Hubballi: ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ

By Govindaraj SFirst Published Dec 21, 2022, 8:31 AM IST
Highlights

ಬಿಆರ್‌ಟಿಎಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿರುವ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾದ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. 

ಹುಬ್ಬಳ್ಳಿ (ಡಿ.21): ಬಿಆರ್‌ಟಿಎಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿರುವ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾದ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ದರ್ಗಾ ಸುತ್ತಲೂ ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಹುಬ್ಬಳ್ಳಿ - ಧಾರವಾಡ ಸಂಪರ್ಕ ಕಲ್ಪಿಸೋ‌ ಮುಖ್ಯ ರಸ್ತೆಯ ಪಕ್ಕದಲ್ಲೇ ಇರೊ ದರ್ಗಾದ ಬಳಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್‌ನಿಂದ ಭಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. 

ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ ನೀಡಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ದರ್ಗಾ ತೆರವು ಕಾರ್ಯಾಚರಣೆ ಆರಂಭಿಸಲಾಗಿದ್ದು, ಪೊಲೀಸರು ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಜೊತೆಗೆ ದರ್ಗಾ ತೆರವಿನ ದೃಶ್ಯ ಸೆರೆ ಹಿಡಿಯದಂತೆ ಮಾಧ್ಯಮದಲ್ಲಿ ನಿರ್ಬಂಧ ಮಾಡಲಾಗಿದೆ. ಇನ್ನು ದರ್ಗಾ ಸುತ್ತ ತಗಡು ಜೋಡಿಸಿ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಡಿಸಿಪಿ‌ ಸಾಹಿಲ್ ಬಾಗ್ಲಾ ಮತ್ತು ಬ್ಯಾಕೋಡ್ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಮಾತ್ರವಲ್ಲದೇ ಭದ್ರತೆಗೆ ವಿಶೇಷ ಪಡೆಯನ್ನು ನಿಯೋಜಿಸಲಾಗಿದೆ. ಕಳೆದ ಒಂದು ದಶಕದಿಂದ ದರ್ಗಾ ತೆರವಿಗೆ ಅಡ್ಡಿಯಾಗಿತ್ತು. ಇದರಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿತ್ತು.

ಕರ್ನಾಟಕದಲ್ಲಿನ ಮರಾಠಿಗರಿಗೆ ಮಹಾರಾಷ್ಟ್ರ ನೆರವು ಪ್ರಕಟ

ಅರ್ಚಕರು, ಮುಜಾವರ್‌ಗೆ ಗನ್‌ಮ್ಯಾನ್‌ ಭದ್ರತೆ: ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಹೋಮ, ಪೂಜೆ ನಡೆಸಿರುವುದಕ್ಕೆ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ದರಿಂದ ಶ್ರೀ ಬಾಬಾಬುಡನ್‌ ದತ್ತಾತ್ರೇಯಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯ ಕೆಲ ಸದಸ್ಯರು, ಅರ್ಚಕರು ಹಾಗೂ ಮುಜಾವರ್‌ ಭದ್ರತೆಗೆ ಗನ್‌ಮ್ಯಾನ್‌ ಸೌಲಭ್ಯ ನೀಡಲಾಗಿದೆ. ವ್ಯವಸ್ಥಾಪನಾ ಸಮಿತಿಯಲ್ಲಿರುವ 8 ಮಂದಿಗಳ ಪೈಕಿ ಸದಸ್ಯ ಬಾಷಾ ಅವರಿಗೆ ಓರ್ವ ಗನ್‌ಮ್ಯಾನ್‌ ನೀಡಿರುವ ಜತೆಗೆ ಅವರ ಮನೆಯ ಬಳಿ ಡಿಎಆರ್‌ ತುಕಡಿ ನಿಯೋಜಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ಇನ್ನೊಬ್ಬ ಸದಸ್ಯರಾದ ಅತ್ತಿಗುಂಡಿಯ ಸತೀಶ್‌, ಅರ್ಚಕರಾದ ಸಂದೀಪ್‌, ಶ್ರೀಧರ್‌, ಮುಜಾವರ್‌ಗಳಾದ ಮಹಮದ್‌ ಇಸ್ಮಾಯಿಲ್‌ ಅವರಿಗೂ ಸಹ ಗನ್‌ ಮ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ

ತ್ರಿಕಾಲ ಪೂಜೆ: ವ್ಯವಸ್ಥಾಪನಾ ಸಮಿತಿ ದತ್ತ ಜಯಂತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಇಬ್ಬರು ಅರ್ಚಕರನ್ನು ನೇಮಕ ಮಾಡಿತ್ತು. ಮೂರು ದಿನಗಳ ದತ್ತಜಯಂತಿಗೆ ಡಿ.8ರಂದು ತೆರೆಬಿದ್ದಿದೆ. ಆದರೆ, ದತ್ತ ಜಯಂತಿಯ ನಂತರವೂ ಕೂಡ ಅಂದರೆ, ಶುಕ್ರವಾರದಿಂದ ದತ್ತಪೀಠದಲ್ಲಿ ತಾತ್ಕಾಲಿಕ ಅರ್ಚಕರಿಂದ ತ್ರಿಕಾಲ ಪೂಜೆ ನಡೆಯುತ್ತಿದೆ. ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ಅವರಿಂದ ತ್ರಿಕಾಲ ಪೂಜೆ ನಡೆಸಬೇಕೆಂಬ ಸಂಘ ಪರಿವಾರದ ಪ್ರಮುಖ ಬೇಡಿಕೆಗಳು ಈಡೇರಿವೆ. ಈ ಬೆಳವಣಿಗೆಗಳಿಂದ ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆ ಮುಂಜಾಗ್ರತೆ ವಹಿಸಲಾಗಿದೆ.

click me!