
ಬೆಂಗಳೂರು (ಸೆ.09): ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಎಸ್ಎಸ್ ಪಿಏನ್) ನಿಲ್ದಾ ಣಗಳ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22831/22832) ರೈಲುಗಳ ಸೇವೆಯನ್ನು ಯಶವಂತಪುರದವರೆಗೆ ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದದನೆ ನೀಡಿದೆ. ಈ ರೈಲುಗಳು ಈಗ (ಸಂಖ್ಯೆ 22831/22832) ಹೌರಾ-ಯಶವಂತಪುರ ನಿಲ್ದಾಣಗಳ ನಡುವೆ ಈಗಿರುವ ಬೋಗಿಗಳ ಸಂಯೋಜನೆ, ಆವರ್ತನ ಮತ್ತು ಸೇವೆಯ ದಿನಗಳೊಂದಿಗೆ ಕಾರ್ಯ ನಿರ್ವಹಿಸಲಿದೆ. ವಿವರಗಳು ಈ ಕೆಳಗಿನಂತಿವೆ.
1. ಹೌರಾ-ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ ನಿಲ್ದಾಣಗಳ ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರೈಲು ಸಂಖ್ಯೆ 22831, ಈಗ ಹೌರಾ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 25, 2024 ರಿಂದ ಜಾರಿಗೆ ಬರುವಂತೆ ಕಾರ್ಯ ನಿರ್ವಹಿಸಲಿದೆ. ಈ ರೈಲು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ (ಎಸ್ಎಸ್ ಪಿಏನ್) ನಲ್ಲಿ ಕೊನೆಗೊಳ್ಳುವ ಬದಲು ಯಶವಂತಪುರದವರೆಗೆ ತನ್ನ ಪ್ರಯಾಣವನ್ನು ವಿಸ್ತರಿಸಿದೆ.
2. ಈ ಹಿಂದೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದಿಂದ ಹೌರಾಗೆ ಚಲಿಸುತ್ತಿದ್ದ ರೈಲು ಸಂಖ್ಯೆ 22832, ಈಗ ಯಶವಂತಪುರದಿಂದ ಹೌರಾಕ್ಕೆ ಸೆಪ್ಟೆಂಬರ್ 27, 2024 ರಿಂದ ಪ್ರಾರಂಭವಾಗಲಿದೆ.
ನಾಗಸಮುದ್ರಂ ನಿಲ್ದಾಣದಲ್ಲಿ ರೆೈಲುಗಳ ನಿಲುಗಡೆ ರದ್ದು: ಅಗತ್ಯ ಮೂಲಸೌಕರ್ಯ ಕಾಮಗಾರಿಯ ಸಲುವಾಗಿ ನಾಗಸಮುದ್ರಂ ನಿಲ್ದಾಣದಲ್ಲಿ ರೈಲು ಸಂಖ್ಯೆ 07693/07694 ಗುಂತಕಲ್-ಹಿಂದೂಪುರ-ಗುಂತಕಲ್ ಡೆಮು ವಿಶೇಷ ರೈಲುಗಳ ನಿಲುಗಡೆಯನ್ನು ನವೆಂಬರ್ 5, 2024 ರವರೆಗೆ ತೆಗೆದುಹಾಕಲಾಗುತ್ತದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ