ತೆಲುಗು ಯುವ ಸಾಮ್ರಾಟ್, ನಟ ನಾಗಾಚೈತನ್ಯ, ನಟಿ ಕೃತಿ ಶೆಟ್ಟಿಅಭಿಯನದ ಸಿನಿಮಾವೊಂದರ ಚಿತ್ರೀಕರಣ ವೇಳೆ ಶನಿವಾರ ಜೇನುಹುಳು ಕಲಾವಿದರಿಗೆ ಕಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸರಗೂರು (ಅ.15): ತೆಲುಗು ಯುವ ಸಾಮ್ರಾಟ್, ನಟ ನಾಗಾಚೈತನ್ಯ, ನಟಿ ಕೃತಿ ಶೆಟ್ಟಿಅಭಿಯನದ ಸಿನಿಮಾವೊಂದರ ಚಿತ್ರೀಕರಣ ವೇಳೆ ಶನಿವಾರ ಜೇನುಹುಳು ಕಲಾವಿದರಿಗೆ ಕಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತೆಲುಗು ಸಿನಿಮಾವೊಂದು ಪ್ರೊಡಕ್ಷನ್ ನಂ. 1ರಡಿ ತಾಲೂಕಿನ ನುಗು ಜಲಾಶಯ ಗೇಟ್ ಮೇಲ್ಭಾಗದಲ್ಲಿ ಚಿತ್ರೀಕರಿಸುತ್ತಿರುವಾಗ ವಾಹನಗಳ ಹೊಗೆ ಜಲಾಶಯದಲ್ಲಿ ಕಟ್ಟಿದ್ದ ಹಲವಾರು ಜೇನುಗೂಡಿಗೆ ತಾಗಿದೆ. ಇದರಿಂದ ಜೇನು ಹುಳುಗಳು ಮೇಲೆದ್ದು ಸುಮಾರು 20ಕ್ಕೂ ಹೆಚ್ಚು ಕಲಾವಿದರಿಗೆ ಕಚ್ಚಿವೆ. ಆದರೆ, ಚಿತ್ರದ ನಟ, ನಟಿಗೆ ಕಚ್ಚಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲಾವಿದರಾದ ಮಹೇಶ್, ಶ್ರೀಕಂಠ, ರಾಹುಲ್, ಗೌತಮ್, ಅಶ್ವಥ್, ಭವ್ಯ, ಅರುಣ್‌ಜೀವನ್, ರಂಜಿತ್, ರಾಶಕುಮಾರ್, ಮಹೇಶ್ ಮ್ಯಾಥ್ಯು, ಕೃಷ್ಣ, ಆನಂದ್, ಶ್ರೀಕಾಂತ್, ಜಮ್ಮಣ್ಣ, ಮಣಿಕಂಠ, ರಾಜೀವ್, ಅಭಿಲಾಷ್, ವಿಘ್ನೇಶ್, ಪರಮೇಶ್ ಸೇರಿದಂತೆ 20ಕ್ಕೂ ಹೆಚ್ಚು ಮಂದಿಗೆ ಜೇನುಹುಳು ಕಡಿದು ಸರಗೂರಿನ ವಿವೇಕಾನಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.ಜಲಾಶಯದಲ್ಲಿ ಜೇನುಹುಳುಗಳು ಗೂಡಿನಿಂದ ಹೊರಬರುತ್ತಿದ್ದಂತೆ ಗಾಬರಿಗೊಂಡ ಕಲಾವಿದರು ಚೆಲ್ಲಪಿಲ್ಲಿಯಾಗಿ ಓಡಿ ಹೋದರು. ಇನ್ನು ಕೆಲವರು ಅಲ್ಲೇ ಇದ್ದ ಪರಿಣಾಮ ಕಚ್ಚಿವೆ ಎನ್ನಲಾಗಿದೆ.
ಕದ್ದು-ಮುಚ್ಚಿ ಕಿಸ್ ಮಾಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದೆ; ಲವ್ ಸ್ಟೋರಿ ಬಿಚ್ಚಿಟ್ಟ ನಾಗ ಚೈತನ್ಯ
ಈ ಪೈಕಿ ಮಹೇಶ್ ಎಂಬುವರಿಗೆ ತುಂಬಾ ಬಲವಾಗಿ ಕಚ್ಚಿದ್ದು, ಮುಖ, ಕೈ, ದೇಹಕ್ಕೆ ಕಚ್ಚಿವೆ. ಕೂಡಲೇ ಕಲಾವಿದರು ತಮ್ಮ ವಾಹನದಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯ ದಾಖಲಾಗಿ, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ತೆಲುಗು, ಕನ್ನಡದ ಕಲಾವಿದರ ಇಬ್ಬರು ಇದ್ದಾರೆ. ಕಳೆದ ಮೂರು ದಿನಗಳಿಂದ ನುಗು ಜಲಾಶಯದಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಶನಿವಾರ ಜಲಾಶಯದ ಕ್ರೇಸ್ಟ್‌ಗೇಟ್ ಮೇಲ್ಭಾಗದಲ್ಲಿ ಚಿತ್ರೀಕರಣ ಮಾಡಬೇಕಿತ್ತು. ಅದರಂತೆ ಚಿತ್ರೀಕರಣ ಮಾಡುವಾಗ ಇಂಥ ದುರ್ಘಟನೆ ಸಂಭವಿಸಿದೆ.
ಇದರಿಂದಾಗಿ ಚಿತ್ರೀಕರಣ ಸ್ಥಳವನ್ನು ಬದಲಿಸಿಕೊಂಡ ಸಿನಿಮಾ ತಂಡ ಮತ್ತೆ ಚಿತ್ರೀಕರಣ ಆರಂಭಿಸಿದೆ. ಆದರೆ, ಕಲಾವಿದರಿಗೆ ಜೇನುಹುಳು ಕಡಿತದಿಂದ ಪಕ್ಕದಲ್ಲೇ ಇದ್ದ ತುಂಬಿದ ಜಲಾಶಯದಲ್ಲಿ ಮುಳುಗಿದ್ದರೆ ಇದಕ್ಕೆ ಹೊಣೆ ಯಾರು? ಕಲಾವಿದರು ಕೇವಲ ಸಂಭಾವನೆಗೋಸ್ಕರ ಇಂತಹ ಸಂಕಷ್ಟಕ್ಕೆ ಸಿಲುಕಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಚಿತ್ರೀಕರಣ ವೀಕ್ಷಕರ ಯಕ್ಷ ಪ್ರಶ್ನೆಯಾಗಿದೆ. ಇಂತಹ ಘಟನೆ ದುನಿಯಾ ವಿಜಯ್ ಅಭಿಯನದ ಮಾಸ್ತಿಗುಡಿ ಸಿನಿಮಾ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ಭಾರಿ ಅನಾಹುತ ಸಭವಿಸಿ, ಇಬ್ಬರು ಸಹ ಕಲಾವಿದರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದು ನೆನಪಿಸುತ್ತದೆ.
ಮೇಲುಕೋಟೆಯಲ್ಲಿ ಸಿನಿಮಾಕ್ಕೆ ಬಾರ್ ಸೆಟ್, ಆಕ್ರೋಶ: ಮೇಲುಕೋಟೆಯ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಭವ್ಯ ಸ್ಮಾರಕ ರಾಯಗೋಪುರದಲ್ಲಿ ತೆಲುಗು ಚಿತ್ರತಂಡವೊಂದು ಚಿತ್ರೀಕರಣಕ್ಕಾಗಿ ಬಾರ್ ಸೆಟ್ ನಿರ್ಮಿಸಿ ವೈಷ್ಣವ ಕ್ಷೇತ್ರಕ್ಕೆ ಅಪಮಾನ ಮಾಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ತೆಲುಗಿನ ಖ್ಯಾತ ನಟ ನಾಗಾರ್ಜುನ ಪುತ್ರ ನಾಗಚೈತನ್ಯ ಅಭಿನಯದ 3 ನಾಟ್ 2 ಚಿತ್ರತಂಡ ಜಿಲ್ಲಾಧಿಕಾರಿಗಳಿಂದ ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಎರಡು ದಿನಗಳ ಷರತ್ತುಬದ್ಧ ಅನುಮತಿ ಪಡೆದಿತ್ತು. ಆದರೆ, ಚಿತ್ರತಂಡ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಘಿಸಿ ರಾಯಗೋಪುರದಲ್ಲಿ ಮನಬಂದಂತೆ ಕಬ್ಬಿಣದ ಕಂಬಗಳನ್ನು ಹಾಕಿ ಮೊದಲು ಮದುವೆ ಸೆಟ್ ನಿರ್ಮಿಸಿದೆ.
ಸಮಂತಾ ಸಿಕ್ಕಿದ್ರೆ ಹೀಗ್ ಮಾಡ್ತಾರಂತೆ ಮಾಜಿ ಪತಿ ನಾಗಚೈತನ್ಯ
ನಂತರ ಪಕ್ಕದಲ್ಲೇ ಬಾರ್ ಮಾದರಿ ಸೆಟ್ ನಿರ್ಮಿಸಿ ವಿವಿಧ ಬ್ರಾಂಡ್‌ಗಳ ಮದದ್ಯದ ಬಾಟಲಿಗಳನ್ನು ಜೋಡಿಸಿ ರಾತ್ರಿ ವೇಳೆ ಚಿತ್ರೀಕರಣ ಮಾಡಿತ್ತು. ಭವ್ಯಸ್ಮಾರಕ ಅಪವಿತ್ರಗೊಳಿಸುವ ರೀತಿಯಲ್ಲಿ ಚಿತ್ರೀಕರಣ ಮಾಡಿರುವುದಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದರು. ಜೊತೆಗೆ ಶ್ರೀವೈಷ್ಣವ ಕ್ಷೇತ್ರದ ಪಾವಿತ್ರ್ಯತೆಗೆ ಭಂಗ ತರುವಂತೆ ಚಿತ್ರತಂಡ ನಡೆದುಕೊಂಡಿದೆ ಎಂದು ಶನಿವಾರ ರಾತ್ರಿಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಮೇಲುಕೋಟೆ ನಾಗರಿಕರ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚನೆ ನೀಡಿದ ಪರಿಣಾಮ ತೆಲುಗು ಚಿತ್ರತಂಡ ಚಿತ್ರೀಕರಣ ಸ್ಥಗಿತಗೊಳಿಸಿ ಕಾಲ್ಕಿತ್ತಿದೆ.