Vijayanagar hospet crime ಜಿಲ್ಲೆಯ ಹೊಸಪೇಟೆಯಲ್ಲಿ ನಗರಸಭೆ ನೌಕರ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಕಿರುಕುಳ ಮತ್ತು ಕೆಲಸದ ಒತ್ತಡದಿಂದಾಗಿ ಖಾಸಗಿ ಹೋಂ ಸ್ಟೇನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಮಂಜುನಾಥ್ ಆತ್ಮಹತ್ಯೆಗೆ ಯತ್ನಿಸಿದ್ದರು.
ವಿಜಯನಗರ (ಜ.9): ರಾಜ್ಯದಲ್ಲಿ ಗುತ್ತಿಗೆದಾರರು, ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಸರಣಿ ಮುಂದುವರಿದಿದ್ದು, ಇದೀಗ ಮೇಲಾಧಿಕಾರಿಗಳ ಕಿರುಕುಳ ಆರೋಪದಲ್ಲಿ ಮತ್ತೊಬ್ಬ ಸರ್ಕಾರಿ ಅಧಿಕಾರಿ ನೇಣಿಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಕಡ್ಡಿರಾಂಪುರದಲ್ಲಿ ನಡೆದಿದೆ.
ಮಂಜುನಾಥ, ಆತ್ಮಹತ್ಯೆಗೆ ಶರಣಾಗಿರುವ ನಗರಸಭೆ ನೌಕರ. ಹೊಸಪೇಟೆ ನಗರ ಸಭೆ ನೌಕರನಾಗಿದ್ದ ಮೃತ ವ್ಯಕ್ತಿ. ನಗರಸಭೆ ಮೇಲಾಧಿಕಾರಿಗಳು ಮೃತ ಮಂಜುನಾಥ್‌ಗೆ ಕಿರುಕುಳ, ಕೆಲಸದ ಒತ್ತಡ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಕೇಳಿ ಬಂದಿದೆ. ಇದೇ ಕಾರಣಕ್ಕೆ ಖಾಸಗಿ ಹೋಂ ಸ್ಟೇನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸ್ರು ಬರೀ ನನ್ನ ತಮ್ಮನ ಬಗ್ಗೆ ತನಿಖೆ ಮಾಡ್ತಿದ್ದಾರೆ, ಸಿಐಡಿ ತನಿಖೆ ಬಗ್ಗೆ ಮೃತ ಸಚಿನ್ ಸಹೋದರಿ ಅಸಮಾಧಾನ
ಈ ಹಿಂದೆಯೂ ಮೃತ ಮಂಜುನಾಥ ಆತ್ಮಹತ್ಯೆಗೆ ಯತ್ನಿಸಿದ್ದ. ನಗರಸಭೆ ಪೌರಾಯುಕ್ತ ಮತ್ತು ಇತರರ ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್. ಅಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಗೆ ಚಿಕಿತ್ಸೆ ಕೊಡಿಸಿ, ಸಮಾಧಾನ ಪಡಿಸಿದ್ದ ನಗರಸಭೆ ಸಿಬ್ಬಂದಿ. ಎಲ್ಲವೂ ಸರಿಹೋಗಿದೆ ಅನ್ನುವಷ್ಟರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸದ್ಯ ಘಟನೆ ಸ್ಥಳಕ್ಕೆ ಹಂಪಿ ಪೊಲೀಸರು ಭೇಟಿ ನೀಡಿ ಸ್ಹಳ ಪರಿಶೀಲನೆ ನಡೆಸಿದ್ದಾರೆ.