Hubballi Violence: ಗಲಭೆ ಮಾಸ್ಟರ್‌ ಮೈಂಡ್‌ ನಾನಲ್ಲ: ವಸೀಂ ಪಠಾಣ್‌

By Govindaraj S  |  First Published Apr 22, 2022, 3:20 AM IST

‘ನಾನು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ ಮಾಸ್ಟರ್‌ ಮೈಂಡ್‌ ಅಲ್ಲ, ಗಲಾಟೆ ನಡೆಸದಂತೆ ಯುವಕರ ಗುಂಪನ್ನು ಸಮಾಧಾನ ಪಡಿಸುತ್ತಿದ್ದೆ. ಆದರೆ ಇದೀಗ ನನ್ನನ್ನೇ ಗಲಭೆಯ ಮಾಸ್ಟರ್‌ ಮೈಂಡ್‌ ಎಂದು ಬಿಂಬಿಸಲಾಗಿದೆ’ ಎಂದು ವಸೀಂ ಪಠಾಣ್‌ ಸ್ಪಷ್ಟಪಡಿಸಿದ್ದಾನೆ.


ಹುಬ್ಬಳ್ಳಿ (ಏ.22): ‘ನಾನು ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ (Hubballi Violence) ಮಾಸ್ಟರ್‌ ಮೈಂಡ್‌ ಅಲ್ಲ, ಗಲಾಟೆ ನಡೆಸದಂತೆ ಯುವಕರ ಗುಂಪನ್ನು ಸಮಾಧಾನ ಪಡಿಸುತ್ತಿದ್ದೆ. ಆದರೆ ಇದೀಗ ನನ್ನನ್ನೇ ಗಲಭೆಯ ಮಾಸ್ಟರ್‌ ಮೈಂಡ್‌ ಎಂದು ಬಿಂಬಿಸಲಾಗಿದೆ’ ಎಂದು ವಸೀಂ ಪಠಾಣ್‌ (Wasim Pathan) ಸ್ಪಷ್ಟಪಡಿಸಿದ್ದಾನೆ. ತಮ್ಮ ಬಂಧನಕ್ಕೆ ನಾಲ್ಕು ತಾಸು ಮುನ್ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿರುವ ವಸೀಂ, ತಾನು ನಿರಪರಾಧಿ. ಆದರೆ ಕೆಲವರ ಷಡ್ಯಂತ್ರದಿಂದ ತನ್ನನ್ನು ಅಪರಾಧಿ ಸ್ಥಾನಕ್ಕೆ ನಿಲ್ಲಿಸುವ ಪ್ರಯತ್ನ ನಡೆದಿದೆ ಎಂದಿದ್ದಾನೆ.

ಯುವಕನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ನಮ್ಮ ಸಮುದಾಯಕ್ಕೆ ಅವಹೇಳನ ಮಾಡಿದ್ದ. ಇದರಿಂದ ನಮ್ಮ ಸಮಾಜದ ಯುವ ಸಮೂಹ ರೊಚ್ಚಿಗೆದ್ದಿತ್ತು. ಹಳೇಹುಬ್ಬಳ್ಳಿ ಠಾಣೆ ಮುಂದೆ ಜಮೆಯಾಗಿತ್ತು. ಆಗ ನನಗೆ ಅವರನ್ನು ಸಮಾಧಾನಪಡಿಸಲು ಕರೆಯಿಸಿಕೊಂಡರು. ಆ ಪ್ರಯತ್ನ ನಡೆಸಿದೆ ಅಷ್ಟೇ ಎಂದಿದ್ದಾನೆ. ಆದರೆ ಈತನನ್ನು ಕರೆಯಿಸಿದ್ದು ಯಾರು? ಎಂಬುದನ್ನು ಹೇಳಿಲ್ಲ. ಹಳೇಹುಬ್ಬಳ್ಳಿ ಠಾಣೆ ಬಳಿ ತೆರಳಿ ಯುವಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಆದರೆ ಯಾರೊಬ್ಬರೂ ತಮ್ಮ ಮಾತು ಕೇಳಲಿಲ್ಲ. ಮೈಕ್‌ ಇಲ್ಲದ ಕಾರಣ ಪೊಲೀಸ್‌ ವಾಹನದ ಮೇಲೆ ಹತ್ತಿ ನಿಂತು ಹೇಳಬೇಕಾಯಿತು. ಅಂದು ನಾನು ಮಾತನಾಡಿದ ವಿಡಿಯೋ ನೋಡಿ. 

Latest Videos

undefined

Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ

ನಾನು ಎಲ್ಲೂ ಕಲ್ಲು ಎಸೆಯಿರಿ, ಗಲಾಟೆ ಮಾಡಿ ಎಂದು ಪ್ರಚೋದನೆ ನೀಡಿಲ್ಲ. ಎಲ್ಲರೂ ನಿಮ್ಮ ನಿಮ್ಮ ಮನೆಗೆ ಹೋಗಿ ಎಂದು ಸಮಾಧಾನಪಡಿಸಿ ಕಳುಹಿಸುವ ಪ್ರಯತ್ನ ಮಾಡುತ್ತಿದ್ದೆ. ಗಲಾಟೆ ಎಬ್ಬಿಸುವ ಯಾವುದೇ ಇರಾದೆ ನನ್ನಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾನೆ. ಅಷ್ಟರೊಳಗೆ ಅಲ್ಲಿ ಲೈಟ್‌ ಆಫ್‌ ಆದವು. ಕೆಲವರು ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಲ್ಲು ತೂರಾಟದಲ್ಲಿ ತೊಡಗಿದರು. ಇದು ಯಾರೋ ಬೇಕಂತಲೇ ಮಾಡಿರುವ ಕೃತ್ಯ. ಪೊಲೀಸರ ಮೇಲೆ ನನಗೆ ನಂಬಿಕೆ, ಭರವಸೆ ಇದೆ. ಒಂದು ವೇಳೆ ನಾನು ತಪ್ಪಿತಸ್ಥನಾಗಿದ್ದರೆ ತಕ್ಕ ಶಿಕ್ಷೆ ನೀಡಲಿ. ಅದನ್ನು ಸ್ವೀಕರಿಸುವೆ ಎಂದಿದ್ದಾನೆ. ಈತ ವಿಡಿಯೋ ರಿಲೀಸ್‌ ಮಾಡಿ ನಾಲ್ಕು ಗಂಟೆಯೊಳಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಪೊಲೀಸರ ಹತ್ಯೆಗೂ ಹುಬ್ಬಳ್ಳಿ ಉದ್ರಿಕ್ತರಿಂದ ಯತ್ನ: ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ವೇಳೆ ಪೊಲೀಸರು, ಪೊಲೀಸ್‌ ಠಾಣೆ ಹಾಗೂ ಪೊಲೀಸ್‌ ವಾಹನಗಳನ್ನು ಗುರಿಯಾಗಿಸಿಕೊಂಡಿದ್ದ ಗಲಭೆಕೋರರು ಕರ್ತವ್ಯಕ್ಕೆ ಬರುತ್ತಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯ ಹತ್ಯೆಗೂ ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್‌ ಅವರು ಓಡಿಹೋಗಿ ಗಲಭೆಕೋರರಿಂದ ತಪ್ಪಿಸಿಕೊಂಡು ಬಚಾವಾಗಿದ್ದಾರೆ ಎನ್ನುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಕಸಬಾ ಠಾಣೆ ಕಾನ್‌ಸ್ಟೇಬಲ್‌ ಮಂಜುನಾಥ್‌ ಅವರು ಹಳೇ ಹುಬ್ಬಳ್ಳಿ ಪೊಲೀಸ್‌ (Police) ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ. ಶನಿವಾರ ರಾತ್ರಿ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಎಲ್ಲ ಠಾಣೆಗಳಲ್ಲಿನ ಸಿಬ್ಬಂದಿಯನ್ನು ಹಳೇ ಹುಬ್ಬಳ್ಳಿ ಠಾಣೆಗೆ ಕಳುಹಿಸುವಂತೆ ಮಾಹಿತಿ ರವಾನಿಸಲಾಗಿತ್ತು. 

ನಾವೇನು ಬೋರ್ಡ್ ಹಾಕಿಕೊಂಡು ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿ ಅಂತ ಹೇಳಿದ್ವಾ?

ಅದರಂತೆ ಕಸಬಾ ಪೇಟೆ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಮಂಜುನಾಥ ರಾಯರಡ್ಡಿ ಹಾಗೂ ಅನಿಲ್‌ ಕಾಂಡೇಕರ್‌ ಬೈಕ್‌ ಹತ್ತಿ ಹಳೇ ಹುಬ್ಬಳ್ಳಿ ಠಾಣೆಯತ್ತ ಬರುವಾಗ ಸುಮಾರು ನೂರು ಜನರಿದ್ದ ಗುಂಪು ಇವರನ್ನು ಅಡ್ಡಗಟ್ಟಿದೆ. ಎಲ್ಲರ ಕೈಯಲ್ಲಿ ಬಡಿಗೆ, ಕಲ್ಲುಗಳಿದ್ದವು. ‘ನಮ್ಮ ಸಮುದಾಯದ ವಿರುದ್ಧ ವ್ಯಾಟ್ಸಾಪ್‌ನಲ್ಲಿ ಪೋಸ್ಟ್‌ ಮಾಡಿದವನನ್ನು ಅರೆಸ್ಟ್‌ ಮಾಡುತ್ತಿಲ್ಲ ನೀವು. ನಿಮ್ಮನ್ನು (ಪೊಲೀಸರನ್ನು) ಕೊಲೆ(Murder) ಮಾಡುತ್ತೇವೆ’ ಎಂದು ಬೆದರಿಕೆ(Tthreat) ಹಾಕಿದರಂತೆ. ಮುಂದಿನ ಅಪಾಯ ಊಹಿಸಿ ಅವರಿಬ್ಬರೂ ಬೈಕ್‌ ಬಿಟ್ಟು ಪರಾರಿಯಾಗಿದ್ದಾರೆ. ಹಿಂದಿದ್ದ ಗುಂಪು ‘ಇವರನ್ನು ಸುಮ್ಮನೆ ಬಿಡಬಾರದು. ಇಲ್ಲೇ ಕೊಂದು ಬಿಡಿ’ ಎಂದು ಜೋರಾಗಿ ಕೂಗಿತು. ಇದರಿಂದ ಉದ್ರಿಕ್ತ ಗುಂಪಿನ ಕೆಲವರು ಇವರತ್ತ ಕಲ್ಲುಗಳನ್ನು ಬೀಸಲು ಪ್ರಾರಂಭಿಸಿತು. ಆಗ ಅಲ್ಲಿಂದ ಓಡಿ ತಪ್ಪಿಸಿಕೊಂಡು ಹಳೇ ಹುಬ್ಬಳ್ಳಿ ಠಾಣೆ ತಲುಪಿದ್ದಾರೆ.

click me!