ನಕ್ಸಲರು ಸದ್ಯ ಶರಣಾಗಿದ್ದು, ಇನ್ನು ಮುಂದೆ ಕಾನೂನು ಪ್ರಕ್ರಿಯೆ ಆರಂಭವಾಗಲಿದೆ. ಪೊಲೀಸರು ನಕ್ಸಲರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ನಕ್ಸಲರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಂತೆ ಮಾಡುವ ಅವಕಾಶ ಸರ್ಕಾರದ ಮುಂದಿದೆ.
ಬೆಂಗಳೂರು(ಜ.09): ಕಳೆದೊಂದು ತಿಂಗಳಿನಿಂದ ನಕ್ಸಲೀಯರ ಶರಣಾಗತಿ ಕುರಿತು ಚರ್ಚೆಗಳು ನಡೆಸಲಾ ಗುತ್ತಿತ್ತು. ಅದರಂತೆ ಒಂದು ವಾರದ ಹಿಂದೆ ನಕ್ಸಲರು ಶರಣಾಗತಿಗೆ ಒಪ್ಪಿಗೆ ಸೂಚಿಸಿದ್ದು, ಅದನ್ನು ನಕ್ಸಲರ ಮನವೊಲಿಕೆ ಹೊಣೆ ಹೊತ್ತಿದ್ದ ಸಂಘಟನೆಯ ಸದಸ್ಯರು ಮತ್ತು ಪೊಲೀಸರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು. ಅದರಂತೆ ಚಿಕಮಗಳೂರು ಜಿಲ್ಲಾಧಿಕಾರಿಗಳ ಎದುರು ನಕಲರು ಬುಧವಾರ ಶರಣಾಗುವುದಾಗಿ ನಿಗದಿಯಾಗಿತ್ತು, ಆದರೆ, ನಕಲರ ಶರಣಾಗತಿ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜನಸಂದಣಿ ಹೆಚ್ಚಾಗಿತ್ತು. ಅಲ್ಲದೆ, ನಕ್ಸಲರನ್ನು ತಾವು ಭೇಟಿಯಾಗುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಕಾರಣಕ್ಕಾಗಿ 6 ಮಂದಿಯನ್ನೂ ಬೆಂಗಳೂರಿಗೆ ಕರೆತರ ಲಾಯಿತು.
ಸಿಎಂಗೆ ಸಮವಸ್ತ್ರ ಅರ್ಪಿಸಿದ ನಕ್ಸಲರು:
ಶರಣಾಗತಿಗೆ ಅವಕಾಶ ನೀಡಿದಕ್ಕೆ ಧನ್ನವಾದ ಅರ್ಪಿಸಿದ ನಕಲೀಯರು, 'ಮುಖ್ಯವಾಹಿನಿಗೆ ಬರುವಂತೆ ನಮಗೆ ಆಹ್ವಾನ ನೀಡಿದ್ದಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳಾದ ತಮ್ಮನ್ನು ಗೌರವಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂಬ ತಮ್ಮ ಕೈ ಬರಹದಲ್ಲಿದ್ದ ಪತ್ರವನ್ನು ಸಿಎಂಗೆ ಸಲ್ಲಿಸಿದರು.
ನಕ್ಸಲ್ ಶರಣಾಗತಿ ಪ್ಯಾಕೇಜ್ ಸಮಾಜವನ್ನು ಬೆಚ್ಚಿಬೀಳಿಸಿದೆ: ಸುನೀಲ್ ಕುಮಾರ್
ಮುಖ್ಯಮಂತ್ರಿಗಳು ಎಲ್ಲ ಆರು ನಕ್ಸಲರಿಗೂ ಸಂವಿಧಾನದ ಪುಸ್ತಕ ಹಾಗೂ ಗುಲಾಬಿ ನೀಡಿ ಶರಣಾಗತಿ ಒಪ್ಪಿಕೊಂಡರು. ಸರ್ಕಾರದ ಮುಂದೆ ಶರಣಾದ ಮುಂಡಗಾರು ಲತಾ ವಿರುದ್ಧ 85 ಪ್ರಕರಣ, ಸುಂದರಿ ಕುತ್ತೂರು ವಿರುದ್ದ 71, ಮಾರಪ್ಪ ವಿರುದ್ಧ 50, ವನಜಾಕ್ಷಿ ವಿರುದ್ಧ 29, ಟಿ.ಎನ್. ಜಿಶಾ ವಿರುದ್ಧ 17, ವಸಂತ ವಿರುದ್ಧ 8 ಪ್ರಕರಣಗಳು ದಾಖಲಾಗಿವೆ.
ನಕ್ಸಲ್ ಮುಕ್ತ ಕರ್ನಾಟಕ ನಮ್ಮ ಗುರಿ
ನಕ್ಸಲ್ ಹೋರಾಟ ಬಿಟ್ಟು ಸಂವಿಧಾನ ಬದ್ಧ ವಾಗಿ ಹೋರಾಟ ನಡೆಸುವಂತೆ ಕರೆ ನೀಡಿದ್ದ ಕ್ಕಾಗಿ 6 ಮಂದಿ ಶರಣಾಗಿದ್ದಾರೆ. ಅವರಿಗೆ ನಿಯಮದಂತೆ ಯಾವೆಲ್ಲ ಸೌಲಭ್ಯ ನೀಡ ಬೇಕು ಅದನ್ನು ನೀಡಲು ಸರ್ಕಾರ ಬದ್ಧವಾ ಗಿದೆ. ರಾಜ್ಯವನ್ನು ನಕ್ಸಲ್ ಚಟುವಟಿಕೆಯಿಂದ ಮುಕ್ತವಾಗಿಸುವುದು ನಮ್ಮ ಗುರಿಯಾಗಿದೆ. ಅದರಲ್ಲಿ ಬಹುತೇಕ ಯಶಸ್ಸು ಕಂಡಿದ್ದೇವೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶರಣಾದವರ ವಿರುದ್ಧ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲೂ ಪ್ರಕರಣ ದಾಖಲಾಗಿದ್ದು, ಅದರ ಕುರಿತು ಆಯಾ ರಾಜ್ಯಗಳ ಸಿಎಂ ಮಾತುಕತೆ ನಡೆಸುತ್ತೇನೆ ಎಂದರು.
ಇವರೇ ಶಸ್ತ್ರ ಕೆಳಗಿಳಿಸಿ ಶರಣಾದ 6 ಮಂದಿ ನಕ್ಸಲೀಯರು!
ಶರಣಾಗತಿ ನಂತರ ಮುಂದೇನು?
ನಕ್ಸಲರು ಸದ್ಯ ಶರಣಾಗಿದ್ದು, ಇನ್ನು ಮುಂದೆ ಕಾನೂನು ಪ್ರಕ್ರಿಯೆ ಆರಂಭವಾಗಲಿದೆ. ಪೊಲೀಸರು ನಕ್ಸಲರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ನಕ್ಸಲರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಒಟ್ಟುಗೂಡಿಸಿ ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಂತೆ ಮಾಡುವ ಅವಕಾಶ ಸರ್ಕಾರದ ಮುಂದಿದೆ. ಅಲ್ಲದೆ, ಪ್ರಕರಣಗಳ ತೀವ್ರತೆಯನ್ನು ಕಡಿಮೆ ಮಾಡಲಾಗುತ್ತದೆಯೇ ಹೊರತು ಪ್ರಕರಣಗಳನ್ನು ಸರ್ಕಾರ ರದ್ದು ಮಾಡುವುದಿಲ್ಲ, ಆ ಮೂಲಕ ನಕ್ಸಲೀಯರಿಗೆ ಒಂದು ವೇಳೆ ಶಿಕ್ಷೆ ಪ್ರಕಟಿಸಿದರೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುವಂತೆ ಸರ್ಕಾರ ನೋಡಿಕೊಳ್ಳಲಿದೆ. ಈವರೆಗೆ ಯಾವುದೇ ನಕಲರ ವಿರುದ್ಧ ದಾಖಲಾದ ಪ್ರಕರಣಗಳು ರದ್ದು ಮಾಡಲಾಗಿಲ್ಲ. ಈ 6 ಮಂದಿಯ ವಿಚಾರದಲ್ಲೂ ಅದೇ ನಡೆಯಲಿದೆ.
20 ವರ್ಷ ಬಳಿಕ ಕುಟುಂಬದವರ ಭೇಟಿ, ಬಂಧನ
ಮುಖ್ಯಮಂತ್ರಿಗಳ ಎದುರು ಶರಣಾಗತಿಯ ಪ್ರಸ್ತಾವನೆ ಸಲ್ಲಿಸಿದ ನಕ್ಸಲರನ್ನು ನಂತರ ಆಡುಗೋಡಿಯ ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಲಾಯಿತು. ಚಿಕ್ಕಮಗಳೂರಿನಲ್ಲಿ ನಕ್ಸಲರು ತಮ್ಮ ಕುಟುಂಬದವರನ್ನು ಭೇಟಿಯಾಗಲು ಅವಕಾಶ ನೀಡದ ಕಾರಣ, ಬೆಂಗಳೂರಿಗೆ ನಕ್ಸಲರ ಕುಟುಂಬದವರನ್ನು ಕರೆತರಲಾಗಿತ್ತು. ಆಡುಗೋಡಿಯಲ್ಲಿ ಕುಟುಂಬದವರನ್ನು ಭೇಟಿ ಮಾಡಿಸಿ ನಂತರ 6 ಮಂದಿ ನಕ್ಸಲರನ್ನು ಪೊಲೀಸರು ಬಂಧಿಸಿದರು.