ಎಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಗೌರ್ನರ್ ಸಮ್ಮತಿಸದಿದ್ರೆ ಕೋರ್ಟ್‌ಗೆ: ಪರಂ

By Kannadaprabha News  |  First Published Aug 22, 2024, 6:00 AM IST

ತನಿಖಾ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುವುದಕ್ಕೂ, ವೈಯಕ್ತಿಕವಾಗಿ ಅನುಮತಿ ಕೇಳುವುದಕ್ಕೂ ವ್ಯತ್ಯಾಸ ಇದೆ. ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಕೇಳಿದ್ದು, ಅನುಮತಿ ನೀಡದಿದ್ದರೆ ಅವರೇ ಕಾನೂನು ಹೋರಾಟ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ 


ಬೆಂಗಳೂರು(ಆ.22): ಲೋಕಾಯುಕ್ತ ತನಿಖಾ ಸಂಸ್ಥೆಯು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ. ಒಂದು ವೇಳೆ ಅನುಮತಿ ಸಿಗದಿದ್ದರೆ ಆ ಸಂಸ್ಥೆಯೇ ಕಾನೂನು ಹೋರಾಟದ ಬಗ್ಗೆ ತೀರ್ಮಾನಿಸುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಕೇಳಲಾಗಿದೆ. ಈ ಹಿಂದೆ ಲೋಕಾಯುಕ್ತ ಎಸ್ಐಟಿ ಅನುಮತಿ ಕೇಳಿದರೂ ರಾಜ್ಯಪಾಲರು ಕೊಟ್ಟಿಲ್ಲ, ಇದು ತಪ್ಪಲ್ಲವೇ? ಅಸ್ತಿತ್ವದಲ್ಲಿ ಇಲ್ಲದ ಕಂಪನಿಗೆ ಎಚ್‌.ಡಿ. ಕುಮಾರಸ್ವಾಮಿ ಗಣಿಗಾರಿಕೆಗೆ ಅನುಮತಿ ಕೊಟ್ಟಿದ್ದಾರೆ. ಇದರ ತನಿಖೆ ಮಾಡಲು ಲೋಕಾಯುಕ್ತ ಪತ್ರ ಬರೆದಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಅನುಮತಿ ನೀಡುವಂತೆ 2023ರಲ್ಲಿಯೇ ಅನುಮತಿ ಕೇಳಿದ್ದೆವು. ಅನುಮತಿ ನೀಡುವಂತೆ ಎರಡನೇ ಬಾರಿ ಕೋರಿದ್ದೇವೆ ಎಂದರು.

Tap to resize

Latest Videos

ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮೊರೆ ಹೋದ ಎಸ್‌ಐಟಿ!

ತನಿಖಾ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುವುದಕ್ಕೂ, ವೈಯಕ್ತಿಕವಾಗಿ ಅನುಮತಿ ಕೇಳುವುದಕ್ಕೂ ವ್ಯತ್ಯಾಸ ಇದೆ. ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್‌ಗೆ ಕೇಳಿದ್ದು, ಅನುಮತಿ ನೀಡದಿದ್ದರೆ ಅವರೇ ಕಾನೂನು ಹೋರಾಟ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಬಿಜೆಪಿ ನಾಯಕರ ಕೇಸ್‌ಗಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಬಿಜೆಪಿ ನಾಯಕರ ಕೇಸ್ ಎಂಬುದಿಲ್ಲ. ಯಾವುದೇ ಕೇಸ್ ನಡೆದಿದ್ದರೂ ತಾರ್ಕಿಕ ಅಂತ್ಯ ಕಾಣಬೇಕು. ಸೂಕ್ತ ಕ್ರಮ ಆಗಬೇಕು. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಪ್ರಕರಣ, ಭೋವಿ ನಿಗಮದ ತನಿಖೆಯ ಬಳಿಕ ಇದೀಗ ಚಾರ್ಜ್‌ಶೀಟ್ ಹಾಕುತ್ತಿದ್ದೇವೆ. ಕೊರೋನಾ ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಒಂದೊಂದೇ ಪ್ರಕರಣಗಳ ತನಿಖೆ ನಡೆಯುತ್ತಿದೆ. ಕೇಸುಗಳಲ್ಲಿ ಬಿಜೆಪಿಯವರು ಇದ್ದರೆ ಕ್ರಮವಾಗಲಿದೆ. ಇವೆಲ್ಲ ಈ ಮೊದಲೇ ತನಿಖೆ ನಡೆಯುತ್ತಿದ್ದ ಪ್ರಕರಣಗಳು ಎಂದರು.

click me!