ಮಹಿಳೆ ಸ್ನಾನದ ವಿಡಿಯೋ ರೆಕಾರ್ಡ್‌ ಮಾಡ್ತಿದ್ದ ಕಾಮುಕ ಲಾಡ್‌ಸಾಬ್‌ಗೆ ಬಿತ್ತು ಧರ್ಮದೇಟು!

By Sathish Kumar KH  |  First Published Jan 9, 2024, 4:32 PM IST

ಹುಬ್ಬಳ್ಳಿಯ ಲೋಹಿಯಾ ನಗರದ ಮನೆಯೊಂದರಲ್ಲಿ ಮಹಿಳೆ ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿದ್ದ ಕಾಮುಕನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ.


ಹುಬ್ಬಳ್ಳಿ (ಜ.09): ಮಹಿಳೆಯೊಬ್ಬಳೇ ಮನೆಯಲ್ಲಿ ಸ್ನಾನ ಮಾಡುವಾಗ ಸ್ನಾನದ ಕೋಣೆಯ ಹಿಂದೆ ಬಂದು ಕಾಮುಕನೊಬ್ಬ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದುದನ್ನು ಕಂಡು ಸ್ಥಳೀಯರು ಆತನನ್ನು ಹಿಡಿದು ಕಂಬಕ್ಕೆ ಕಟ್ಟುಹಾಕಿ ಧರ್ಮದೇಟು ಕೊಟ್ಟಿದ್ದಾರೆ.

ಮನೆಯಲ್ಲಿ ಮಹಿಳೆಯೊಬ್ಬಳೇ ಇರುವಾಗ ಕದ್ದು ನೋಡುವ ಹಾಗೂ ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪದೇ ಪದೇ ನೋಡುವುದು, ಆ ವಿಡಿಯೋ ತೋರಿಸಿ ಮಹಿಳೆಗೆ ಕಿರುಕುಳ ನೀಡುವುದು ನಡೆಯುತ್ತಲೇ ಇವೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗುವ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ಹರಿಬಿಟ್ಟು ಅಮಾಯಕ ಮಹಿಳೆಯರ ಜೀವನವನ್ನೇ ಸರ್ವನಾಶ ಮಾಡುತ್ತಾರೆ. ಅದೇ ರೀತಿ ಹುಬ್ಬಳ್ಳಿಯ ಮನೆಯೊಂದರಲ್ಲಿ ಮಹಿಳೆ ಸ್ನಾನ ಮಾಡುವಾಗ ಕದ್ದು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಈಗ ಸಿಕ್ಕಿಕೊಂಡು ಧರ್ಮದೇಟು ತಿಂದಿದ್ದಾನೆ.

Tap to resize

Latest Videos

ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!

ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಘಟನೆ ನಡದಿದೆ. ಮಹಿಳೆ ಸ್ನಾನ ಮಾಡುತ್ತಿದ್ದಾಗ ವೀಡಿಯೋ ಚಿತ್ರೀಕರಿಸುತ್ತಿದ್ದ ಲಾಡ್‌ಸಾಬ್ ಎಂಬಾತನನ್ನು ಸ್ಥಳೀಯರು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಕಾಮುಕ ಲಾಡ್‌ಸಾಬ್‌ ಹುಬ್ಬಳ್ಳಿಯ ಗಣೇಶ ಪೇಟೆ ನಿವಾಸಿಯಾಗಿದ್ದಾನೆ. ಲೋಹಿಯಾ ನಗರದಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ ಲಾಡ್‌ಸಾಬ್, ಮನೆಯ ಬಾತ್‌ರೂಮ್ ಕಿಟಕಿಯಲ್ಲಿ ಮೊಬೈಲ್ ಇಟ್ಟಿದ್ದನು. ಮಹಿಳೆ ಸ್ನಾನ ಮಾಡುವ ವೀಡಿಯೋ ತೆಗೆಯುವಾಗ ಸಿಕ್ಕಿಬಿದ್ದಿದ್ದಾನೆ.

ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!

ಇನ್ನು ಮಹಿಳೆ ಸ್ನಾನದ ವೇಳೆ ಕಿಟಕಿಯ ಬಳಿ ಏನೋ ಸದ್ದಾಗಿರುವುದು ಗಮನಕ್ಕೆ ಬಂದಿದ್ದು, ಆಕಡೆ ತಿರುಗಿ ನೋಡಿದಾಗ ಆಕೆಗೆ ಅನುಮಾನ ಬಂದು ಬಟ್ಟೆಯನ್ನು ಮುಚ್ಚಿಕೊಳ್ಳುತ್ತಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರು ಹಾಗೂ ಸ್ಥಳೀಯರು ಮನೆಯ ಬಳಿ ಜಮಾಯಿಸಿದಾಗ ಆರೋಪಿ ಕಿಟಕಿಯ ಬಳಿ ಇಟ್ಟಿದ್ದ ಮೊಬೈಲ್‌ ಅನ್ನು ತೆಗೆದುಕೊಂಡು ಓಡಿ ಹೋಗಲು ಮುಂದಾಗಿದ್ದಾನೆ. ಆತನನ್ನು ಹಿಡಿದುಕೊಂಡ ಸ್ಥಳೀಯರು ವಿದ್ಯುತ್‌ ಕಂಬಕ್ಕೆ ಕಟ್ಟಿಹಾಕಿ ಗೂಸಾ ಕೊಟ್ಟಿದ್ದಾರೆ. ನಂತರ ಆತನನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

click me!