ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಸಾಮಾಜಿಕ- ಆರ್ಥಿಕ- ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಗಣತಿ) ಅಂಕಿ-ಅಂಶಗಳು ಇದೀಗ ಬಹಿರಂಗವಾಗಿವೆ. ರಾಜ್ಯದಲ್ಲಿ ಯಾವ ಜಾತಿಯ ಎಷ್ಟು ಜನರು ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು (ಏ.14): ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ಸಾಮಾಜಿಕ- ಆರ್ಥಿಕ- ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಗಣತಿ) ಅಂಕಿ-ಅಂಶಗಳು ಇದೀಗ ಬಹಿರಂಗವಾಗಿವೆ. ರಾಜ್ಯದಲ್ಲಿ ಯಾವ ಜಾತಿಯ ಎಷ್ಟು ಜನರು ಇದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ.
ಎಸ್ಸಿ 1,09,29,347
ಮುಸ್ಲಿಮರು: 75,25,880
ಲಿಂಗಾಯತ ಉಪಗುಂಪು- 66,35,233
ವೀರಶೈವ ಲಿಂಗಾಯತ - 10,49,706
ಒಕ್ಕಲಿಗ ಮತ್ತು ಉಪಜಾತಿ: 61,58,352
ಕುರುಬ, ಉಪಜಾತಿ 43,72,847
ಎಸ್‌ಟಿ 42,81,289
ಕ್ರಿಶ್ಚಿಯನ್ ಮತ್ತು ಉಪಜಾತಿ: 9,47,994
ಉಪ್ಪಾರ 7,58,605
ಗಾಣಿಗ: 6,86,428
ಬೌದ್ಧರು: 6,86,428
ವಿಶ್ವಕರ್ಮ- 6,86,428
ಬಿಲ್ಲವ- 4,85,628
ಗೊಲ್ಲ 4,42,524
ಬೆಸ್ತ 3,99,383
ಕಬ್ಬಲಿಗ 3,88,082
ಈಡಿಗ 3,50,603
ಕಾಡುಗೊಲ್ಲ 3,10,393
ಬಂಟ್: 3,19,113
ಜೈನ ದಿಗಂಬರರು: 1,62,566
ಸವಿತಾ 33,355
ಭಜಂತ್ರಿ 1,01,728
ಭಂಡಾರಿ 41,775
ಹಡಪದ 94,574
ಭೋವಿ- 64,140
ಯಾದವ- 67,754
ದೇವಾಡಿಗ 1,04,571
ಪೂಜಾರಿ - 1,15,081
ನಾಮಧಾರಿ- 2,16,619
ದೈವಜ್ಞ ಬ್ರಾಹ್ಮಣ: 80,155
ಬಲಿಜ- 2,03,347
ಬಲಜಿಗ- 1,37,828
ಬಣಜಿಗ- 2,96,411
ನಾಯ್ಡು - 1,50,601
ಬಿಜೆಪಿ ನಾಯಕರಿಂದ ಜಾತಿ ಗಣತಿ ಪರಾಮರ್ಶೆ: ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ವಿವಾದಾತ್ಮಕ ಜಾತಿ ಜನಗಣತಿ ವರದಿ ಸಂಬಂಧಿಸಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಸೋಮವಾರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
ಜಾತಿ ಗಣತಿ ಲೆಕ್ಕಕ್ಕೆ ಲಿಂಗಾಯತರು, ಒಕ್ಕಲಿಗರು ಕಿಡಿ
ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ಕೇವಲ ವರದಿಯಲ್ಲಿ ಬಹಿರಂಗಗೊಂಡ ಅಂಶಗಳ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜಾತಿ ಗಣತಿಯಲ್ಲಿ ಮುಸ್ಲಿಮರ ಸಂಖ್ಯೆಯನ್ನು 75 ಲಕ್ಷ, ಲಿಂಗಾಯತರ ಸಂಖ್ಯೆಯನ್ನು 66 ಲಕ್ಷ, ವೀರಶೈವರ ಸಂಖ್ಯೆಯನ್ನು 10 ಲಕ್ಷ, ಒಕ್ಕಲಿಗರ ಸಂಖ್ಯೆಯನ್ನು 61 ಲಕ್ಷ, ಪರಿಶಿಷ್ಟ ಜಾತಿಯನ್ನು 1 ಕೋಟಿ, ಪರಿಶಿಷ್ಟ ಪಂಗಡವನ್ನು 42 ಲಕ್ಷ, ಕುರುಬರನ್ನು 44 ಲಕ್ಷ ಎಂದೆಲ್ಲ ಮೂದಿಸಲಾಗಿದೆ. ಆದರೆ ಮುಸ್ಲಿಂ ಒಂದು ಧರ್ಮ ಆಗಿದ್ದರೂ ಅದನ್ನು ಹಿಂದೂ ಧರ್ಮದ ರೀತಿ ಬೇರೆ ಜಾತಿಯನ್ನಾಗಿ ಏಕೆ ವಿಭಜಿಸಿಲ್ಲ ಎಂಬುದು ಬಿಜೆಪಿ ಪ್ರಶ್ನೆಯಾಗಿದೆ. ಅಲ್ಲದೆ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಇದನ್ನು ಭಾನುವಾರವೇ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.