'ಪ್ರಿಯಕರ ಕೃಷ್ಣನಿಗೆ ಐ ಲವ್ ಯು..'; ದೇವಸ್ಥಾನದ ಹುಂಡಿಯಲ್ಲಿ ಲವ್ ಲೆಟರ್‌ ಪತ್ತೆ!

Published : Jul 30, 2024, 05:46 PM ISTUpdated : Jul 30, 2024, 06:04 PM IST
'ಪ್ರಿಯಕರ ಕೃಷ್ಣನಿಗೆ ಐ ಲವ್ ಯು..'; ದೇವಸ್ಥಾನದ ಹುಂಡಿಯಲ್ಲಿ ಲವ್ ಲೆಟರ್‌ ಪತ್ತೆ!

ಸಾರಾಂಶ

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಭಕ್ತರು ಭರಪೂರ ಕಾಣಿಕೆ ನೀಡಿದ್ದಾರೆ. ಕಾರ್ಯದ ವೇಳೆ ಹುಂಡಿಯಲ್ಲಿ ಹಣದ ಜೊತೆಗೆ ಲವ್ ಲೆಟರ್ ಪತ್ತೆಯಾಗಿದೆ.

ಕೋಲಾರ (ಜು.30) : ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ಬಾರಿ ಭಕ್ತರು ಭರಪೂರ ಕಾಣಿಕೆ ನೀಡಿದ್ದಾರೆ. ಕಾರ್ಯದ ವೇಳೆ ಹುಂಡಿಯಲ್ಲಿ ಹಣದ ಜೊತೆಗೆ ಲವ್ ಲೆಟರ್ ಪತ್ತೆಯಾಗಿದೆ.

ಹೌದು, ತಿರುಮಲ ತಿರುಪತಿ ದೇವಸ್ಥಾನದಂತೆಯೇ ಕೋಲಾರದ ಚಿಕ್ಕತಿರುಪತಿ ಪ್ರಸನ್ನ ವೆಂಕಟೇಶ್ವರ ದೇವಾಲಯವು ಪ್ರಸಿದ್ಧವಾಗಿದೆ. ಪ್ರತಿಮೂರು ತಿಂಗಳಿಗೊಮ್ಮೆ ನಡೆಯುವ ಹುಂಡಿ ಎಣಿಕೆ ಕಾರ್ಯದಲ್ಲಿ ಚಿನ್ನ ಬೆಳ್ಳಿ ಸಹಿತ ಭಕ್ತರು ಲಕ್ಷಾಂತರು ದೇಣಿಗೆ ನೀಡುತ್ತಾರೆ. ಈ ಬಾರಿ ಹುಂಡಿ ಎಣಿಕೆ ಕಾರ್ಯವೇಳೆ ಹುಂಡಿಯಲ್ಲಿ ಲವ್ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

ಬೇಸರಗೊಂಡ ಭಕ್ತರಿಂದ ಬಬ್ಬುಸ್ವಾಮಿಯಲ್ಲಿ ಪ್ರಾರ್ಥನೆ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವದ ಅಭಯ!

ಲವ್‌ ಲೆಟರ್‌ನಲ್ಲಿ ಏನಿದೆ?

'ಪ್ರಿಯಕರ ಕೃಷ್ಣನಿಗೆ ಐ ಲವ್' ಎಂದು ಬರೆದಿರುವ ಪ್ರಿಯತಮೆ. ಬೆಳಗಾವಿ ಮೂಲದ ಕಾಂಚನ ಮಾಲ ಎಂಬ ಪ್ರಿಯತಮೆ ಹೆಸರಲ್ಲಿ ಬರೆದಿರುವ ಲವ್ ಲೆಟರ್, 'ನಿನ್ನನ್ನು ಬಿಟ್ಟು ನಾನು ಬದುಕಲಾರೆ. ನಾನು ಕಣ್ಣು ಮುಚ್ಚಿದರೂ, ಕಣ್ಣುಬಿಟ್ಟರೂ ನೀನೇ ಕಾಣಿಸುತ್ತೀಯಾ, ನಿನ್ನನ್ನು ನನ್ನಷ್ಟು ಪ್ರೀತಿ ಮಾಡುವವಳು ಈ ಜಗತ್ತಿನಲ್ಲಿ ಯಾರೂ ಇಲ್ಲ..' ಎಂದು ಲೆಟರ್‌ನಲ್ಲಿ ಬರೆದಿರುವ ಪ್ರಿಯತಮೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಬಿಡುಗಡೆಗಾಗಿ ತಿರುಪತಿ ಹುಂಡಿಗೆ 10 ರು. ಕಾಣಿಕೆ..!

ಕೆನರಾ ಬ್ಯಾಂಕ್ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ  ಹುಂಡಿ ಎಣಿಕೆ ನಡೆಯಿತು. ಈ ವೇಳೆ ತಹಶೀಲ್ದಾರ್ ರಮೇಶ್,  ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸೆಲ್ವಮಣಿ ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?