ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ: ಸಚಿವ ದಿನೇಶ್‌ ಗುಂಡೂರಾವ್

By Kannadaprabha News  |  First Published Mar 7, 2024, 12:19 PM IST

ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು. 


ಕೆಜಿಎಫ್ (ಮಾ.07): ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದೆಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು. ಕೆಜಿಎಫ್‌ನ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ, ೫೦ ಲಕ್ಷ ರು.ಗಳ ವೆಚ್ಚದಲ್ಲಿ ಎರಡು ಅತ್ಯಾಧುನಿಕ ಆ್ಯಂಬುಲೆನ್ಸ್, ಬೆಮಲ್ ಸಿಎಸ್‌ಆರ್ ಯೋಜನೆಯಡಿ ನೀಡಿರುವ ಒಂದು ಸಾವಿರ ಲೀಟರ್ ಆಕ್ಸಿಜನ್ ಪ್ಲಾಂಟ್, ಉಚಿತ ಬ್ಲಾಕ್, ಪಬ್ಲಿಕ್ ಹೆಲ್ತ್ ಲ್ಯಾಬ್, ಅತ್ಯಾಧುನಿಕ ಇಸಿಜಿ ಯಂತ್ರದ ಉದ್ಘಾಟಿಸಿ ಮಾತನಾಡಿದರು.

ಹೃದಯ ಜ್ಯೋತಿ ಯೋಜನೆ: ಪುನೀತ್ ರಾಜ್‌ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದರು, ಹೃದಯ ಸಂಬಂಧಿ ಯಾವ ಮಟ್ಟದಲ್ಲಿ ಇತ್ತು ಎಂಬುದು ತಿಳಿಯದೆ ಪುನಿತ್ ರಾಜ್‌ಕುಮಾರ್ ಮೃತಪಟ್ಟಿದ್ದರು. ಈ ಹಿನ್ನಲೆಯುಲ್ಲಿ ಮುಖ್ಯಮಂತ್ರಿ ಪ್ರತಿ ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ಪುನಿತ್ ರಾಜ್‌ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಪ್ರಾರಂಭಿಸಲಿದ್ದು, ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ ಎಂದರು.

Tap to resize

Latest Videos

ರಾಜ್ಯದಲ್ಲಿ ಶೇ.40 ಸಿಬ್ಬಂದಿ ಕೊರತೆ: ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಶೇ.೪೦ರಷ್ಟು ಸಿಬ್ಬಂದಿ ಕೊರತೆಯಿದ್ದು, ಎಲ್ಲ ಸಿಬ್ಬಂದಿಗಳ ನೇಮಕ್ಕೆ ಸರ್ಕಾರ ಮುಂದಾಗಿದೆ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರತೆ ಇರುವ ವೈದ್ಯರು, ನರ್ಸ್, ಡಿ ಗ್ರೂಪ್ ನೌಕರರು ಹಾಗೂ ಇತರೆ ಲ್ಯಾಬ್ ಸಿಬಂದಿಯನ್ನು ತ್ವರಿತವಾಗಿ ತುಂಬಲಾಗುವುದೆಂದು ಸಚಿವರು ಭರವಸೆ ನೀಡಿದರು.

ರಾಜ್ಯದಲ್ಲಿ ಎನ್‌ಇಪಿ ಜಾರಿ ಮಾಡುವುದಿಲ್ಲ: ಸಚಿವ ಮಧು ಬಂಗಾರಪ್ಪ

ವೈದ್ಯರ ನೇಮಕಕ್ಕೆ ಶಾಸಕಿ ಮನವಿ: ಶಾಸಕ ರೂಪರಲಾ ಶಶಿಧರ್‌ ಮಾತನಾಡಿ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿ ದಿನ ಒಂದು ಸಾವಿರ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿನ ಗಣಿ ಕಾರ್ಮಿಕರು ಸಿಲಿಕಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ಅಗತ್ಯವಿರುವ ವೈದ್ಯರು, ನರ್ಸ್‌ಗಳು, ಆಸ್ಪತ್ರೆಗೆ ಅಗತ್ಯವಿರುವ ಹೃದಯ ಸಂಬಂಧಿ ಕಾಯಿಲೆ ಲ್ಯಾಬ್‌ಗಳು ನೀಡಬೇಕು, ಕೆಜಿಎಫ್ ಆಸ್ಪತ್ರೆಯನ್ನು ವಿಶೇಷವಾಗಿ ಪರಿಗಣಿಸಿ ಬಡರೋಗಿಗಳ ನೆರವಿಗೆ ಧಾವಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಜಿಎಫ್ ವೈದ್ಯಾಧಿಕಾರಿ ಸುರೇಶ್‌ಕುಮಾರ್, ಡಿಎಚ್‌ಓ ಡಾ.ಜಗದೀಶ್ ಇದ್ದರು.

click me!