ: ಸಂಪತ್‌ ರಾಜ್‌ ಆಪ್ತ ಅರುಣ್‌ ಸಂಬಂಧಿಕರಿಂದ ಹೈಡ್ರಾಮಾ

By Kannadaprabha NewsFirst Published Aug 22, 2020, 7:21 AM IST
Highlights

ರಾಜಕೀಯ ದ್ವೇಷದಿಂದ ಅರುಣ್‌ ಬಂಧನ: ಆರೋಪ| ಆಯುಕ್ತರ ಕಚೇರಿ ಬಳಿ ಜಮಾಯಿಸಿದ ಅರುಣ್‌ ಸಂಬಂಧಿಕರನ್ನು ತಕ್ಷಣವೇ ವಶಕ್ಕೆ ಪಡೆದ ಪೊಲೀಸರು| ಕಬ್ಬನ್‌ ಪಾರ್ಕ್ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದು ಪೊಲೀಸರು ಬಿಡುಗಡೆ| 

ಬೆಂಗಳೂರು(ಆ.22): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಪ್ತ ಸಹಾಯಕನ ಬಿಡುಗಡೆಗೆ ಒತ್ತಾಯಿಸಿ ನಗರ ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಶುಕ್ರವಾರ ರಾತ್ರಿ ದಿಢೀರ್‌ ಪ್ರತಿಭಟನೆಗಿಳಿದು ಆತನ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರು ಹೈಡ್ರಾಮಾ ನಡೆಸಿದ್ದಾರೆ. 

ಎರಡು ದಿನಗಳ ಹಿಂದೆ ಗಲಭೆಗೆ ಸಂಚು ನಡೆಸಿದ ಆರೋಪದ ಮೇರೆಗೆ ಸಂಪತ್‌ರಾಜ್‌ನ ಸೋದರ ಸಂಬಂಧಿಯೂ ಆಗಿರುವ ಆಪ್ತ ಸಹಾಯಕ ಅರುಣ್‌ನನ್ನು ಸಿಸಿಬಿ ಬಂಧಿಸಿದೆ. ಆದರೆ ಗಲಭೆಯಲ್ಲಿ ಅರುಣ್‌ ಪಾತ್ರವಿಲ್ಲ. ಆತ ಅಮಾಯಕ. ರಾಜಕೀಯ ದ್ವೇಷದಿಂದ ಅರುಣ್‌ನನ್ನು ಬಂಧಿಸಲಾಗಿದೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದಾರೆ.

ಬೆಂಗಳೂರು ಗಲಭೆ: ಮಾಜಿ ಮೇಯರ್‌ ಸಂಪತ್‌, ಜಾಕೀರ್‌ಗೆ ಮುಳ್ಳಾದ ಎಸ್‌ಡಿಪಿಐ ಸ್ನೇಹ?

ಆಯುಕ್ತರ ಕಚೇರಿ ಬಳಿ ಜಮಾಯಿಸಿದ ಅರುಣ್‌ ಸಂಬಂಧಿಕರನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದರು. ನಂತರ ಕಬ್ಬನ್‌ ಪಾರ್ಕ್ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದು ಅವರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.
ಆರು ದಿನಗಳಿಂದ ಅರುಣ್‌ ಮನೆಗೆ ಬಂದಿಲ್ಲ. ಆತನ ಮೊಬೈಲ್‌ ಪೋನ್‌ ಸಹ ಸ್ವಿಚ್ಡ್‌ ಆಫ್‌ ಆಗಿದೆ. ಗಲಭೆಯಲ್ಲಿ ಅರುಣ್‌ ಪಾತ್ರವಿದೆ ಎಂದು ಹೇಳಲಾಗುತ್ತದೆ. ಆದರೆ ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳನ್ನು ಪೊಲೀಸರು ತೋರಿಸುತ್ತಿಲ್ಲ. ಬಂಧಿಸಿರುವ ಬಗ್ಗೆ ಸಹ ನಮಗೆ ತಿಳಿಸಿಲ್ಲ ಎಂದು ಕುಟುಂಬ ಸದಸ್ಯರು ದೂರಿದ್ದಾರೆ.

"

click me!