ವಾಹನ ಸವಾರರೇ HSRP ಇನ್ನೂ ಅಳವಡಿಸಿಲ್ವ? ನಾಡಿದ್ದು ಕೊನೆ ದಿನ ಇಂದೇ ಅಳವಡಿಸಿ ಇಲ್ಲಿದೆ ಲಿಂಕ್

Published : Sep 13, 2024, 08:23 AM IST
ವಾಹನ ಸವಾರರೇ HSRP ಇನ್ನೂ ಅಳವಡಿಸಿಲ್ವ? ನಾಡಿದ್ದು ಕೊನೆ ದಿನ ಇಂದೇ ಅಳವಡಿಸಿ ಇಲ್ಲಿದೆ ಲಿಂಕ್

ಸಾರಾಂಶ

ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್(HSRP) ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಕ್ತಾಯಗೊಳ್ಳಲಿದ್ದು,  ಸೆ.16 ರಿಂದ ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಹೆಚ್‌ಎಸ್‌ಆರ್‌ಪಿ ಅಳವಡಿಸದಿದ್ರೆ ಏನಾಗುತ್ತೆ ಗೊತ್ತ?

ಬೆಂಗಳೂರು (ಸೆ.13): ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್(HSRP) ಅಳವಡಿಕೆಗೆ ರಾಜ್ಯ ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಕ್ತಾಯಗೊಳ್ಳಲಿದ್ದು,  ಸೆ.16 ರಿಂದ ಹೆಚ್‌ಎಸ್‌ಆರ್‌ಪಿ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಎರಡು ಬಾರಿ ಮಾತ್ರ ದಂಡ ವಿಧಿಸಿ ಮೂರನೇ ಬಾರಿಗೆ ವಾಹನ ಜಪ್ತಿ ಮಾಡುವ ಕುರಿತು ಇಲಾಖೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

2 ಸಲ ದಂಡ, 3 ನೇ ಸಲ ವಾಹನ ಜಪ್ತಿ?

ಸೋಮವಾರದಿಂದ ಫೀಲ್ಡ್ ಗೆ ಇಳಿಯಲಿರುವ ಸಾರಿಗೆ ಅಧಿಕಾರಿಗಳು. ಸೆಪ್ಟೆಂಬರ್ 16 ರಿಂಡ್ಸ್ HSRP ಇಲ್ಲದಿದ್ರೆ ದಂಡ ಫಿಕ್ಸ್ ಆಗುತ್ತೆ. ಇದುವರೆಗೂ 4 ಬಾರಿ ಗಡುವು ವಿಸ್ತರಿಸಿದರು ವಾಹನ ಸವಾರರ ನಿರಾಸಕ್ತಿ. ಹೆಚ್ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನ ಸವಾರರು. ನಾಲ್ಕನೇ ಬಾರಿ ಗಡುವು ವಿಸ್ತರಿಸುವ ಸಾಧ್ಯತೆ ಕಡಿಮೆ. ರಾಜ್ಯದಲ್ಲಿ ಒಟ್ಟು 2 ಕೋಟಿ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ ಅಳವಡಿಸಬೇಕಿತ್ತು. ಆದರೆ ಕೇವಲ 52 ಲಕ್ಷ ವಾಹನಗಳಿಗೆ ಮಾತ್ರ ಅಳವಡಿಸಲಾಗಿದೆ. ಇನ್ನೂ 1.48 ಕೋಟಿ ವಾಹನಗಳಿಗೆ ಹೆಚ್‌ಎಸ್ಆರ್‌ಪಿ ಅಳವಡಿಕೆ ಬಾಕಿಯಿದೆ. ]

ವಾಹನ ಸವಾರರೇ ಗಮನಿಸಿ: HSRP ಇಲ್ಲದಿದ್ದರೆ 5 ದಿನಗಳ ನಂತರ 500 ರೂ. ದಂಡ

ಮೊದಲ ಬಾರಿಗೆ 500 ದಂಡ, ಎರಡನೇ ಬಾರಿ 1000 ರೂ ದಂಡ. ಮೂರನೇ ಬಾರಿ ಸಿಕ್ಕಾಕಿಕೊಂಡರೆ ಅಂತಹ ವಾಹನ ಜಪ್ತಿ ಮಾಡಲು ಚಿಂತನೆ ನಡೆಸಿರುವ ಅಧಿಕಾರಿಗಳು. ಶೀಘ್ರದಲ್ಲೇ ಆದೇಶ ಹೊರಡಿಸಲಿರುವ ಸಾರಿಗೆ ಅಧಿಕಾರಿಗಳು 

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. HSRP ನಂಬರ್ ಪ್ಲೇಟ್ ಬುಕಿಂಗ್‌ನಲ್ಲಿ ನಗದು ವ್ಯವಹಾರವಿಲ್ಲ. ಆನ್‌ಲೈನ್ ಮೂಲಕವೇ ಬುಕಿಂಗ್, ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು ಅನುಸರಿಸಬೇಕಾದ ವಿಧಾನ ಇಲ್ಲಿದೆ

ಇಲ್ಲಿದೆ ನೋಡಿ ಹಂತ ಹಂತದ ಮಾಹಿತಿ:
https://transport.karnataka.gov.in ಅಥವಾ www.siam.in ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು.
Book HSRP ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ
ನಿಮ್ಮ ಹತ್ತಿರದ ಅಥವಾ ನಿಮ್ಮ  ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ
HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
ಮೊಬೈಲ್ ನಂಬರ್‌ಗೆ ಬರವು ಒಟಿಪಿಯನ್ನು ನಮೂದಿಸಿ
HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!
ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!