ಹನಿಟ್ರ್ಯಾಪ್ ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ; ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಬಂದಿದ್ದರು!

ಸಹಕಾರ ಸಚಿವ ಕೆ.ಎನ್. ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದ ಬಗ್ಗೆ ಗೃಹ ಸಚಿವರಿಗೆ ದೂರು ನೀಡಲಿದ್ದಾರೆ. ಒಬ್ಬನೇ ವ್ಯಕ್ತಿ ಎರಡು ಬಾರಿ ಬೇರೆ ಬೇರೆ ಹುಡುಗಿಯರೊಂದಿಗೆ ಬಂದಿದ್ದನು ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ.

Honeytrap secret exposed by Cooperation Minister KN Rajanna Complaint to Home Minister sat

ತುಮಕೂರು (ಮಾ.25): ನನ್ನ ಮೇಲೆ ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಇಂದು ಗೃಹ ಸಚಿವರಿಗೆ ದೂರು ನೀಡುತ್ತೇನೆ. ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು ಒಬ್ಬನೇ ಹುಡುಗ ಎರಡು ಬಾರಿಯೂ ಬಂದಿದ್ದನು. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರಿದ್ದರು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಹನಿಟ್ರ್ಯಾಪ್ ರಸಹ್ಯವನ್ನು ಬಿಚ್ಚಿಟ್ಟಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯದ ಜನತೆ ಎದುರು ನನ್ನ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಬಗ್ಗೆ ದೂರು ಕೊಡಲಿದ್ದು, ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲಿಯೇ ಇಂದು ಮಂಗಳವಾರ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಇವತ್ತು ದೂರು ದಾಖಲಿಸುತ್ತೇನೆ. ಗೃಹ ಸಚಿವರಿಗೆ ದೂರು ಕೊಡ್ತೀನಿ. ಇಷ್ಟು ದಿನ ನನಗ ದೂರು ಬರೆಯಲಾಗಿರಲಿಲ್ಲ. ನಿರಂತರ ಕಾರ್ಯಕ್ರಮವಿದ್ದ ಕಾರಣ ದೂರು ಕೊಡಲು ಆಗಲಿಲ್ಲ. ನಾನೇ ಇವತ್ತು ಕುಳಿತು ದೂರು ರೆಡಿ ಮಾಡಿದ್ದೇನೆ ಎಂದು ಹೇಳಿದರು.

Latest Videos

ಗೃಹ ಸಚಿವ ಪರಮೇಶ್ವರ್ ಅವರನ್ನು ಹುಡಕಿಕೊಂಡು ಹೋಗಿ ದೂರು ಕೊಡ್ತೀನಿ. ನನ್ನ ಬಳಿ ಹನಿಟ್ರ್ಯಾಪ್‌ಗೆ ಸಂಬಂಧಪಟ್ಟಂತೆ ಏನು ದಾಖಲೆಯಿಲ್ಲ, ದೂರು ಕೊಡ್ತಿದ್ದೀನಿ. ಒಟ್ಟು ಮೂರು ಪುಟಗಳ ದೂರು ಬರೆದು ಕೊಡುತ್ತಿದ್ದೇನೆ. ಇನ್ನು ನನ್ನ ಬೆಂಗಳೂರು ಮನಯಲ್ಲಿ ಸಿಸಿಟಿವಿ ಇರಲಿಲ್ಲ. ಹಾಗಾಗಿ ಸಿಸಿಟಿವಿ ವಿಡಿಯೋ ನಮ್ಮ ಬಳಿ ಇಲ್ಲ. ಯಾರು ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ಮಾಹಿತಿ ಬಿಚ್ಚಿಟ್ಟರು.

ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ, ಅಗತ್ಯ ಬಿದ್ದರೆ ಸಿಎಂ ಭೇಟಿ: ಸಚಿವ ಕೆ.ಎನ್.ರಾಜಣ್ಣ

ನನ್ನ ಮನೆಗೆ ಹನಿಟ್ರ್ಯಾಪ್ ಮಾಡುವ ವಿಚಾರವಾಗಿ ಎರಡು ಸಲ ಒಬ್ಬನೇ ಹುಡುಗ ಹುಡುಗಿಯರನ್ನು ಕರೆದುಕೊಂಡು ಬಂದಿದ್ದನು. ಆದರೆ, ಎರಡು ಬಾರಿಯೂ ಬೇರೆ ಬೇರೆ ಹುಡುಗಿಯರು ಇದ್ದರು. ಮೊದಲ ಸಲ ತಾನು ಹೈಕೋರ್ಟ್ ಲಾಯರ್ ಎಂದು ಬಂದು ಪರಿಚಯ ಮಾಡಿಕೊಂಡರು. ಎರಡನೇ ಬಾರಿ ಲಾಯರ್ ಅಂತ ಪರಿಚಯ ಮಾಡಿಕೊಂಡಿದ್ದರು. ನನಗೆ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ ಎಂದು ಹನಿಟ್ರ್ಯಾಪ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್ ಒಪ್ಪಿಕೊಂಡ ಕೆ.ಎನ್. ರಾಜಣ್ಣ : 48 ರಾಜಕಾರಣಿಗಳ ಪೆನ್‌ಡ್ರೈವ್ ಬಹಿರಂಗ? ತನಿಖೆಗೆ ಆದೇಶ

vuukle one pixel image
click me!