SDPI, PFI ನಿಷೇಧ ಪ್ರಸ್ತಾಪ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Kannadaprabha News   | Asianet News
Published : Mar 07, 2022, 10:33 AM IST
SDPI, PFI ನಿಷೇಧ ಪ್ರಸ್ತಾಪ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಾರಾಂಶ

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹಿಂದೂಪರ ಸಂಘಟನೆಗಳ ಒತ್ತಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

ಶಿರಸಿ (ಮಾ.7): ಎಸ್‌ಡಿಪಿಐ (SDPI), ಪಿಎಫ್‌ಐ (PFU) ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹಿಂದೂಪರ ಸಂಘಟನೆಗಳ ಒತ್ತಾಯ ಹೆಚ್ಚಾಗುತ್ತಿರುವ ಬೆನ್ನಲ್ಲೇ ಈ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಸ್ಪಷ್ಟಪಡಿಸಿದ್ದಾರೆ. ನಿಷೇಧಿಸಿದರೆ ಅವರು ಬೇರೆ ಹೆಸರಿನ ಸಂಘಟನೆ ಕಟ್ಟಿಕೊಳ್ಳುವ ಸಾಧ್ಯತೆ ಇದೆ. 

ಹೀಗಾಗಿ ಅವರ ಕಾರ್ಯ ಚಟುವಟಿಕೆ ಬಗ್ಗೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಡಿಪಿಐ ನಿಷೇಧಿಸುವುದಾದರೆ ಆ ಕೆಲಸವನ್ನು ಕೇಂದ್ರ ಮಾಡಬೇಕು. ಕೆಲವು ರಾಜ್ಯಗಳು ತಾವೇ ಮುಂದಾಗಿ ನಿಷೇಧಿಸಿವೆಯಾದರೂ ಕರ್ನಾಟಕದಲ್ಲಿ ನಿಷೇಧಿಸುವ ಪ್ರಸ್ತಾಪ ಇಲ್ಲ. ಅವರ ಕಾರ್ಯ ಚಟುವಟಿಕೆಯ ವರದಿಯನ್ನು ನಿರಂತರವಾಗಿ ಕೇಂದ್ರಕ್ಕೆ ಸಲ್ಲಿಸುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಉತ್ತಮವಾಗಿದೆ. ಶಿವಮೊಗ್ಗ, ಆಳಂದ ಘಟನೆ ಹೊರತುಪಡಿಸಿದರೆ ಬೇರೆಲ್ಲೂ ಇಂತಹ ಘಟನೆ ನಡೆದಿಲ್ಲ. ಶಿವಮೊಗ್ಗದಲ್ಲಿ ಕೊಲೆ ನಡೆಸಿದ ವ್ಯಕ್ತಿಗಳನ್ನು ತ್ವರಿತವಾಗಿ ಬಂಧಿಸಿ ಅವರ ಹೆಡೆಮುರಿ ಕಟ್ಟಿದ್ದೇವೆ ಎಂದರು. ಇನ್ನು ಕೆಲವು ಪ್ರಕರಣಗಳಲ್ಲಿ ಅಮಾಯಕ ಹಿಂದೂಗಳ ಮೇಲೆ ಪ್ರಕರಣಗಳಾಗಿವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ವಾಸ್ತವ ತಿಳಿಸಿಕೊಡುವ ಕಾರ್ಯ ಆಗುತ್ತಿದೆ ಎಂದು ಹೇಳಿದರು.

Noise Pollution: ಜಾಗಟೆ, ಗಂಟೆ, ಶಂಖದ ಶಬ್ದ ಮಾಲಿನ್ಯ ಅಲ್ಲ: ಸಚಿವ ಆರಗ

ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು: ಶಾಲೆಯಲ್ಲಿ ಸಮವಸ್ತ್ರ ಕಡ್ಡಾಯವಾಗಿ ಪಾಲನೆ ಸಂಬಂಧ ಕೆಲ ಶಾಸಕರು ಭೇಟಿಯಾಗಿ ಮನವಿ ಪತ್ರವನ್ನ ಕೊಟ್ಟಿದ್ದಾರೆ. ಸಮವಸ್ತ್ರ ಅಂದರೆ ಅದು ಸಮಾನತೆ, ಸಂಸ್ಕಾರ ತುಂಬುವ ಕೆಲಸ ಆಗಬೇಕಿದೆ. ಮತ್ತೊಮ್ಮೆ ನಮ್ಮ ಧರ್ಮ, ಜಾತಿ ಒಂದೇ ಅಂತ ತೋರಿಸಬೇಕು. ಕೋರ್ಟ್ ಆದೇಶದ ಪ್ರಕಾರ ಎಲ್ಲರೂ ನಡೆದುಕೊಳ್ಳಬೇಕು ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.  ನಗರದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಕಾಲೇಜುಗಳಲ್ಲಿ ಇನ್ನೂ ಹಿಜಾಬ್ (Hijab) ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. 

ಗೊಂದಲ ಸೃಷ್ಟಿಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೆಲವನ್ನ ಈಗಾಗಲೇ ಅರೆಸ್ಟ್ ಮಾಡಲಾಗಿದೆ. ಕಣ್ಣಿನಿಂದ ನೋಡಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ. ಅತಿರೇಕಕ್ಕೆ ಹೋದರೇ ಕೈಕಟ್ಟಿ ಕೂಡಲು ಆಗಲ್ಲ. ಇದರ ಹಿಂದೆ ಮತಾಂಧ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ. ಮತಾಂಧ ಶಕ್ತಿಗಳು ಮಕ್ಕಳಲ್ಲಿ ವಿಷಬೀಜ ಬಿತ್ತುತ್ತಿವೆ. ವಿವಾದ (Controversy) ಸೃಷ್ಟಿಸುವ ಸಂಘಟನೆಗಳನ್ನ ನಿರ್ಜೀವ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕೋರ್ಟಿನ ಮದ್ಯಂತರ ಆದೇಶವನ್ನ ಸರ್ಕಾರ ಪಾಲನೆ ಮಾಡುತ್ತಿದೆ ಅಂತ ಹೇಳಿದ್ದಾರೆ. 

Karnataka Politics: ಹೀಗೇ ಮಾಡಿದರೆ ಕಾಂಗ್ರೆಸ್‌ ಅರಬ್ಬಿ ಸಮುದ್ರಕ್ಕೆ: ಅರಗ

ಸಚಿವ ಈಶ್ವರಪ್ಪ (KS Eshwarappa) ವಿರುದ್ಧ ಕಾಂಗ್ರೆಸ್ (Congress) ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಆರಗ ಜ್ಞಾನೇಂದ್ರ, ಈಶ್ವರಪ್ಪ ಯಾವ ಶಬ್ದ ಹೇಳಿದ್ದಾರೆ ಅನ್ನೋದು ಪೂರ್ತಿ ಪ್ರಸಾರ ಮಾಡಬೇಕು. ಈಶ್ವರಪ್ಪ ಹೇಳಿದ್ರಲ್ಲಿ ತಪ್ಪಿಲ್ಲ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಕೆಂಪು ಕೋಟೆ ಮೇಲೆ ಕೇಸರಿ ಧ್ವಜ (Saffron Flag) ಹಾರಿಸುವುದಾಗಿ ಈಶ್ವರಪ್ಪ ಅವರು ಹೇಳಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಈಶ್ವರಪ್ಪ, ಮುಂದೊಂದು ದಿನ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಸಂದರ್ಭ ಬರಬಹುದು ಅಂದಿದ್ದಾರೆ ಅಷ್ಟೇ ಅಂತ ಹೇಳಿದ್ದಾರೆ. 

ಮುಳುಗುವವಗೆ ಹುಲ್ಲು ಕಡ್ಡಿ ಆಧಾರ ಎನ್ನುವ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದನ್ನ ಬಿಟ್ಟು ಕಾಂಗ್ರೆಸ್ ಕಾಲಹರಣ ಮಾಡುತ್ತಿದೆ. ಒಂದು ಸುಳ್ಳನ್ನ ನೂರು ಬಾರಿ ಹೇಳಿದ್ರೆ ಅದು ಸತ್ಯವಾಗೋದಿಲ್ಲ ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!