ಜಗತ್ತಿಗೆ ಶಾಂತಿ, ಕರುಣೆ, ಪ್ರೀತಿಯನ್ನು ನೀಡಿದ ಭಗವಾನ್ ಗೌತಮ ಬುದ್ಧ. ಗೌತಮ ಬುದ್ಧ ಈಡೀ ಜಗತ್ತು ಜ್ಞಾನದಿಂದ ತುಂಬಬೇಕು ಎಂದು ಸಾರಿದವರು. ಇದನ್ನು ಸಾಕಾರಗೊಳಿಸಲು ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದನು. ಈ ಬೌದ್ಧ ಧರ್ಮವೂ ಈಗ ಜಗತ್ತಿನಲ್ಲಿ ತನ್ನದೆಯಾದ ಸಿದ್ಧಾಂತವನ್ನು ಹೊಂದಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ (ಅ.14): ಜಗತ್ತಿಗೆ ಶಾಂತಿ, ಕರುಣೆ, ಪ್ರೀತಿಯನ್ನು ನೀಡಿದ ಭಗವಾನ್ ಗೌತಮ ಬುದ್ಧ. ಗೌತಮ ಬುದ್ಧ ಈಡೀ ಜಗತ್ತು ಜ್ಞಾನದಿಂದ ತುಂಬಬೇಕು ಎಂದು ಸಾರಿದವರು. ಇದನ್ನು ಸಾಕಾರಗೊಳಿಸಲು ಬೌದ್ಧ ಧರ್ಮವನ್ನು ಸ್ಥಾಪನೆ ಮಾಡಿದನು. ಈ ಬೌದ್ಧ ಧರ್ಮವೂ ಈಗ ಜಗತ್ತಿನಲ್ಲಿ ತನ್ನದೆಯಾದ ಸಿದ್ಧಾಂತವನ್ನು ಹೊಂದಿದೆ. ಈ ಬೌದ್ಧ ಧರ್ಮಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ 350ಕ್ಕೂ ಹೆಚ್ಚು ದಲಿತ ಸಮುದಾಯ ಜನ ಹಿಂದು ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಸಮ್ಮುಖದಲ್ಲಿ, ವರಜ್ಯೋತಿ ಭಂತೇಜಿ ಅವರ ಸಾನಿಧ್ಯದಲ್ಲಿ ಬೌದ್ಧ ಧರ್ಮದ ದೀಕ್ಷೆ ಪಡೆದರು.
undefined
ಬೌದ್ಧ ಧರ್ಮದ ದೀಕ್ಷೆ ಪಡೆದ 350 ಕ್ಕೂ ಹೆಚ್ಚು ದಲಿತರು: ಸಂವಿಧಾನ ಶಿಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹಿಂದು ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದ ದಿನವಾಗಿದೆ. ಹಾಗಾಗಿ ಬೋಧಿಸತ್ವ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 66 ನೇ ಧರ್ಮ ಚಕ್ರ ಪ್ರವರ್ತನಾ ದಿನದ ಅಂಗವಾಗಿ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ಯಾದಗಿರಿ ಜಿಲ್ಲೆಯ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬೌದ್ಧ ಬೀಕ್ಷುಗಳು, ದಲಿತ ಸಂಘಟನೆಗಳ ಸಹಯೋಗದಲ್ಲಿ ನೂರಾರು ಜನ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು.
ಪಿಪಿಇ ಕಿಟ್ ಧರಿಸಿ ವಿನೂತನ ಪ್ರತಿಭಟಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಉಮೇಶ ಮುದ್ನಾಳ್
ಸುರಪುರ, ಹುಣಸಗಿ ತಾಲೂಕು ಸೇರಿದಂತೆ ವಿವಿಧ ತಾಲೂಕಿನ ದಲಿತ ಬಾಂಧವರು ಕೂಡ ಬೌದ್ಧ ಧರ್ಮದ ದೀಕ್ಷಾವನ್ನು ಸ್ವೀಕರಿಸಿದರು. ಬುದ್ಧನ ಪಂಚಶೀಲ ಪಠಣಗಳು, ಅಷ್ಟಾಂಗ ಮಾರ್ಗಗಳು, 22 ಪ್ರತಿಜ್ಞಾ ಭೋದನೆಗಳನ್ನು ಬೌದ್ಧ ಧರ್ಮದ ದೀಕ್ಷೆ ಪಡೆದ ಎಲ್ಲರಿಗೂ ಬೋಧಿಸಲಾಯಿತು. 500 ಕ್ಕೂ ಹೆಚ್ಚು ಜನ ನೋಂದಾವಣಿ ಮಾಡಿಕೊಂಡಿದ್ದರು ಆದ್ರೆ 356 ಜನ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿ ದೀಕ್ಷೆ ಪಡೆದಿದ್ದಾರೆ.
ಬೌದ್ಧ ವೈಜ್ಞಾನಿಕ, ದಲಿತರ ಅಭಿವೃದ್ಧಿ ಧರ್ಮ: ಬೌದ್ಧ ಧರ್ಮ ದೀಕ್ಷಾ ಕಾರ್ಯಕ್ರಮಕ್ಕೆ ಬಾಬಾಸಾಹೇಬ ಅಂಬೇಡ್ಕರ್ ರವರ ಮೊಮ್ಮಗಳು ರಮಾತಾಯಿ ಆಗಮಿಸಿದ್ದರು. ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ದಲಿತರ ಮೇಲೆ ದೌರ್ಜನ್ಯಗಳು ಇನ್ನು ನಿಂತಿಲ್ಲ. ರಾಜಸ್ಥಾನದಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಲಾಯಿತು. ಅದ್ರೆ ಆಳುವ ಸರ್ಕಾರಗಳು, ಅತ್ಯಾಚಾರದ ಪರ ನಿಂತಿರುವುದು ವಿಷಾದನೀಯ. ಬೌದ್ಧ ಧರ್ಮ ವೈಜ್ಞಾನಿಕ ಧರ್ಮವಾಗಿದ್ದು, ದಲಿತರ ಅಭಿವೃದ್ಧಿ ಬೌದ್ಧ ಧರ್ಮದಿಂದ ಮಾತ್ರ ಸಾಧ್ಯ.
ನೂರಾರು ಹಿಂದು ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿರುವುದು ಬಹಳ ಸಂತೋಷವಾಗಿದೆ. ಬೌದ್ಧ ಧರ್ಮದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರವರ ಅನುಯಾಯಿಗಳು ಪ್ರಸಕ್ತ ಮಹಾರಾಷ್ಟ್ರದಲ್ಲಿ ಒಂದು ಕೋಟಿ ಜನರಿದ್ದಾರೆ. 1935 ರಲ್ಲಿ ಅಂಬೇಡ್ಕರ್ ರವರು ಬೌದ್ಧ ದರ್ಮದ ಬಗ್ಗೆ ಒಲವಿತ್ತು, ಅದರ ಬಗ್ಗೆ ಅಭ್ಯಾಸ ಮಾಡಿದ್ದರು. ಬಾಬಾಸಾಹೇಬ ಅಂಬೇಡ್ಕರ್ ಅವರು ತಮ್ಮ ಐದು ಲಕ್ಷ ಅನುಯಾಯಿಗಳ ಜೊತೆ 1956 ರಲ್ಲಿ ನಾಗಪುರದಲ್ಲಿ ಹಿಂದು ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದರು. ಹಾಗಾಗಿ ಅವರ ಫಲ ಸುರಪುರ ಗೋಲ್ಡನ್ ಕೇವ್ ನಲ್ಲಿ ಕಾಣುತ್ತಿದೆ ಎಂದರು.
ದಲಿತರನ್ನು ಹಿಂದುವಾಗಿ ಕಾಣುತ್ತಿಲ್ಲ ಹಾಗಾಗಿ ಬೌದ್ಧ ಧರ್ಮ ಸ್ವೀಕರಿಸಿದ್ದೇನೆ: ಗೋಲ್ಡನ್ ಕೇವ್ ಬುದ್ಧವಿಹಾರ ಟ್ರಸ್ಟ್ ಹಾಗೂ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಟ್ರಸ್ಟ್‌ನ ಗೌರವಾಧ್ಯಕ್ಷರಾದ ವರಜ್ಯೋತಿ ಭಂತೇಜಿ ಮಾತನಾಡಿ, ನಾವು ಬೌದ್ಧರು ಶಾಂತಿಪ್ರೀಯರು, ದೇಶದಲ್ಲಿ ಶಾಂತಿ ನೆಲೆಸುವುದಕ್ಕಾಗಿ ಬುದ್ಧನ ಕರುಣೆ, ಮೈತ್ರೆ, ವಿಶ್ವಾಸ, ನಂಬಿಕೆ ಅವಶ್ಯವಾಗುತ್ತದೆ. ಈ ಶೋಷಿತ ಸಮುದಾಯ ಶೋಷಣೆಯಿಂದ ಹೊರಬರಬೇಕಾದ್ರೆ ಬೌದ್ಧ ಧರ್ಮದ ಕಡೆ ಬರಬೇಕಾಗುತ್ತದೆ.
ಪಿಎಸ್‌ಐ ನೇಮಕಾತಿ ಅಕ್ರಮ: ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆ..?
ಅಕ್ಟೋಬರ್ 14 ಇದು ಪ್ರವರ್ತನಾ ದಿನವಾಗಿದ್ದು, ಸಾಮ್ರಾಟ್ ಅಶೋಕ ಬೌದ್ಧ ಧರ್ಮ ದಿಕ್ಷೆ ಪಡೆದ ದಿನ, ಬಾಬಾಸಾಹೇಬ ಅಂಬೇಡ್ಕರ್ ದೀಕ್ಷೆ ದೀಕ್ಷೆ ಪಡೆದ ದಿನಾವಾಗಿದೆ ಎಂದರು. ಹಿಂದು ಧರ್ಮ ತ್ಯಜಿಸಿ ಬೌದ್ಧ ಸ್ವೀಕರಿಸಿದ ಗೋಲ್ಡನ್ ಕೇವ್ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಮಾತನಾಡಿ, ದೇಶದ ಹಲವು ಕಡೆಗಳಲ್ಲಿ ದಲಿತರನ್ನು ದೇವಸ್ಥಾನ, ಹೋಟೆಲ್ ಒಳಗೆ ಬೀಡುತ್ತಿಲ್ಲ. ಒಬ್ಬ ಕೇಂದ್ರ ಸಚಿವರಿಗೆ ಗ್ರಾಮದೊಳಗೆ ಪ್ರವೇಶ ಮಾಡಲು ಬಿಡುತ್ತಿಲ್ಲ ಅಂದ್ರೆ ನಮ್ಮನ್ನು ಹಿಂದು ಅಂತ ಯಾವಾಗ ಒಪ್ಪಿಕೊಳ್ತಾರೆ? ನಾವು ಹಿಂದು ಧರ್ಮದ ಆಚಾರ-ವಿಚಾರ ಯಾವುದನ್ನು ಪಾಲನೆ ಮಾಡುವುದಿಲ್ಲ. ಹಾಗಾಗಿ ನಮ್ಮ ದಲಿತ ಸಮುದಾಯವದರು ನಮ್ಮ ಮೂಲ ಧರ್ಮ ಬೌದ್ಧ ದರ್ಮವನ್ನು ಸ್ವೀಕಾರ ಮಾಡಿದ್ದೇವೆ ಎಂದರು.